Advertisement
ದೊಡ್ಡ ಮಟ್ಟದ ಸ್ಫೋಟ ಸಂಭವಿಸುವ ಮೊದಲು ಮಧ್ಯಮ ಪ್ರಮಾಣದ ಶಬ್ದ ಕೇಳಿ ಬಂದಿದ್ದು ಅದರ ಹಿನ್ನೆಲೆಯಲ್ಲಿ ತನಿಖೆ ಸಾಗಿದೆ. ಸ್ಫೋಟಕ ತುಂಬಿದ್ದ ಲಾರಿಯಿಂದ ಜಿಲೆಟಿನ್, ಅಮೋನಿಯಂ ನೈಟ್ರೇಟ್, ಡಿಟೋನೇಟರ್‌ಗಳನ್ನು ಬೊಲೆರೋ ವಾಹನಕ್ಕೆ ಸಾಗಿಸುವಾಗ ಕಾರ್ಮಿಕರ ನಿರ್ಲಕ್ಷéದಿಂದ ಈ ಘಟನೆ ಸಂಭವಿಸಿರಬಹುದು. ಅಮೋನಿಯಂ ನೈಟ್ರೇಟ್ ಬ್ಯಾಗ್‌ಗಳನ್ನು ಇಡುವ ಬದಲು ಎತ್ತಿ ಜೋರಾಗಿ ಒಗೆದರೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.
Related Articles
ನ್ಪೋಟದ ಸ್ಥಳಕ್ಕೆ ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಇಲ್ಲ. ಇದು ಪರಿಸರ ಸೂಕ್ಷ್ಮ ವಲಯ. ಕ್ರಷರ್‌ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.š
Advertisement
ಇನ್ನು, ಶುಕ್ರವಾರ ಬೆಳಗ್ಗೆ ಕಲ್ಲಗಂಗೂರಿನ ಕ್ವಾರಿಗೆ ಭೇಟಿ ನೀಡಿದ್ದ ಸಚಿವ ಕೆ.ಎಸ್. ಈಶ್ವರಪ್ಪ, ಇಲ್ಲಿ ನಡೆಯುತ್ತಿರುವ ಕಲ್ಲು ಕ್ವಾರಿ ಅಕ್ರಮವಲ್ಲ, ಸಕ್ರಮ. ಆದರೆ ಇದು ಅಕ್ರಮವೋ, ಸಕ್ರಮವೋ ಪ್ರಶ್ನೆ ಬೇರೆ. ಸ್ಪೊಟ ಆಗಬೇಕಾ ಎಂದು ಪ್ರಶ್ನಿಸಿದ್ದರು. ಸಿಎಂ ಮತ್ತು ಸಚಿವರ ಹೇಳಿಕೆಯಲ್ಲಿನ ಭಿನ್ನತೆ ಜನರನ್ನು ಗೊಂದಲಕ್ಕೀಡು ಮಾಡಿದೆ. ಜಲ್ಲಿ ಕ್ರಷರ್ ಹೆಸರಿನಲ್ಲಿ ಲೈಸೆನ್ಸ್ ಪಡೆದು ಕ್ವಾರಿ ನಡೆಸುತ್ತಿರುವುದು ಈಗ ಬಹಿರಂಗವಾಗಿದೆ. ಈ ಭಾಗದಲ್ಲಿ ನೂರಾರು ಅಡಿ ಆಳದ ಕ್ವಾರಿಗಳಿದ್ದು ದನಕರುಗಳು, ಮನುಷ್ಯರು ಬಿದ್ದು ಮೃತಪಟ್ಟಿದ್ದಾರೆ. ಪರಿಸರ ಸೂಕ್ಷ್ಮ ವಲಯದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಕೊಟ್ಟವರು ಯಾರು? ಅಧಿಕಾರಿಗಳಿಗೆ ಎಲ್ಲ ತಿಳಿದೂ ಸುಮ್ಮನಿದ್ದರೆಎಂಬುದು ಈಗ ಯಕ್ಷ ಪ್ರಶ್ನೆಯಾಗಿದೆ.
ಓದಿ : ಗರ್ಭಧರಿಸಿದ್ದ ಹಸುವಿನ ಜೀವ ಉಳಿಸಿದ ವೈದ್ಯರಿಗೆ ಗ್ರಾಮಸ್ಥರಿಂದ ಮೆಚ್ಚುಗೆ