Advertisement

West Bengal: ಬಾಂಗ್ಲಾ ಜೊತೆ ನೀರು ಹಂಚಿಕೆ ಮಾತುಕತೆಗೆ ಸಿಎಂ ಮಮತಾ ಆಕ್ಷೇಪ

08:20 PM Jun 24, 2024 | Team Udayavani |

ನವದೆಹಲಿ: ಇತ್ತೀಚೆಗೆ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ನೀರು ಹಂಚಿಕೆ ಕುರಿತ ಮಾತುಕತೆಗೆ ಪಶ್ಟಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಆಕ್ಷೇಪಿಸಿದ್ದಾರೆ.
ಬಾಂಗ್ಲಾದೇಶದ ನಡುವಿನ ನೀರು ಹಂಚಿಕೆಯ ಮಾತುಕತೆಯಲ್ಲಿ ಭಾಗವಹಿಸಲು ಪಶ್ಚಿಮ ಬಂಗಾಳವನ್ನು ಆಹ್ವಾನಿಸಲಾಗಿಲ್ಲ. “ ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ಮತ್ತು ಅಭಿಪ್ರಾಯ ಪಡೆಯದೇ ಇಂತಹ ಏಕಪಕ್ಷೀಯ ಚರ್ಚೆಗಳು ಮತ್ತು ನಿರ್ಧಾರ  ಸ್ವೀಕಾರಾರ್ಹ ಅಲ್ಲ  ಎಂದು ಮಮತಾ ಹೇಳಿದರು. ಇತ್ತೀಚೆಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ದೆಹಲಿಗೆ ಭೇಟಿ ನೀಡಿದಾಗ ಗಂಗಾ ಮತ್ತು ತೀಸ್ತಾ ಜಲ ಹಂಚಿಕೆ ಕುರಿತು ಚರ್ಚೆ ನಡೆಸಲಾಗಿತ್ತು.

Advertisement

“2026ರಲ್ಲಿ ಮುಕ್ತಾಯಗೊಳ್ಳುತ್ತಿರುವ ಭಾರತ ಬಾಂಗ್ಲಾದೇಶ ಫರಕ್ಕಾ ಒಪ್ಪಂದವನ್ನು (1996) ಭಾರತ ಸರ್ಕಾರವು ನವೀಕರಿಸುವ ಪ್ರಕ್ರಿಯೆಯಲ್ಲಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಇದು ಭಾರತ -ಬಾಂಗ್ಲಾ ನಡುವಿನ ನೀರಿನ ಹಂಚಿಕೆಯನ್ನು ವಿವರಿಸುವ ಒಪ್ಪಂದವಾಗಿದೆ. ಬಾಂಗ್ಲಾದೇಶ ಮತ್ತು ಭಾರತ, ನಿಮಗೆ ತಿಳಿದಿರುವಂತೆ, ಪಶ್ಚಿಮ ಬಂಗಾಳದ ಜನರಿಗೆ ದೊಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ” ಎಂದು ಮಮತಾ ಬ್ಯಾನರ್ಜಿ ಬರೆದಿದ್ದಾರೆ. ಬಂಗಾಳದ ಜನರು, ಅಂತಹ ಒಪ್ಪಂದಗಳಿಂದ  ಸಂಕಷ್ಟ ಅನುಭವಿಸುತ್ತಾರೆ ಎಂದು  ಮಮತಾ ಹೇಳಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯವು ಈ ಹಿಂದೆ ಹಲವಾರು ವಿಷಯಗಳಲ್ಲಿ ಬಾಂಗ್ಲಾದೇಶದೊಂದಿಗೆ ಸಹಕರಿಸಿದೆ ಎಂದ ಮಮತಾ ಭಾರತ ಬಾಂಗ್ಲಾದೇಶ ಎನ್‌ಕ್ಲೇವ್‌ಗಳು, ಇಂಡೋ ಬಾಂಗ್ಲಾದೇಶ ರೈಲು ಮಾರ್ಗ ಮತ್ತು ಬಸ್ ಸೇವೆಗಳ ವಿನಿಮಯವನ್ನು  ಉಲ್ಲೇಖಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next