Advertisement
ಮಡಿಕೇರಿಯ ಇಬ್ಬನಿ ರೆಸಾರ್ಟ್‌ನಲ್ಲಿ ತಂಗಿದ್ದ ಸಿಎಂ ಕುಮಾರಸ್ವಾಮಿ ಅವರು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಗುರೂಜಿ ನಿವಾಸಕ್ಕೆ ಬಂದು 1 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇಗುಲದಚಿನ್ನದ ರಥಕ್ಕೆ ಸರ್ಕಾರದ ಹಣ ಬಳಕೆ ಮಾಡಬೇಡಿ, ಬದಲಾಗಿ ಭಕ್ತರಿಂದ ದೇಣಿಗೆ ಮೂಲಕ ಪಡೆದು ರಥ ನಿರ್ಮಿಸಿ ಎಂದು ದ್ವಾರಕನಾಥ್ ಗುರೂಜಿ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಚಿನ್ನದ ರಥ ಅರ್ಪಣೆಗೆ ಸಂಬಂಧಪಟ್ಟಂತೆ 80 ಕೋಟಿ ರೂ.ಪರಿಷ್ಕೃತ ಅಂದಾಜು ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರಒಪ್ಪಿಗೆ ನೀಡಿದೆ.
Related Articles
ಸಿಎಂ ಎಚ್‌ಡಿಕೆ ಅವರು ಗುರೂಜಿ ಭೇಟಿಯಾಗುವ ವೇಳೆ ಮಾಧ್ಯಮ ಪ್ರತಿನಿಧಿಗಳನ್ನು ಪೊಲೀಸರು ತಡೆದಿದ್ದಾರೆ. ಈ ಬಗ್ಗೆ ದ್ವಾರಕನಾಥ್ ಗುರೂಜಿ ಸಿಎಂ ನಿರ್ಗಮನದ ಬಳಿಕ ಸುದ್ದಿಗೋಷ್ಠಿ ನಡೆಸಿ ಕ್ಷಮಾಪಣೆ ಕೇಳಿದ್ದಾರೆ. ನಿಮ್ಮನ್ನು ಧಿಕ್ಕರಿಸಬೇಕೆಂದು ಇರಲಿಲ್ಲ ಎಂದರು. ನಮ್ಮ ಕೈಯಲ್ಲಿ ಆದಷ್ಟು ಮಾರ್ಗದರ್ಶನ ಮಾಡುವವರು ನಾವು ಎಂದು ಗುರೂಜಿ ಹೇಳಿದರು.
Advertisement