ಬೆಂಗಳೂರು: ಪದವಿ ಕಾಲೇಜುಗಳಲ್ಲಿ ಹಿಜಾಬ್ ಗೆ ನಿರ್ಬಂಧವಿಲ್ಲ ಎಂದು ಸಚಿವ ಅಶ್ವಥ ನಾರಾಯಣ ಹೇಳಿದ್ದಾರೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಕೂಡಾ ಸ್ಪಷ್ಟಪಡಿಸಿದ್ದಾರೆ ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದರು.
ಸಿಎಂ ನಿವಾಸದ ಬಳಿ ಮಾತನಾಡಿದ ಅವರು, ಇವತ್ತು ಡಿಗ್ರಿ ಕಾಲೇಜುಗಳಲ್ಲೂ ಹಿಜಾಬ್ ಗೆ ಅವಕಾಶ ಕೊಡಬೇಕು. ಈ ಬಗ್ಗೆ ಅಶ್ವಥ ನಾರಾಯಣ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಕೆಲವು ಕಾಲೇಜುಗಳು, ಕೆಲವು ವಿವಿಗಳಲ್ಲಿ ಗೊಂದಲ ಆಗಲಿದೆ. ಈ ಬಗ್ಗೆ ಸಿಎಂ ಜತೆ ಚರ್ಚೆ ನಡೆಸಿದ್ದೇನೆ. ಅವರು ಕೂಡಾ ಡಿಗ್ರಿ ಕಾಲೇಜುಗಳಲ್ಲಿ ನಿರ್ಬಂಧವಿಲ್ಲ ಎಂದಿದ್ದಾರೆ ಎಂದರು.
ಈ ಬಗ್ಗೆ ಡಿಗ್ರಿ ಕಾಲೇಜುಗಳು, ವಿವಿಗಳು ಗೊಂದಲ ಮೂಡಿಸಿಕೊಳ್ಳೋದು ಬೇಡ. ಗೊಂದಲವಿದ್ದರೆ ಉನ್ನತ ಶಿಕ್ಷಣ ಸಚಿವರ ಜತೆ ಚರ್ಚಿಸಲಿ ಎಂದು ಯು.ಟಿ.ಖಾದರ್ ಹೇಳಿದರು.
ಇದನ್ನೂ ಓದಿ:ಹಿಜಾಬ್ ಧರಿಸಿ ತರಗತಿಗೆ ಹಾಜರಾದ ವಿದ್ಯಾರ್ಥಿನಿಯರು: ಒತ್ತಡಕ್ಕೆ ಸಿಲುಕಿದ ಶಿಕ್ಷಕರು
ಪದವಿ ಕಾಲೇಜು ಆರಂಭವಾಗುತ್ತಿದ್ದು, ಸಮವಸ್ತ್ರ ನಿಯಮ ಇರುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಅದನ್ನು ಪಾಲಿಸಬೇಕು. ಸಮವಸ್ತ್ರ ನಿಗದಿ ಮಾಡದಿರುವಲ್ಲಿ ನ್ಯಾಯಾಲಯದ ತೀರ್ಪಿನ ಅನುಸಾರ ಉಡುಪು ಧರಿಸಿ ಬರಬೇಕು ಎಂದು ಮಂಗಳವಾರ ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದರು.