ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿರುವ ಸಿ.ಎಂ ಇಬ್ರಾಹಿಂ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ವಿಧಾನಸಭೆಯಲ್ಲಿ ಮುಖಾಮುಖಿಯಾದರು.
ಸಿಎಂ ಇಬ್ರಾಹಿಂರನ್ನು ನೋಡುತ್ತಿದ್ದಂತೆ ನಿಂತು ಮಾತನ್ನಾಡಿಸಿದ ಸಿದ್ದರಾಮಯ್ಯ, “ಮಾ.31ರಂದು ಮನೆಗೆ ಬರುತ್ತೇನೆ ಸುಮ್ಮನಿರು” ಎಂದರು. ಅದಕ್ಕೆ ಇಬ್ರಾಹಿಂ, “ಯಾವಾಗ ಹೇಳಿದ್ರಿ ನೀವು?” ಎಂದು ಪ್ರಶ್ನಿಸಿದರು. ‘ಬಾಷಾಗೆ ಹೇಳಿದ್ದೇನೆ.. ಮನೆಗೆ ಬರುತ್ತೇನೆ ಅಂತಾ ಹೇಳಿದ್ದೇನೆ ಇರೋ” ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ:ಪಂಚರಾಜ್ಯ ಸೋಲಿಗೆ ಕೇವಲ ‘ಗಾಂಧಿ ಕುಟುಂಬ’ ಹೊಣೆಯಲ್ಲ…: ಮಲ್ಲಿಕಾರ್ಜುನ ಖರ್ಗೆ
“ಲೇ ಇರೋ.. ಆತುರ ಮಾಡಬೇಡ, ಸುಮ್ಮನೆ ಇರು.. ಹೇಳಿದಷ್ಟು ಕೇಳು” ಎಂದ ಸಿದ್ದರಾಮಯ್ಯ ಕೋಪದಲ್ಲೇ ತೆರಳಿದರು.
ಕಾಂಗ್ರೆಸ್ ಪಕ್ಷಕ್ಕೆ ಮತ್ತು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಸಿ.ಎಂ ಇಬ್ರಾಹಿಂ ಹೇಳಿದ್ದರು. ಸಿದ್ದರಾಮಯ್ಯನವರಿಗೂ ಪತ್ರ ಕಳುಹಿಸಿದ್ದೇನೆ ಎಂದಿದ್ದರು. ಆದರೆ ಇಬ್ರಾಹಿಂರಿಂದ ಯಾವುದೇ ಪತ್ರ ಬಂದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.