Advertisement
ಮಂಗಳವಾರ ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆಯ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷ್ಣಾ ನ್ಯಾಯಾಧೀಕರಣ ಅಂತಿಮ ತೀರ್ಪು ಹೊರ ಬಿದ್ದ ಬಳಿಕದ ಕಾನೂನು ಹೋರಾಟದ ತಾಂತ್ರಿಕ ಸಮಸ್ಯೆ ಇದೀಗ ಹಂತ ಹಂತವಾಗಿ ನಿವಾರಣೆಯಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಎರಡು-ಮೂರು ತಿಂಗಳಲ್ಲಿ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Related Articles
Advertisement
ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನದ ವಿಷಯದಲ್ಲಿ ಅಖಂಡ ವಿಜಯಪುರ ಜಿಲ್ಲೆಯ ಜನರ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಈ ನೆಲದ ಹಿಂದಿನವರು ತಮ್ಮ ಭವಿಷ್ಯವನ್ನೇ ತ್ಯಾಗ ಮಾಡಿದ್ದರಿಂದ ರಾಜ್ಯ ನಂದನವನವಾಗಿದೆ. ಹೀಗಾಗಿ ಈ ನೆಲದ ಜನತೆಯ ತ್ಯಾಗ ಸದಾ ಸ್ಮರಣೀಯ ಎಂದರು.
ಆದರೆ ವಿಜಯಪುರ ಜಿಲ್ಲೆ ನೀರಾವರಿ ಸೌಲಭ್ಯದಿಂದ ವಂಚಿತವಾಗಿದ್ದು, ಬರದ ನಾಡು ಎಂಬ ಅಪಕೀರ್ತಿಯ ಹಣೆಪಟ್ಟಿ ಕಟ್ಟಿಕೊಂಡಿದೆ. ಈ ಅಪಕೀರ್ತಿ ತೊಡೆದು ಹಾಕಿ, ಬರದ ನಾಡಿಗೆ ಜಲದ ನಾಡು ಎಂಬ ಅಭಿದಾನ ತಂದುಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲು ಬದ್ಧತೆ ತೋರುತ್ತೇನೆ ಎಂದರು.
ರಾಜ್ಯದಲ್ಲೇ ಕೆರೆಗೆ ತುಂಬುವ ಯೋಜನೆ ಅನುಷ್ಠಾನವನ್ನು 110 ಕೋಟಿ ರೂ. ಅನುದಾನ ನೀಡಿ, ವಿಜಯಪುರ ಜಿಲ್ಲೆಯಿಂದ ಯೋಜನೆ ಆರಂಭಿಸಿದ್ದು ನಾನು. ಆದರೆ ನೀರಾವರಿ ವಿಷಯದಲ್ಲಿ ಕೆಲವರು ಭಗೀರಥ ಎಂದು ಕರೆದುಕೊಳ್ಳುತ್ತಾರೆ. ಯಾರು ಬೇಕಾದರೂ ತಮ್ಮನ್ನು ಭಗೀರಥ ಎಂದು ಕರೆದುಕೊಳ್ಳಲಿ, ನನಗೆ ಭಗೀರಥ ಎಂದು ಕರೆಯುವುದು ಬೇಡ. ನಾಡಿನ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ ಸಂತೃಪ್ತಿ ನನಗಿದೆ ಎಂದರು.