Advertisement

ಕೆಪಿಎಸ್ಸಿಗೆ ಶೀಘ್ರ ಕಾಯಕಲ್ಪ- ಸಿಎಂ

10:07 PM Mar 24, 2022 | Team Udayavani |

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಕ್ಕೆ ಶೀಘ್ರ ಕಾಯಕಲ್ಪ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಗುರುವಾರ ಪ್ರಶ್ನೋತ್ತರ ವೇಳೆ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್‌ನ ಎಸ್‌. ರವಿ, ಲೋಕಸೇವಾ ಆಯೋಗದ ವಿಳಂಬ ಧೋರಣೆಯಿಂದ ಉದ್ಯೋಗಾಕಾಂಕ್ಷಿಗಳಿಗೆ ತೊಂದರೆ ಆಗುತ್ತಿದೆ. ಹಾಗೂ ಅಕ್ರಮಗಳಲ್ಲಿ ತೊಡಗಿಕೊಂಡಿರುವುದರಿಂದ ಸಾರ್ವಜನಿಕ ಅಪನಂಬಿಕೆಗಳಿಗೂ ಆಯೋಗ ಒಳಗಾಗಿದೆ. ಈ ನಿಟ್ಟಿನಲ್ಲಿ ಸರಕಾರ ಕೈಗೊಂಡ ಕ್ರಮಗಳು ಏನು ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಲೋಕಸೇವಾ ಆಯೋಗ ಹಲವು ಕಾರಣಗಳಿಂದ ಶಿಥಿಲಗೊಂಡಿದೆ. ಇದಕ್ಕೆ ಕಾಯಕಲ್ಪ ನೀಡುವ ಕೆಲಸ ನಡೆದಿದೆ ಎಂದರು.

ಈ ದಿಸೆಯಲ್ಲಿ ಈಗಾಗಲೇ ಆಯೋಗದ ಅಧ್ಯಕ್ಷರು, ಸದಸ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳೊಂದಿಗೂ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಖಾಲಿ ಹುದ್ದೆಯೂ ಭರ್ತಿಗೆ ಕ್ರಮ:

ಕೆಪಿಎಸ್ಸಿ ಮೂಲಕ ನಡೆಯುವ ವಿವಿಧ ಇಲಾಖೆಗಳಿಗೆ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳು, ಫ‌ಲಿತಾಂಶಗಳು ಬಂದ ಮೇಲೆ ಅದರ ಬಗ್ಗೆ ಕೇಳಿಬರುವ ತಕರಾರು, ಸಂದರ್ಶನದ ವೇಳೆ ಕೂಡ ಹಲವು ಆರೋಪಗಳು ಕೇಳಿಬರುತ್ತವೆ. ಈ ಹಿನ್ನೆಲೆಯಲ್ಲಿ ಕಾಯಕಲ್ಪಕ್ಕೆ ಸರಕಾರ ಮುಂದಾಗಿದೆ ಎಂದ ಅವರು, ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಮುಂದಿನ ಆರು ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿ ತಿಳಿಸಿದರು. ಇನ್ನು ರಾಜ್ಯದ ವಿವಿಧ ಇಲಾಖೆಗಳಿಗೆ ಮಂಜೂರಾದ ಒಟ್ಟು 80,494 ಹುದ್ದೆಗಳಲ್ಲಿ 56,449 ಭರ್ತಿ ಮಾಡಲಾಗಿದ್ದು, 26,306 ಹುದ್ದೆಗಳು ಖಾಲಿ ಇವೆ. ಅದೇ ರೀತಿ, ಕಳೆದ ಐದು ವರ್ಷಗಳಲ್ಲಿ 25,297 ಹುದ್ದೆಗಳ ಪೈಕಿ 17,727 ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯನ್ನು ಕೆಪಿಎಸ್ಸಿ ಪೂರ್ಣಗೊಳಿಸಿದೆ. ಉಳಿದ 6,314 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ವಿವಿಧ ಹಂತಗಳಲ್ಲಿ ಬಾಕಿ ಇದೆ ಎಂದು ಸಿಎಂ ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next