Advertisement

ಕಾಂಗ್ರೆಸ್ ನಲ್ಲಿ ಎಂಥವರಿದ್ದಾರೆಂದು ಎಲ್ಲರಿಗೂ ಗೊತ್ತು: ಸಿಎಂ ಬೊಮ್ಮಾಯಿ

12:35 PM Jan 12, 2023 | Team Udayavani |

ಹುಬ್ಬಳ್ಳಿ: ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತ ಹೌದು ಅಲ್ಲವೋ ಎನ್ನುವುದನ್ನು ಪರಿಶೀಲನೆ ಮಾಡಲು ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಎಂಥವರು ಇದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇತಂಹ ಸಂಸ್ಕೃತಿ ಆರಂಭವಾಗಿದ್ದೆ ಕಾಂಗ್ರೆಸ್ ನಿಂದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಲೆಹಿಡುಕರು ಕುರಿತಾಗಿ ಕಾಂಗ್ರೆಸ್ ಟ್ವಿಟ್ ಬಗ್ಗೆ ಪ್ರತಿಕ್ರಿಯಿಸಿ, ಅಂತಹ ತಲೆಹಿಡುಕರು ಕಾಂಗ್ರೆಸ್ ನಲ್ಲಿ ಮಾತ್ರ ಇರಲು ಸಾಧ್ಯ ಎಂದರಲ್ಲದೆ, ಸ್ಯಾಂಟ್ರೋ ರವಿ ಬಂಧನ ಗೊತ್ತಿಲ್ಲ. ನಾನು ವಿಮಾನದಲ್ಲಿದ್ದೆ ಎಂದರು.

ಕಾಂಗ್ರೆಸ್ ರಾಜಕೀಯ ದಿವಾಳಿತನಕ್ಕೆ ಹೋಗಿದೆ. ಹೀಗಾಗಿ ಅವರು ಹತಾಶರಾಗಿದ್ದಾರೆ. ಅದಕ್ಕೆ ಉಚಿತ ಯೋಜನೆಗಳ ಬಗ್ಗೆ ಹೇಳುತ್ತಿದ್ದಾರೆ. ಕಾಂಗ್ರೆಸ್ ನವರು ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ ಎಂದರು.

ಇದನ್ನೂ ಓದಿ:ಹೀಗೊಂದು ನಿಯಮ; ರಜೆಯಲ್ಲಿರುವ ಸಹೋದ್ಯೋಗಿಗಳಿಗೆ ತೊಂದರೆ ನೀಡಿದರೆ 1 ಲಕ್ಷ ರೂ ದಂಡ!

ಯುವಜನೋತ್ಸವ ಸಮಾರಂಭಕ್ಕೆ ಮೋದಿ ಆಗಮಿಸುತ್ತಿದ್ದಾರೆ. ಯುವಕರಿಂದ ದೇಶ ಕಟ್ಟಬಹುದು. ಯುವಕರಿಗೆ ಕೌಶಲ ತರಬೇತಿ ನೀಡಿದರೆ ದೇಶ ಕಟ್ಟಬಹುದು. ನೂತನ ಶಿಕ್ಷಣ ನೀತಿಯಿಂದ ಮೂರೇ ವರ್ಷದಲ್ಲಿ ಎರಡು ಪದವಿ ತೆಗೆದುಕೊಳ್ಳಬಹುದು. ಯುವಕರಿಗೆ ಮುದ್ರಾ ಯೋಜನೆ. ಖೇಲೋ ಇಂಡಿಯಾ ಸೇರಿದಂತೆ ಇತರೆ ಯೋಜನೆ ಜಾರಿಗೊಳಿಸಿದ್ದಾರೆ. ಮೋದಿಯವರು ಬರುತ್ತಿರುವುದರಿಂದ ಯುವಕರಲ್ಲಿ ಉತ್ಸಾಹ ಹೆಚ್ಚಾಗಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next