Advertisement
ಎಲ್ಲವೂ ಅಂದುಕೊಂಡಂತೆ ನಡೆದರೆ 6 ಮಂದಿ ಸಂಕ್ರ ಮಣದ ವೇಳೆಗೆ ಸಚಿವರಾಗಲಿದ್ದಾರೆ ಎನ್ನಲಾಗಿದೆ. ಅಧಿವೇಶನ ಮುಗಿದ ಬಳಿಕ ಜ. 2 ಅಥವಾ 3ರಂದು ಮುಖ್ಯಮಂತ್ರಿ ದಿಲ್ಲಿಗೆ ಹೋಗುವ ನಿರೀಕ್ಷೆಯಿತ್ತು. ಈಗ ದಿಢೀರ್ ಬುಲಾವ್ ಬಂದಿರುವ ಹಿನ್ನೆಲೆಯಲ್ಲಿ ತುರ್ತಾಗಿ ದಿಲ್ಲಿಗೆ ತೆರಳುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
ಸಂಪುಟ ವಿಸ್ತರಣೆ ಹಾಗೂ ವಿಧಾನಸಭಾ ಚುನಾವಣೆಗೆ ರಾಜ್ಯಕ್ಕೆ ಕೇಂದ್ರ ಪ್ರಭಾರಿಗಳು ಹಾಗೂ ರಾಜ್ಯದ ಚುನಾವಣ ಉಸ್ತುವಾರಿ ನೇಮಕ ಕುರಿತೂ ಚರ್ಚಿಸಲಿದ್ದಾರೆ ಎನ್ನಲಾಗಿದೆ. ವಿಸ್ತರಣೆಯೋ, ಸೇರ್ಪಡೆಯೋ?
ಸಂಪುಟ ವಿಸ್ತರಣೆ ಮಾಡಬೇಕಾ ಅಥವಾ ಹಿರಿಯ ಸಚಿವರನ್ನು ಕೈಬಿಟ್ಟು ಹೊಸಬರನ್ನು ಸೇರಿಸಿ ಕೊಳ್ಳಬೇಕಾ? ಮುಂದಿನ ಚುನಾವಣೆ ದೃಷ್ಟಿಯಿಂದ ಯಾವುದು ಉತ್ತಮ ಮುಂತಾದ ಲೆಕ್ಕಾ ಚಾರ ಹಾಕಿ ಕೊಂಡು ಆಕಾಂಕ್ಷಿಗಳ ಪಟ್ಟಿಯೊಂದಿಗೆ ಸಿಎಂ ತೆರಳುತ್ತಿದ್ದಾರೆ. ಅಮಿತ್ ಶಾ ಹಾಗೂ ಜೆ.ಪಿ. ನಡ್ಡಾ ಜತೆಗೆ ಸಮಾ ಲೋಚಿಸಿದ ಬಳಿಕ ಸ್ಪಷ್ಟತೆ ಸಿಗಲಿದೆ. ಏನೇ ಇದ್ದರೂ ಅಂತಿಮ ತೀರ್ಮಾನವನ್ನು ವರಿಷ್ಠರು ತೆಗೆದು ಕೊಳ್ಳ ಲಿದ್ದಾರೆ. ಕೆ.ಎಸ್. ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಜತೆಗೆ ಇನ್ನೂ ನಾಲ್ವರು ಸಂಪುಟ ಸೇರಲಿದ್ದಾರೆ ಎಂದು ಮೂಲಗಳು ಹೇಳಿವೆ.