Advertisement

ರಾಜ್ಯದಲ್ಲಿ ಪ್ರವಾಹ ಭೀತಿ : ಜಿಲ್ಲಾಧಿಕಾರಿಗಳೇ ಸರ್ವ ಸನ್ನದ್ದರಾಗಿ ಎಂದು ಸಿಎಂ ಕರೆ

07:04 PM Jul 23, 2021 | Team Udayavani |

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಹೆಚ್ಚು ಮಳೆ ಪೀಡಿತ  ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಪ್ರವಾಹ ಪೀಡಿತ ಗ್ರಾಮಗಳ ಗ್ರಾಮಸ್ಥರನ್ನು ಶೀಘ್ರವೇ ತೆರುವುಗೊಳಿಸಿ, ಸುರಕ್ಷಿತ ಸ್ಥಳಗಳಿಗೆ ಕಳುಹಿಸಲು ಸೂಚಿಸಿದರು.

Advertisement

ಪ್ರವಾಹ ಉಂಟಾಗುವ ಸಾಧ್ಯತೆ ಇರುವ ಗ್ರಾಮಗಳನ್ನು ಸಹ ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸಲು ಸೂಚಿಸಿದರು.  ಎನ್ ಡಿಅರ್ ಎಫ್ ಮತ್ತು ಎಸ್ ಡಿ ಆರ್ ಎಫ್  ತಂಡಗಳನ್ನು ಅಗತ್ಯ ಇರುವ ಜಿಲ್ಲೆಗಳಿಗೆ ತುರ್ತು ಕಳುಹಿಸಲು ಸೂಚಿಸಲಾಯಿತು

ಕಾಳಜಿ ಕೇಂದ್ರಗಳನ್ನು  ಆದಷ್ಟು ಹೆಚ್ಚು ತೆರದು ಸರ್ವ ಸನ್ನದ್ದವಾಗಿಟ್ಟುಕೊಳ್ಳಲು ಸೂಚಿಸಲಾಯಿತು.  ಅಧಿಕಾರಿಗಳು ರಜೆ ಹಾಕದೆ ಕೆಲಸ‌ ಮಾಡಲು ಸೂಚಿಸಲಾಯಿತು. ಹಣಕಾಸಿನ‌ ನೆರವು ಅಗತ್ಯವಿದ್ದಲ್ಲಿ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಇನ್ನು ಸೇನಾ ಹೆಲಿಕಾಪ್ಟರ್ ಗಳನ್ನು‌ ಸನ್ನದ್ದವಾಗಿಟ್ಟುಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು. ಅಧಿಕಾರಿಗಳು 24 ಗಂಟೆ ಎಚ್ಚರಿಕೆಯಿಂದ‌ ಕೆಲಸ‌ ಮಾಡಬೇಕು. ಮುಂದಿನ‌ 48 ಗಂಟೆ ಏನು ಅಗುತ್ತೆ ಅನ್ನೋದನ್ನ ಊಹೆ ಮಾಡಿ ಕೆಲಸ‌ ಮಾಡುವಂತೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿ ಗಳಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next