Advertisement

ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ; ಹಿಂದೆ ನಿಂತು ಪ್ರಚೋದನೆ ನೀಡುವವರಿಗೆ ಸಿಎಂ ಎಚ್ಚರಿಕೆ

01:36 PM Apr 12, 2022 | Team Udayavani |

ಮಂಗಳೂರು: ರಾಜ್ಯದಲ್ಲಿ ಯಾವುದೇ ಧರ್ಮ ಯುದ್ಧ ನಡೆಯುತ್ತಿಲ್ಲ. ಸಂಘಟನೆಗಳು ಪ್ರಚೋದನಕಾರಿ ಮಾತನಾಡುವುದು ವಿಚಾರ ಅಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಕಾನೂನು ಕೈಗೆತ್ತಿಕೊಂಡರೆ ನಾವು ಕೂಡಲೇ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕೆಲವರು ಹಿನ್ನೆಲೆಯಿಂದ ಪ್ರಚೋದನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ನಾನು ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಗಮನಿಸಲು ಹೇಳಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಇವತ್ತು ಮಂಗಳೂರಿನಲ್ಲಿ ಬಿಜೆಪಿ ವಿಭಾಗೀಯ ಸರಣಿ ಸಭೆಗಳಿವೆ. ಜಿಲ್ಲಾವಾರು ಸಭೆಗಳು ಮತ್ತು ನಾಯಕರ ಸಭೆಗಳಿವೆ. ಚುನಾವಣಾ ತಯಾರಿ ಹಿನ್ನೆಲೆ ವಿಭಾಗ ಮಟ್ಟದ ಸಭೆಗಳನ್ನು ‌ಮಾಡುತ್ತಿದ್ದೇವೆ. ಎ.16 ಮತ್ತು 17 ರಾಜ್ಯ ಕಾರ್ಯಾಕಾರಿಣಿ ಸಭೆ ಮಾಡಿ ಪಕ್ಷದ ಚರ್ಚೆ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಮೇಕೆದಾಟು ಪ್ರಾರಂಭವಾದ ತಕ್ಷಣ ಕುಮಾರಸ್ವಾಮಿ ಜಲಯಾತ್ರೆ ಮಾಡುತ್ತಿದ್ದಾರೆ. ಇದರ ಬಗ್ಗೆ ನಾನು ಯಾವುದೇ ಹೇಳಿಕೆ ಕೊಡುವ ಅಗತ್ಯ ಇಲ್ಲ. ಈಶ್ವರಪ್ಪ ವಿರುದ್ದ ಆರೋಪ ಮಾಡಿದವ ನಾಪತ್ತೆಯಾದ ಬಗ್ಗೆ ಮಾಹಿತಿ ಇಲ್ಲ. ಅದರ ಬಗ್ಗೆ ವಿಚಾರಿಸುತ್ತೇನೆ, ನಿಮ್ಮ ಹತ್ರ ಮಾಹಿತಿ ಇದ್ರೆ ನನಗೆ ಕೊಡಿ, ವಿಚಾರಿಸುತ್ತೇನೆ ಎಂದರು.

ಇದನ್ನೂ ಓದಿ:ಸಿಎಂ ಬೊಮ್ಮಾಯಿ ಭೇಟಿಯಾದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್

ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಯಾವುದೇ ರೀತಿಯಲ್ಲಿ ಕಾನೂನು ಕೈಗೆತ್ತಿಕೊಂಡರೆ ನಾವು ಕೂಡಲೇ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನಾನು ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಗಮನಿಸಲು ಹೇಳಿದ್ದೇನೆ. ಡಿಜಿಪಿ ನಿನ್ನೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಾತನಾಡಿದ್ದಾರೆ. ಕಾನೂನು ಸುವ್ಯವಸ್ಥೆ ಮತ್ತು ಕಾನೂನು ರಕ್ಷಣೆ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ನಾವು ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದರು.

Advertisement

ಧಾರವಾಡ, ಶಿವಮೊಗ್ಗ, ಕೋಲಾರ ಎಲ್ಲಾ ಕಡೆ  ಕಾನೂನು ಕ್ರಮ ಆಗಿದೆ. ಈ ವಿಚಾರದಲ್ಲಿ ಕುಮಾರಸ್ವಾಮಿ ಅನಿಸಿಕೆ ಬೇರೆಯಿರಬಹುದು. ಮೊದಲು ಅವರ ಸರ್ಕಾರದಲ್ಲಿ ಏನು ಮಾಡಿದ್ದಾರೆ ಅಂತ ಆತ್ಮಾವಲೋಕನ ಮಾಡಲಿ ಎಂದು ಟಾಂಗ್ ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next