Advertisement

CM, ಡಿಸಿಎಂ ಇಂದು ದಿಲ್ಲಿಗೆ: ಡಿಸಿಎಂ ಹೇಳಿಕೆ ಕೊನೆಯಾದೀತೇ?

12:09 AM Jun 27, 2024 | Team Udayavani |

ಬೆಂಗಳೂರು: ಸಮುದಾಯವಾರು ಡಿಸಿಎಂ ಹುದ್ದೆ ಚರ್ಚೆ “ಕೈ’ ಪಾಳಯದಲ್ಲಿ ಸಂಚಲನ ಉಂಟು ಮಾಡಿರುವ ಸಂದರ್ಭದಲ್ಲೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಗುರುವಾರ (ಜೂ. 27) ದಿಲ್ಲಿಗೆ ತೆರಳಲಿದ್ದಾರೆ.

Advertisement

ಈ ವೇಳೆ ಪಕ್ಷದ, ಸರಕಾರದ ಆಂತರಿಕ ವಿಷಯಗಳ ಪ್ರಸ್ತಾವವಾಗಲಿದೆ ಎನ್ನಲಾಗಿದೆ. ಈ ಭೇಟಿಯ ಅನಂತರವಾದರೂ ಪಕ್ಷದಲ್ಲಿನ ಬಣಗಳ ಬೇಗುದಿ ಕೊನೆಗೊಳ್ಳಲಿದೆಯೇ? ಹೈಕಮಾಂಡ್‌ನಿಂದ ಈ ಬಗ್ಗೆ ಖಡಕ್‌ ಸಂದೇಶ ರವಾನೆಯಾಗಲಿದೆಯೇ ಎಂಬ ತೀವ್ರ ಕುತೂಹಲ ಮೂಡಿದೆ.

ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಡಿಸಿಎಂ ಗದ್ದಲ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಜತೆಗೆ ಕೆಪಿಸಿಸಿಗೆ ಹೊಸ ಸಾರಥಿ ಬೇಕೆಂಬ ಕೂಗು ಎದ್ದಿದೆ. ಈ ಬಗ್ಗೆ ಸ್ವತಃ ಸಿಎಂ ಮತ್ತು ಡಿಸಿಎಂ ಕೂಡ ಬುಧವಾರ ಮೌನಮುರಿದಿದ್ದು, ಹೈಕಮಾಂಡ್‌ನ‌ತ್ತ ಬೊಟ್ಟು ಮಾಡಿದ್ದಾರೆ. ಇದರ ಜತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅವ್ಯವಹಾರಕ್ಕೆ ಸಚಿವರ ತಲೆದಂಡ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಂಪುಟ ಪುನಾರಚನೆ ಆಗಬೇಕೇ ಅಥವಾ ವಿಸ್ತರಣೆ, ಚನ್ನಪಟ್ಟಣ ಸೇರಿ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ನಿಗಮ-ಮಂಡಳಿಗಳಲ್ಲಿ ಸಚಿವರ ಹಸ್ತಕ್ಷೇಪ ಸೇರಿದಂತೆ ಹಲವು ವಿಚಾರಗಳು ಈ ಭೇಟಿಯಲ್ಲಿ ಮುನ್ನೆಲೆಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಕುರಿತ ವಿವಾದದ ಅಲೆ ಎದ್ದಿದೆ. ಇದಕ್ಕೆ ಕಾರಣ ಏನು? ಇದರ ಹಿಂದಿರುವ ಉದ್ದೇಶಗಳೇನು? ಈ ವಿಚಾರದಿಂದ ಮತ್ತಷ್ಟು ಢಾಳಾಗಿರುವ ಬಣ ರಾಜಕೀಯ ಹಾಗೂ ಅದರ ಪರಿಣಾಮಗಳ ಕುರಿತು ಸ್ವತಃ ರಾಜ್ಯದವರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಾಷ್ಟ್ರೀಯ ನಾಯಕರು ಜಾಲಾಡಲಿದ್ದಾರೆ ಎನ್ನಲಾಗಿದೆ.

ಬೇಕಾಬಿಟ್ಟಿ ಹೇಳಿಕೆಗೆ
ವರಿಷ್ಠರ “ಕ್ಲಾಸ್‌’?
ಡಿಸಿಎಂ ವಿವಾದದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಎರಡೂ ಬಣಗಳು ಹೇಳಿಕೆ ನೀಡುತ್ತಿವೆ. ಕೆಲವು ನಾಯಕರು ತಮ್ಮ ಸಮುದಾಯಗಳಿಗೇ ನೀಡಬೇಕು ಎಂಬ ಒತ್ತಡವನ್ನೂ ತರುತ್ತಿದ್ದಾರೆ. ಇದು ಬೇರೆ ಬೇರೆ ರೀತಿ ತಿರುವು ಪಡೆದುಕೊಳ್ಳುತ್ತಿದೆ. ಉಪ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದು ಬೀರಬಹುದಾದ ಪರಿಣಾಮಗಳ ಬಗ್ಗೆಯೂವರಿಷ್ಠರು ರಾಜ್ಯ ನಾಯಕರ ಜತೆ ಚರ್ಚೆ ನಡೆಸಲಿ ದ್ದಾರೆ. ಹೈಕಮಾಂಡ್‌ ಸೂಚನೆ ಬಳಿಕವೂ ಕೆಲವು ನಾಯಕರ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದೂ ಇದೆ. ಅವರಿಗೆ ವರಿಷ್ಠರು ಕ್ಲಾಸ್‌ ತೆಗೆದುಕೊಳ್ಳುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next