ಮುಂಬಯಿ: ಮುಂದಿನ ವಿಧಾನಸಭೆ ಚುನಾವಣೆ ಸಿದ್ಧತೆಯಲ್ಲಿ ಮುಖ್ಯಮಂತ್ರಿ ಫಡ್ನವೀಸ್ ಅವರು ತೊಡಗಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರಗಳಲ್ಲಿ ಬಿಜೆಪಿಗೆ ಕಡಿಮೆ ಮತಗಳು ದೊರೆತಿವೆ ಅಂತಹ ಕ್ಷೇತ್ರದಲ್ಲಿ ಬಿಜೆಪಿ ಹೆಚ್ಚಿನ ಗಮನ ಹರಿಸುವ ಯೋಜನೆ ಮಾಡಿಕೊಂಡಿದೆ. ಈ ಯೋಚನೆಯ ಶುಭಾರಂಭ ಗುರುವಾರ ಮುಂಬಯಿಯ ಮುಂಬಾದೇವಿ ಪರಿಸರದಲ್ಲಿ ನಡೆಸಲಾಯಿತು.
ಲೋಕಸಭೆ ಚುನಾವಣೆಯಲ್ಲಿ ಮುಂ ಬಾದೇವಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದೇವ್ರಾ ಅವರು ಹೆಚ್ಚು ಮತಗಳಿಸಿದ್ದರು. ಆದ್ದರಿಂದ ಈ ಕ್ಷೇತ್ರದಲ್ಲಿ ಸಿಎಂ ಫಡ್ನವೀಸ್ ಅವರ ನೇತೃತ್ವದಲ್ಲಿ ಬಿಜೆಪಿಯ ಜನಸಂಪರ್ಕ ಕಾರ್ಯಕ್ರಮದ ಶುಭಾರಂಭ ನಡೆಸಲಾಯಿತು. ಲೋಕಸಭೆ ಚುನಾವಣೆಯಲ್ಲಿ ಯಾವ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಯ ಮೈತ್ರಿಗೆ ಕಡಿಮೆ ಮತಗಳು ದೊರೆತಿವೆಯೋ ಅಂತಹ ಕ್ಷೇತ್ರಗಳಲ್ಲಿ ಬಿಜೆಪಿಯ ಗಮನ ಹರಿಸಿದೆ.
ಮುಂಬಾದೇವಿ ಪರಿಸರದಲ್ಲಿ ಬಿಜೆಪಿಯ ನಗರ ಸೇವಕ ಅತುಲ್ ಶಾ ಅವರು ಜನಸಂಪರ್ಕ ಕಾರ್ಯಕ್ರಮದಲ್ಲಿ ಸಹಬಾಗಿ ಯಾದರು. ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿರಿಸಿ ಬಿಜೆಪಿಯು ಜನಸಂಪರ್ಕ ಕಾರ್ಯಕ್ರಮ ಆರಂಭಿಸಿದೆ. ಇದರಿಂದ ಮತದಾರರ ಸಂಪರ್ಕಿಸುವ ಪ್ರಯತ್ನ ನಡೆಸಲಿದೆ.
ಶಿವಸೇನೆ ಹಾಗೂ ಬಿಜೆಪಿಯು ಸ್ಪರ್ಧಿಸುವ ಕ್ಷೇತ್ರಗಳು ಯಾವುದು ಎಂದು ನಿರ್ಧರಿಸಲಾಗಿದೆ. ಆದ್ದರಿಂದ ಇನ್ನು ಕೇವಲ ಮಿತ್ರಪಕ್ಷಗಳಿಗೆ ಎಷ್ಟು ಸೀಟು ಯಾರಿಗೆ ನೀಡಲಿದೆ ಎನ್ನುವುದು ಕಾಯಬೇಕಾಗಿದೆ. ಮಹಾಮೈತ್ರಿಯಲ್ಲಿ ರಾಮದಾಸ್ ಅಠವಲೆ ಅವರ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ, ಮಹಾದೇವ್ ಜಾನ್ಕರ್ ಅವರ ರಾಷ್ಟ್ರೀಯ ಸಮಾಜ ಪಕ್ಷ, ವಿನಾಯಕ್ ಮೆಟೇ ಅವರ ಶಿವಸಂಗ್ರಾಮ ಪಕ್ಷ ಹಾಗೂ ಸದಾಭಾವು ಖೋತೆ ಅವರ ರಯತ್ ಕ್ರಾಂತಿ ಸಂಘಟನೆಯು ಸೇರಿವೆ
ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ – ಶಿವಸೇನೆ ಹಾಗೂ ಮಿತ್ರಗಳು ಮಹಾಮೈತ್ರಿಯ ಫಾರ್ಮುಲ ನಡೆಸಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಪ್ರತ್ಯೇಕ 135 ಸೀಟುಗಳಲ್ಲಿ ಸ್ಪರ್ಧಿಸಲಿವೆ. ಅದೇ ಮಿತ್ರ ಪಕ್ಷಗಳಿಗೆ 18 ಸ್ಥಾನಗಳನ್ನು ನೀಡಲಾಗಿದೆ ಎಂದು ಚಂದ್ರಕಾಂತ್ ಪಾಟೀಲ್ ಮೈತ್ರಿಯ ಫಾರ್ಮುಲ ಹೇಳಿದ್ದಾರೆ.