Advertisement

ಆರ್ಥಿಕ ಕುಸಿತದ ನಡುವೆಯೂ ಬಜೆಟ್ ಗಾತ್ರ ಕಳೆದ ಬಾರಿಗಿಂತ ಹೆಚ್ಚಿರಲಿದೆ :ಸಿಎಂ

10:12 PM Mar 05, 2021 | Team Udayavani |

ಬೆಂಗಳೂರು: ಕೊರೊನಾ ಆರ್ಥಿಕ ಕುಸಿತದ ನಡುವೆಯೂ ಈ ಬಾರಿ ಕಳೆದ ಬಾರಿಗಿಂತ ಬಕೆಟ್ ಗಾತ್ರ ಹೆಚ್ಚಾಗಿರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

Advertisement

ಶುಕ್ರವಾರ ಪತ್ರಕರ್ತರ ಜೊತೆ ಅನೌಪಚಾರಿಕ ಚರ್ಚೆ ನಡೆಸಿದ ಅವರು, ಬಜೆಟ್ ಸಿದ್ದತೆ ಪೂರ್ಣವಾಗಿದೆ, ನಾಳೆಯಿಂದ ಬಜೆಟ್ ಪ್ರತಿ ಮುದ್ರಣವಾಗಲಿದೆ.

ಹಣಕಾಸು ಸ್ಥಿತಿ‌ ಸುಧಾರಣೆಯಾಗಿದೆ, ಉತ್ತಮ ಬಜೆಟ್ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಎಲ್ಲಾ ಇಲಾಖೆ ಜೊತೆ ಸಾಕಷ್ಟು ಚರ್ಚೆ ಆದ ಮೇಲೆ, ಈ ಬಾರಿ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಿದ್ದು, ಪ್ರವಾಸೋದ್ಯಮಕ್ಕೆ ಒತ್ತು ಕೊಡಲು ಯೋಚಿಸಿ ಒಂದು ರೂಪಕ್ಕೆ ಬಜೆಟ್ ರೂಪಿಸಲಾಗಿದೆ. ಎಲ್ಲರ ಸಲಹೆ ಪಡೆದು ನಮ್ಮ ಹಣಕಾಸು ಇತಿಮಿತಿಯಲ್ಲಿ ಏನೇನು ಸಾಧ್ಯವೋ ಅಷ್ಟು ಮಾಡಿದ್ದೇನೆ ಎಂದು ಹೇಳಿದರು.

ಕೊರೊನಾ ಕಾರಣದಿಂದ ಆರೇಳು ತಿಂಗಳು ತೆರಿಗೆ ಸಂಗ್ರಹ ಕುಸಿತವಾಯಿತು, ಐದಾರು ಸಾವಿರ ಕೋಟಿ ಕೊರೊನಾಗೆ ಖರ್ಚಾಯಿತು, ಆದರೂ, ಕಳೆದ ಬಕೆಟ್ ಗಿಂತಲೂ ಉತ್ತಮ ಬಜೆಟ್ ಕೊಡುವ ಪ್ರಯತ್ನ ಮಾಡಿದ್ದೇನೆ ಹೆಚ್ಚು ಸಾಲ ಪಡೆಯಲು ಕೇಂದ್ರ ಅವಕಾಶ ನೀಡಿದ್ದು ಅದನ್ನು ಬಳಸಿಕೊಂಡು ಬಜೆಟ್ ಗಾತ್ರ ಹೆಚ್ಚಿಸುತ್ತಿದ್ದೇನೆ. ಪ್ರತಿ ಜಿಲ್ಲೆಗೆ ಎರಡಾದರೂ ವಿಶೇಷ  ಕಾರ್ಯಕ್ರಮ ಕೊಡುವ ಮೂಲಕ 31 ಜಿಲ್ಲೆಗೂ ಆಧ್ಯತೆ ನೀಡಲಿದ್ದೇವೆ. ಈ ಬಾರಿ ಮಹಿಳೆಯರಿಗೆ ಹೆಚ್ಚಿನ ಆಧ್ಯತೆ ಮತ್ತು ಅಷ್ಟೇ ಆಧ್ಯತೆ ಕೃಷಿ ಕ್ಷೇತ್ರ ಮತ್ತು ರೈತರಿಗೆ ಕೊಡಲಿದ್ದು ನೀರಾವರಿ ಕ್ಷೇತ್ರಕ್ಕೂ ಆಧ್ಯತೆ ನೀಡಿದ್ದೇನೆ ಎಂದರು.

Advertisement

ಇದನ್ನೂ ಓದಿ :ರೈಲು ನಿಲ್ದಾಣಗಳಲ್ಲಿ ವೈಫೈಗೆ ಪ್ರಿಪೇಯ್ಡ್ ಪ್ಲಾನ್‌: ವೇಗದಲ್ಲಿ ವೈಫೈ ಪಡೆಯಲು ಶುಲ್ಕ ನಿಗದಿ

ಏಳೆಂಟು ತಿಂಗಳಲ್ಲಿ ಬೆಂಗಳೂರು‌ ಚಿತ್ರಣ ಬದಲಾಗಲಿದೆ, ಅದಕ್ಕೆ ಪೂರಕ ಕಾರ್ಯಕ್ರಮ‌ ಬಜೆಟ್ ನಲ್ಲಿ ರೂಪಿಸಿದ್ದೇವೆ.. ರಾಜಕಾಲುವೆ, ರಸ್ತೆ ಸೇರಿ ಎಲ್ಲದಕ್ಕೂ ಆಧ್ಯತೆ ನೀಡಿದ್ದೇನೆ. ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿ ಕ್ರಮ ಕೈಗೊಂಡು ವಿಶೇಷ ಕಾರ್ಯಕ್ರಮಗಳ ಘೋಷಣೆ ಮಾಡುತ್ತೇನೆ ಎಂದರು.

ಕಳೆದ ಬಾರಿಗಿಂತ ಒಳ್ಳೆಯ ಬಜೆಟ್ ಮಂಡಿಸಲಿದ್ದು, ಜನ ಈಗಾಗಲೇ ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಇತ್ಯಾದಿಂದ ಹೈರಾಣಾಗಿದ್ದಾರೆ ಹಾಗಾಗಿ ರಾಜ್ಯದಿಂದ ನಮ್ಮ ಜನರಿಗೆ ಹೊಸ ತೆರಿಗೆ ಇರುವುದಿಲ್ಲ ಎಂದರು.

ಹಿಂದಿನ ಯಾವುದೇ ಕಾರ್ಯಕ್ರಮ ನಿಲ್ಲಿಸುವುದಿಲ್ಲ,ಆಧ್ಯತೆ ಮೇಲೆ ಹಣಕಾಸು ಲಭ್ಯತೆ ನೋಡಿಕೊಂಡು ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದರು.

ಪೆಟ್ರೋಲ್ ಮೇಲಿನ ಸೆಸ್ ಕಡಿಮೆ ಮಾಡುವ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇಲ್ಲ ಹಾಗಾಗಿ ಸೆಸ್ ಕಡಿಮೆ ಮಾಡಲ್ಲ, ಏನೇ ಮಾಡುವುದಿದ್ದರೂ ಕೇಂದ್ರ ಸರ್ಕಾರವೇ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next