ಹುಬ್ಬಳ್ಳಿ: ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ವಿಮಾನ ನಿಲ್ದಾಣ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂಡಲಗಾ ಜೈಲ್ ನಿಂದ ಕರೆ ಬಂದ ಹಿನ್ನೆಲೆಯಲ್ಲಿ ಇಡೀ ಪ್ರಕರಣವನ್ನು ಸೂಕ್ತ ತನಿಖೆ ಮಾಡಲಾಗುವುದು. ಅವರಿಗೆ ಯಾರು ಮಾರ್ಗದರ್ಶನ ನೀಡಿದ್ದಾರೆ? ಯಾಕೆ ಮಾಡಿದ್ದಾರೆ? ಅವರ ಹಿನ್ನೆಲೆ ಏನು ಎಲ್ಲವನ್ನೂ ಸಂಪೂರ್ಣವಾಗಿ ತನಿಖೆ ನಡೆಸಲಾಗುತ್ತಿದೆ ಎಂದರು.
‘ನಾ ನಾಯಕಿ’ ಪ್ರಿಯಾಂಕ ವಾದ್ರಾ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾ ನಾಯಕಿ ಎಂದು ಸ್ವಯಂ ಘೋಷಣೆಯೇ ನನಗೆ ತಿಳಿಯದಾಗಿದೆ. ನಾ ನಾಯಕಿ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದ್ದು ವಿಪರ್ಯಾಸ. ಅವರನ್ನು ನಾಯಕಿ ಮಾಡಲು ಕರ್ನಾಟಕದ ಮಹಿಳೆಯರು ಸಿದ್ಧರಿಲ್ಲ ಎಂದರು.
ಕಾಂಗ್ರೆಸ್ ನವರಿಗೆ ಅಧಿಕಾರ ಸಿಕ್ಕರೆ ತಾನೇ ಪ್ರತ್ಯೇಕ ಮಹಿಳಾ ಬಜೆಟ್ ಘೋಷಿಸಲು ಸಾಧ್ಯ ಎಂದು ಕುಟುಕಿದರು.
Related Articles
ಕೀಳು ಮಟ್ಟದ ಮಾತು: ಯುವಜನೋತ್ಸವಕ್ಕೆ ವಿನಾಶದ ಉತ್ಸವ ಎಂಬ ಕಾಂಗ್ರೆಸ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಗೆ ವಿನಾಶದ ಕಾಲ ಬಂದಿದ್ದು, ಹೀಗಾಗಿ ಅವರಿಗೆ ಅಂತಹ ಆಲೋಚನೆಗಳು ಬರುತ್ತವೆ. ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡಬೇಕು ಎಂಬುದು ಇಲ್ಲ. ಯಥಾ ಬುದ್ಧಿ ತಥಾ ಮಾತು ಎಂಬಂತಾಗಿದೆ. ಅವರದು ಎಲ್ಲದರಲ್ಲೂ ವಿನಾಶ ಕಾಣುತ್ತಿದೆ. ಅವರ ಭಾಷೆ, ನಡವಳಿಕೆ, ಚಿಂತನೆ ವಿನಾಶದತ್ತ ಸಾಗುತ್ತಿದೆ ಎಂದರು.
ಧಾರವಾಡದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವು ಐತಿಹಾಸಿಕವಾಗಿದೆ ಎಂದರು.