Advertisement

ಲಿಂಗಾಯತ ಸಮಾಜ ಒಡೆದ ಕಾಂಗ್ರೆಸ್ ನಿಂದ ಈಗ ಮೊಸಳೆ ಕಣ್ಣೀರು: ಸಿಎಂ ಬೊಮ್ಮಾಯಿ

03:20 PM Apr 20, 2023 | Team Udayavani |

ಬೀದರ್: ರಾಜ್ಯದಲ್ಲಿ ಐವತ್ತು ವರ್ಷಗಳಿಂದ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡದ ಮತ್ತು ಲಿಂಗಾಯತ ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದ ಕಾಂಗ್ರೆಸ್ ಈಗ ಮೊಸಳೆ‌ ಕಣ್ಣಿರು ಹಾಕುತ್ತಿದೆ. ಬಿಜೆಪಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಕಾಂಗ್ರೆಸ್ಸಿಗರಿಗೆ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಭಾಲ್ಕಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಲಿಂಗಾಯತರಿಗೆ ಅತಿ ಹೆಚ್ಚು ಸೀಟ್ ಗಳನ್ನು ನೀಡಿದೆ.‌ ಕಾಂಗ್ರೆಸ್ ನಲ್ಲಿ ನಿಜಲಿಂಗಪ್ಪ ಅವರ ನಂತರ 50 ವರ್ಷದಿಂದ‌ ಲಿಂಗಾಯತರು ಸಿಎಂ‌ ಆಗಲಿಲ್ಲ.‌ ವಿರೇಂದ್ರ ಪಾಟೀಲ ಅವರನ್ನು 9 ತಿಂಗಳಲ್ಲೇ ಹೀನಾಯವಾಗಿ‌ ಅಧಿಕಾರದಿಂದ ಕೆಳಗಿಳಿಸಲಾಗಿದ್ದು, ಎಲ್ಲವೂ‌ ಜನರ ಮನಸ್ಸಿನಲ್ಲಿದೆ‌ ಎಂದರು.

ಲಿಂಗಾಯತ ಸಮುದಾಯ ಅಷ್ಟೇ ಅಲ್ಲ, ಎಲ್ಲ ಸಮಾಜಗಳನ್ನು ಒಡೆಯಲು ಕಾಂಗ್ರೆಸ್ ರಿಪೋರ್ಟ್ ತಯ್ಯಾರಿಸಿತ್ತು.‌ ಆದರೆ, ಬಿಜೆಪಿ‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲವೂ ನಿಲ್ಲಿಸಲಾಯಿತು.‌ ಬಿಜೆಪಿ‌ ಎಂದಿಗೂ ಸಮಾಜವನ್ನು‌ ಜೋಡಿಸುವ ಕೆಲಸ‌ ಮಾಡುತ್ತದೆ. ಎಲ್ಲ ಸಮಾಜಗಳಿಗೆ ಯಾವಾಗ ಯಾವಾಗ ನಾಯಕತ್ವ ಕೊಟ್ಟಿದೆ ಎಂಬುದು ಸಮಾಜದ ಜನರಿಗೆ ಗೊತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next