ಬೆಳಗಾವಿ: ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲ ಅಂತಾ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಅದು ಅವರ ಪಕ್ಷದ ವಿಚಾರ, ಅದರ ಬಗ್ಗೆ ಕಮೆಂಟ್ ಮಾಡಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಬೊಮ್ಮಾಯಿ ಸುದ್ಧಿಗೋಷ್ಠಿ ನಡೆಸಿ, ಮಾತಾನಾಡಿದ ಅವರು, ನಮ್ಮ ಹಿರಿಯ ನಾಯಕ ಬಿಎಸ್‌ವೈ ತಮ್ಮ ವಿಚಾರ ಹೆಚ್ ಡಿಕೆ ಬಳಿ ವ್ಯಕ್ತಪಡಿಸಿದ್ದರು. ಎಲ್ಲಿ ಸ್ಪರ್ಧಿಸಲ್ಲ ಅಲ್ಲಿ ಬೆಂಬಲ ಕೊಟ್ಟರೆ ಒಳ್ಳೆಯದು ಅಂತಾ ಕೇಳಿದ್ರು. ನಾವೇನೂ ಅವರ ಬೆಂಬಲವನ್ನು ಕೇಳಿರಲಿಲ್ಲ. ಅವರು ಏನು ತೀರ್ಮಾನ ತಗೆದುಕೊಳ್ತಾರೆ ತಗೆದುಕೊಳ್ಳಲಿ ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಎಂದರು.
ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಿಲ್ಲ: ಹೆಚ್ ಡಿಕೆ ಸ್ಪಷ್ಟನೆ
13ರಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಎರಡು ವರ್ಷದಿಂದ ವಿಧಾನಮಂಡಲ ಅಧಿವೇಶ ನಡೆದಿರಲಿಲ್ಲ. ನಿಗದಿಯಂತೆ ಅದಿವೇಶನ ನಡೆಯಲ್ಲಿದೆ. ಕೋವಿಡ್ ನಿಯಮ ಅನುಸರಿಸಿ ಅಧಿವೇಶನ ನಡೆಸುತ್ತೇವೆ. ಅಧಿವೇಶನದಲ್ಲಿ ಮಳೆ ಹಾನಿ, ಪರಿಹಾರದ ಬಗ್ಗೆ ಚರ್ಚೆ ಆಗಲಿದೆ ಎಂದರು.
ಮುಂಗಾರು,ಹಿಂಗಾರು ಬೆಳೆ ಹಾನಿ ಬಗ್ಗೆ ಸರ್ವೇ ಮಾಡಲು ವಿಳಂಭ ಆಗುತಿತ್ತು. ಈಗ ತುರ್ತು ಪರಿಹಾರಕ್ಕಾಗಿ ಕ್ರಮ ವಹಿಸಲಾಗಿದೆ. ಇದುವರೆಗೆ 422 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗಿದೆ ಈ ಭಾಗದಲ್ಲಿ ದ್ರಾಕ್ಷಿ ಸೇರಿದಂತೆ ತೋಟಗಾರಿಕೆ ಬೆಳೆ ಹಾನಿಯಾಗಿವೆ. ಅದಕ್ಕೆ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.