Advertisement

ಅಗ್ನಿಶಾಮಕ ಠಾಣಾಧಿಕಾರಿ ರಾಜುಗೆ ಸಿಎಂ ಚಿನ್ನದ ಪದಕ

09:27 PM Jul 14, 2021 | Team Udayavani |

ಕುಷ್ಟಗಿ: ತಾಲೂಕಿನಲ್ಲಿ ಬಂಡರಗಲ್‌ ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋದ ಯುವಕನ ರಕ್ಷಣೆಗೆ ಜೀವದ ಹಂಗು ತೊರೆದು ಕರ್ತವ್ಯ ಪ್ರಜ್ಞೆ ಮೆರೆದ ಕುಷ್ಟಗಿಯ ಅಗ್ನಿಶಾಮಕ ಠಾಣಾಧಿಕಾರಿ ಎನ್‌. ರಾಜು ಅವರು ಮುಖ್ಯಮಂತ್ರಿ ಪದಕ ಪುರಸ್ಕೃತರಾಗಿದ್ದಾರೆ.

Advertisement

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೇಟ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿನ ಅತ್ಯುತ್ತಮ ಸೇವೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ಎನ್‌. ರಾಜು ಅವರಿಗೆ ಪದಕ ಪ್ರದಾನ ಮಾಡಿದರು.

ಕುಷ್ಟಗಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿಯಾಗಿ ಸೇವೆಯಲ್ಲಿದ್ದಾರೆ. ಕಳೆದ 2020, ಅಕ್ಟೋಬರ್‌ 2013ರಂದು ಮಧ್ಯರಾತ್ರಿ ತಾಲೂಕಿನ ಬಂಡರಗಲ್‌-ಹೂಲಗೇರ ಮಧ್ಯೆ ಹರಿಯುವ ಹಳ್ಳದ ಪ್ರವಾಹದಲ್ಲಿ ಯುವಕ ಕೊಚ್ಚಿ ಹೋಗಿ ಸಿಕ್ಕಿಹಾಕಿಕೊಂಡಿದ್ದ. ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ತಮ್ಮ ಜೀವ ಲೆಕ್ಕಿಸದೇ ಯುವಕನ ಜೀವ ರಕ್ಷಣೆ ಮಾಡಿದ್ದರು. ಅಗ್ನಿ ಅವಘಡ ಪ್ರಕರಣಗಳಲ್ಲಿ ಕೆರೆಯಲ್ಲಿ ಮುಳುಗಿದವರ ಪತ್ತೆಗಾಗಿ ಮುಂಚೂಣಿಯಾಗಿ ಸೇವೆ ಸಲ್ಲಿಸಿದ್ದರಲ್ಲದೇ ಅಗ್ನಿಶಾಮಕ ಠಾಣೆಯ ಉದ್ಯಾನವನದ ಹಸಿರೀಕರಣ ಸೇರಿದಂತೆ ಅಗ್ನಿ ವಿಪತ್ತುಗಳ ಬಗ್ಗೆ ಸಾರ್ವಜನಿಕರಿಗೆ ಶಾಲೆ, ಕಾಲೇಜುಗಳಲ್ಲಿ ಜಾಗೃತಿಯ ಹಲವು ಸೇವೆಯಿಂದ ಗಮನಾರ್ಹರಾದ ಎನ್‌. ರಾಜು ಅವರು, ಕುಷ್ಟಗಿ ಅಗ್ನಿಶಾಮಕ ಠಾಣೆಯ ಮುಖ್ಯಮಂತ್ರಿ ಪದಕ ಪಡೆದ ಮೊದಲಿಗರು ಎನ್ನುವ ಹೆಮ್ಮೆಗೆ ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next