Advertisement
ಸಭೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ಕುರುಬೂರು ಶಾಂತಕುಮಾರ್ , ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ , ಬೆಳಗಾವಿ, ಅಥಣಿ, ಬಾಗಲಕೋಟೆ ಭಾಗದ ಕಬ್ಬು ಬೆಳಗಾರರು, ಬೆಳಗಾವಿ ಭಾಗದ ಶಾಸಕರು ಹಾಜರಾಗಿದ್ದಾರೆ.
ಸಕ್ಕರೆ ಸಚಿವ ಕೆ.ಜೆ.ಜಾರ್ಜ್ ಮತ್ತು ಅಧಿಕಾರಿಗಳೊಂದಿಗೆ ಪ್ರತ್ಯೇಕ ಚರ್ಚೆ ನಡೆಸಿ ವಿವರಗಳನ್ನು ಪಡೆದಿದ್ದಾರೆ.
Related Articles
ಸಕ್ಕರೆ ಕಾರ್ಖಾನೆ ಮಾಲೀಕರು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಮತ್ತು ರೈತರಿಗೆ ವಂಚಿಸುತ್ತಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Advertisement
38 ಕೋಟಿ ರೂಪಾಯಿ ಮಾತ್ರ ಬಾಕಿ ?ಕಬ್ಬಿನ ಕಾರ್ಖಾನೆಗಳು ಒಟ್ಟು ರೈತರಿಗೆ 38 ಕೋಟಿ ರೂಪಾಯಿ ಹಣ ಬಾಕಿ ನೀಡಲು ಇದೆ ಎಂದು ಸರ್ಕಾರ ಹೇಳಿದರೆ, 100 ಕೋಟಿಗೂ ಹೆಚ್ಚು ಹಣ ನೀಡಲು ಬಾಕಿ ಇದೆ ಎಂದು ರೈತ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ. ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ, ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿ, ರೈತರ ಸಂಪೂರ್ಣ ಸಾಲ ಸೇರಿ ಸುಮಾರು 30 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ.