Advertisement

CM Change Issue; ಹೈಕಮಾಂಡ್ ನಿಯಮಗಳನ್ನು ಪಾಲಿಸುತ್ತೇವೆ.. ಮಧು ಬಂಗಾರಪ್ಪ ಪ್ರತಿಕ್ರಿಯೆ

01:31 PM Jun 29, 2024 | keerthan |

ಶಿವಮೊಗ್ಗ: ರಾಜ್ಯದಲ್ಲಿ ಕೆಲ ದಿನಗಳಿಂದ ಚರ್ಚೆಯಲ್ಲಿರುವ ಸಿಎಂ, ಡಿಸಿಎಂ ಬದಲಾವಣೆ ವಿಚಾರಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದು, ಹೈ ಕಮಾಂಡ್ ನಿಯಮಗಳನ್ನು ಪಾಲಿಸುತ್ತೇವೆ. ಬೇರೆ ಏನೂ ಹೇಳಲಾರೆ ಎಂದಿದ್ದಾರೆ.

Advertisement

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಜನ ಸ್ಪಂದನಾ ಕಾರ್ಯಕ್ರಮ ಚೆನ್ನಾಗಿ ನಡೆದಿದೆ. ಶಿವಮೊಗ್ಗ ಸಿಟಿ ಸಮಸ್ಯೆ ಜಾಸ್ತಿಯಿತ್ತು. ಅಧಿಕಾರಿಗಳು ಜನರ ಸಮಸ್ಯೆ ಬಗೆಹರಿಸುವಂತೆ ತಿಳಿಸಲಾಗಿದೆ ಎಂದರು.

ಎಮ್ಮೆಹಟ್ಟಿ ಗ್ರಾಮದಲ್ಲಿ ನಡೆದ ಸಾವಿನ ಬಗ್ಗೆ ಬಹಳ ನೋವಾಗಿದೆ. ಕೆಡಿಪಿ ಸಭೆ ಮುಗಿದ ಮೇಲೆ ಹೋಗಿ ಬರುತ್ತೇನೆ. ನಮ್ಮ ಕಡೆಯಿಂದ ಆಗುವ ಸಹಕಾರ ಮಾಡುತ್ತೇವೆ. ಪರಿಹಾರ ಜಾಸ್ತಿ ಮಾಡುವ ಕುರಿತು ಮಾತಾಡುತ್ತೇವೆ. ಕುಟುಂಬದ ಪರವಾಗಿ ಸರ್ಕಾರ ಇರುತ್ತದೆ. ಈ ತರಹದ ಘಟನೆಗಳು ಆಗಬಾರದು ಎಂದರು.

ಬೆಲೆ ಏರಿಕೆ ಕುರಿತು ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರಿಗೆ ಪ್ರತಿಭಟನೆ ಮಾಡುವ ಹಕ್ಕು ಅವರಿಗಿದೆಯಾ ಎಂದರು.

ಅನಧಿಕೃತ ಶಾಲೆಗಳು ಇರುವುದು ಗಮನಕ್ಕೆ ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ. ಸೇಫ್ಟಿ ವಿಚಾರದಲ್ಲಿ ಪ್ರತಿವರ್ಷ ರಿನಿವಲ್ ಮಾಡಿಕೊಳ್ಳಬೇಕು. ವಿದ್ಯುತ್, ನೀರು ಶಾಲೆಗಳಿಗೆ ಉಚಿತ ನೀಡಿದ್ದೇವೆ. ಇದಕ್ಕಾಗಿ 28 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ ಎಂದರು.

Advertisement

ಡಿಸಿಸಿ ಬ್ಯಾಂಕ್ ಚುನಾವಣೆ ಒಗ್ಗಟಿನಿಂದ ಮಾಡಿದ್ದಾರೆ. 11 ಸ್ಥಾನ ಗೆದ್ದಿದ್ದಾರೆ ಸಹಕಾರಿ ಬ್ಯಾಂಕ್ ಜನರಿಗೆ ಸಹಕಾರ ಮಾಡಲಿ. ಡಿಸಿಸಿ ಬ್ಯಾಂಕ್ ನೇ‌ಮಕಾತಿ ಹಗರಣ ನಡೆದಿದ್ದರೆ ಸರ್ಕಾರ ತನಿಖೆ ಮಾಡುತ್ತದೆ ಎಂದು ಮಧು ಬಂಗಾರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next