ಬೆಂಗಳೂರು: ಹುಣಸೋಡು ದುರ್ಘಟನೆ ಕುರಿತು ಮಾಹಿತಿ ನೀಡಿದ ಸಿಎಂ ಬಿಎಸ್ ವೈ, ಶಿವಮೊಗ್ಗ ಪ್ರವಾಸ ಮಾಡುತ್ತೇನೆ. ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತೇನೆ. ಅಕ್ರಮ ಗಣಿಗಾರಿಕೆಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.
ಯಾರಾದರೂ ಗಣಿಗಾರಿಕೆ ಮಾಡುತ್ತೇವೆ ಅಂದರೆ ಲೈಸೆನ್ಸ್ ಇರಬೇಕು. ಈಗಾಗಲೇ ಸಂಸದರು, ಜಿಲ್ಲಾಧಿಕಾರಿ, ಗಣಿ ಸಚಿವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಘಟನೆಯ ಕುರಿತು ಮಾಹಿತಿ ತಿಳಿದು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ.
ಅಕ್ರಮ ಗಣಿಗಾರಿಕೆ ತಡೆಯೋಕೆ ಕ್ರಮ ವಹಿಸಲಾಗುವುದು. ಈ ಸ್ಫೋಟಕ್ಕೆ ಕಾರಣವೇನು ? ಲಾರಿಯಲ್ಲಿ ಜೆಲೆಟಿನ್ ಕಡ್ಡಿ ಮತ್ತು ಡೈನಮೈಟ್‍ಗಳನ್ನು ತರಲು ಅನುಮತಿ ನಿಡಿದವರಾರು ? ಹೇಗೆ ಘಟನೆ ನಡೆಯಿತು ? ಎನ್ನುವುದನ್ನು ಪರಿಶೀಲನೆ ನಡೆಸಲಾಗುವುದು. ಸಮಗ್ರ ತನಿಖೆ ನಡೆಸಿ, ಸಂಬಂಧಪಟ್ಟ ತಪ್ಪಿತಸ್ಥರ ವಿರುದ್ಧ ಸೂಕ್ತವಾದ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಕೋವಿಡ್ ರೂಪಾಂತರಿ ವೈರಸ್ ಹೆಚ್ಚು ಅಪಾಯಕಾರಿ: ಬೋರಿಸ್ ಜಾನ್ಸನ್
ಅಕ್ರಮವಾದ ಗಣಿಗಾರಿಕೆಗೆ ನಾನು ಅವಕಾಶ ಕೊಡಲ್ಲ. ಎಲ್ಲಾದರೂ ಗಣಿಗಾರಿಕೆ ಮಾಡುವುದಾದರೆ ಲೈಸೆನ್ಸ್ ಪಡೆದು ಮಾಡಬೇಕಾಗುತ್ತದೆ. ಅಕ್ರಮ ಗಣಿಗಾರಿಕೆಯಿಂದ ಇಂತಹ ಅನಾಹುತ ಸಂಭವಿಸುತ್ತದೆ. ಅಕ್ರಮ ಗಣಿಗಾರಿಕೆಗಳನ್ನ ಬಿಗಿ ಮಾಡೋಕೆ ಕ್ರಮ ವಹಿಸಲಾಗುವುದು. 24*7 ಗಣಿಗಾರಿಕೆಗೆ ಅವಕಾಶ ನೀಡುವ ವಿಚಾರದ ಕುರಿತು ಪರಿಶೀಲಿಸುತ್ತೇನೆ ಎಂದರು.
ಪರಾಕ್ರಮ ದಿನ:
ಇನ್ಮುಂದೆ ಪ್ರತಿವರ್ಷ ಜನವರಿ 23 ರಂದು ಪರಾಕ್ರಮ ದಿನ ಎಂದು ಆಚರಿಸಲಾಗುತ್ತದೆ. ರಕ್ತ ಕೊಡಿ, ಸ್ವಾತಂತ್ರ್ಯ ಕೊಡ್ತೀನಿ ಎಂದು ಯುವಕರನ್ನ ನೇತಾಜಿ ಸಂಘಟಿಸಿದರು. ಯುವಕರಲ್ಲಿ ಅವರ ಬದುಕಿನ ಬಗ್ಗೆ ಅರಿವು ಮೂಡಿಸುವ ಹೊಣೆ ನಮ್ಮೆಲ್ಲರ ಮೇಲೆ ಇದೆ ಎಂದು ಸುಭಾಶ್ ಚಂದ್ರ ಬೋಸ್ ಜನ್ಮದಿನದ ಪ್ರಯುಕ್ತ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ವೀರ ಹನುಮಂತನ ಚಿತ್ರದ ಜತೆ ಟ್ವೀಟ್… ಪ್ರಧಾನಿ ಮೋದಿಗೆ ಬ್ರೆಜಿಲ್ ಅಧ್ಯಕ್ಷ ಜೈರ್ ಧನ್ಯವಾದ