ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದ ಪೊಲೀಸ್ಉ ಪಾಧೀಕ್ಷಕರ ಕಛೇರಿಯಲ್ಲಿ ಮುಖ್ಯಪೋಲಿಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ವಿ.ನಾರಾಯಣಸ್ವಾಮಿ ಅವರಿಗೆ 2020ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ.
05-10-1994 ರಂದು ಕೋಲಾರ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ನಾಗರೀಕ ಪೆÇಲೀಸ್ ಕಾನ್‍ಸ್ಟೆಬಲ್ ಆಗಿ ಆಯ್ಕೆಗೊಂಡು ಕೋಲಾರ ಜಿಲ್ಲೆಯ ಟಮಕಾ ಪೊಲೀಸ್ ತರಬೇತಿ ಶಾಲೆಯಲ್ಲಿ ಒಂಬತ್ತು ತಿಂಗಳುಗಳ ಕಾಲ ಬುನಾದಿ ತರಬೇತಿಯನ್ನು ಪೂರೈಸಿ ನಂತರ 1995ನೇ ಸಾಲಿನಿಂದ 2003 ರ ಮಾರ್ಚ್ ಮಾಹೆಯವರೆಗೂ ಜಿಲ್ಲೆಯ ಬಾಗೇಪಲ್ಲಿ ಪೊಲೀಸ್ ವೃತ್ತ ನಿರೀಕ್ಷಕರವರ ಕಛೇರಿಯಲ್ಲಿ ತನಿಖಾ ಸಹಾಯಕರಾಗಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ.
ನಂತರ ಚಿಕ್ಕಬಳ್ಳಾಪುರ ಪೊಲೀಸ್ ಉಪಾಧೀಕ್ಷಕರವರ ಕಛೇರಿಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು 2003 ರಿಂದ ಈವರೆಗೂ ಕಛೇರಿಯಲ್ಲಿ ತನಿಖಾ ಸಹಾಯಕ /ಬರಹಗಾರರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಸುಮಾರು 26 ವರ್ಷಗಳ ಕಾಲ ಕಛೇರಿಯಲ್ಲಿ ತನಿಖಾ ಸಹಾಯಕ/ಬರಹಗಾರರಾಗಿ ಸೇವೆಯನ್ನು ಸಲ್ಲಿಸಿ ಈ ಹಿಂದೆ ಬಾಗೇಪಲ್ಲಿ ವೃತ್ತ ನಿರೀಕ್ಷಕರವರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಬಾಗೇಪಲ್ಲಿ ಮತ್ತು ಗಡಿಭಾಗದ ಗ್ರಾಮಗಳಲ್ಲಿ ಹಲವಾರು ದರೋಡೆ ಮತ್ತು ಸುಲಿಗೆ ಪ್ರಕರಣಗಳು
ಭೇದಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ ಇವರ ಸೇವೆಯನ್ನು ಗುರುತಿಸಿ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆ ಮಾಡಿದೆ.
ಚಿಕ್ಕಬಳ್ಳಾಪುರ ಪೋಲಿಸ್ ಉಪಾಧೀಕ್ಷಕರ ಕಚೇರಿಯಲ್ಲಿ ಸಿಹೆಚ್‍ಸಿ ಆಗಿ ಸೇವೆ ಸಲ್ಲಿಸುತ್ತಿರುವ ವಿ.ನಾರಾಯಣಸ್ವಾಮಿ ಅವರಿಗೆ 2020ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪುರಸ್ಕೃತರಾಗಿದ್ದು ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೋಲಿಸ್ ಘಟಕದ ವತಿಯಿಂದ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇವೆ.-
ಜಿಕೆ ಮಿಥುನ್ಕುಮಾರ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚಿಕ್ಕಬಳ್ಳಾಪುರ
ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿಗಳ ಪದಕ ಬಂದಿರುವುದು ಸಂತೋಷವಾಗಿದೆ ನಮ್ಮ ಜಿಲ್ಲಾ ಎಸ್ಪಿ ಸಾಹೇಬ್ರು ಮತ್ತು ಡಿವೈಎಸ್ಪಿ ಸಾಹೇಬ್ರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. –
ವಿ.ನಾರಾಯಣಸ್ವಾಮಿ ಮುಖ್ಯಮಂತ್ರಿಗಳ ಪದಕ ಪುರಸ್ಕೃತರು.