Advertisement
ಆನಂದ್ ಸಿಂಗ್, ಡಾ.ಸುಧಾಕರ, ಜೆ.ಸಿ.ಮಾಧುಸ್ವಾಮಿ, ಎಂ.ಟಿ.ಬಿ.ನಾಗರಾಜ್ ಸೇರಿದಂತೆ ಹಲವರು ಬೇಸರ ಹೊರ ಹಾಕಿದ್ದಾರೆ. ಆದರೆ ಈ ವಿಚಾರದಲ್ಲಿ ಯಾರೂ ಎಷ್ಟೇ ಆಕ್ರೋಶ ಹೊರ ಹಾಕಿದ್ದರೂ ಪ್ರಯೋಜನವಿಲ್ಲ ಎಂದು ಹೇಳಲಾಗುತ್ತಿದೆ.
Related Articles
Advertisement
ಹೀಗಾಗಿ ಸಿಎಂ ಸ್ಥಾನದಿಂದ ಯಡಿಯೂರಪ್ಪ ಇಳಿದು ಬೊಮ್ಮಾಯಿ ಪ್ರತಿಷ್ಠಾಪನೆಯಾದ ಬಳಿಕ ಈ ಸೂತ್ರ ಜಾರಿಗೆ ವರಿಷ್ಢರು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಳೆದು ತೂಗಿ ಉಸ್ತುವಾರಿ ಪಟ್ಟಿಯನ್ನು ಸಿಎಂ ಬೊಮ್ಮಾಯಿ ಸಿದ್ದಪಡಿಸಿದ್ದಾರೆ.
ಉಸ್ತುವಾರಿ ಬದಲಾವಣೆ ವಿಚಾರದಲ್ಲಿ ಕೆಲವರಿಗೆ ಹೈಕಮಾಂಡ್ ಸೂತ್ರದ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಆದಾಗಿಯೂ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಗೊತ್ತಿಲ್ಲದ ಕಡೆ ಬೇಡ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಬೇರೆ ಜಿಲ್ಲೆಗಳ ಬಗ್ಗೆ ಮಾಹಿತಿ ಇಲ್ಲದೇ ಕೆಲಸ ಮಾಡುವುದು ಬೇಡ. ಇದರಿಂದ ಪ್ರಯೋಜನವಿಲ್ಲ ಎಂದು ಬೇಡ ಹೇಳುದ್ದೇನೆಯೇ ವಿನಾ ಬೇರೆ ಯಾವುದೇ ಉದ್ದೇಶವಿಲ್ಲ. ತವರು ಜಿಲ್ಲೆ ಬದಲಾವಣೆ ರಾಮಕೃಷ್ಣ ಹೆಗಡೆ ಕಾಲದಲ್ಲೂ ಆಗಿ ವಿಫಲವಾಗಿತ್ತು ಎಂದು ಹೇಳಿದ್ದಾರೆ.
ವಸ್ತು ಸ್ಥಿತಿಗೆ ದೂರ
ವಿಧಾನಸೌಧದಲ್ಲಿ ಸಿಎಂ ಬೊಮ್ಮಯಿ ಹೇಳಿಕೆ ನೀಡಿದ್ದು, ಯಾರು ಅಸಮಾಧಾನ ವ್ಯಕ್ತಪಡಿಸಿಲ್ಲ.ಎಲ್ಲರ ಬಳಿ ಮಾತನಾಡಿದ್ದೇನೆ. ಜಿಲ್ಲಾ ಉಸ್ತುವಾರಿ ವಹಿಸುವ ಮುನ್ನವೂ ಅವರ ಬಳಿ ಮಾತನಾಡಿದ್ದೇ.ನಂತರವೂ ನಾನು ಮಾತನಾಡಿದ್ದೇನೆ. ಇದು ನಮ್ಮ ಪಕ್ಷದ ರಾಜಕೀಯ ನೀತಿ. ಯಾವುದೇ ಅಸಮಾಧಾನದ ಪ್ರಶ್ನೆಯೇ ಇಲ್ಲ. ಸರ್ಕಾರವನ್ನು ಅತ್ಯಂತ ಸೂಕ್ತವಾಗಿ ಕೆಲಸ ಮಾಡಲು ಬದ್ದವಾಗಿದ್ದೇವೆ. ಅಸಮಾಧಾನ ಎನ್ನುವುದು ವಸ್ತು ಸ್ಥಿತಿಗೆ ದೂರವಾಗಿದೆ, ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.