Advertisement

ಸಿದ್ದರಾಮಯ್ಯ ‘ಲಿಂಗಾಯತ’ಹೇಳಿಕೆ ತಿರುಚಿಲ್ಲ, ‌ಜನರೇನು ದಡ್ಡರಲ್ಲ: ಸಿಎಂ ಬೊಮ್ಮಾಯಿ

11:55 AM Apr 24, 2023 | Team Udayavani |

ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬರುವ ಮ್ಯಾಜಿಕ್ ‌ನಂಬರ್ ಜೊತೆಗೆ ಹೆಚ್ಚಿನ ಸ್ಥಾನ ಗಳಿಸುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಗ್ಯಾರಂಟಿ ಎಂದರು.

ರಾಜ್ಯದ ವಿವಿಧೆಡೆ ಪ್ರಚಾರ ನಡೆಸಿದ ಸಂದರ್ಭದಲ್ಲಿ ಬಿಜೆಪಿಯ ಪರ ವಾತಾವರಣ ಕಂಡು ಬರುತ್ತಿದೆ.‌ ಯಾವುದೇ ಚುನಾವಣೆಯಾಗಲಿ ಧರ್ಮ, ಜಾತಿ ವಿಷಯದ ಆಧಾರದಲ್ಲಿ ನಡೆಯುವುದಿಲ್ಲ. ಅಭಿವೃದ್ಧಿ, ಜನರಿಗೆ ಏನು ಬೇಕೋ ಅಂತಹ ವಿಷಯ ಅಂದರೆ ಶಿಕ್ಷಣ, ಆರೋಗ್ಯ, ಉದ್ಯೋಗ ವಿಷಯದ ಆಧಾರದ ಮೇಲೆ ನಡೆಯುತ್ತವೆ. ಈ ಬಾರಿ ಜನರು ಅಂತಹ ವಿಷಯಗಳನ್ನೇ ಬಯಸುತ್ತಿದ್ದಾರೆ ಎಂದು ತಿಳಿಸಿದರು.

ಲಿಂಗಾಯತ ಮುಖ್ಯಮಂತ್ರಿಗಳ ಕುರಿತಂತೆ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯನ್ನು ತಿರುಚಿಲ್ಲ. ಅವರ ಮಾತನಾಡಿದ ವಿಡಿಯೋ ಇದೆ. ಸಿದ್ದರಾಮಯ್ಯ ಅವರೇ ತಮ್ಮ ಹೇಳಿಕೆ ಬದಲಾಯಿಸಿದ್ದಾರೆ.‌ ಹಿಂದೆ ಬರೆದುಕೊಳ್ಳುವುದು ಇತ್ತು. ಈಗ ತಿರುಚಲಿಕ್ಕೆ ಬರುವುದಿಲ್ಲ. ‌ಜನರೇನು ದಡ್ಡರಲ್ಲ ಎಂದರು.

ಇದನ್ನೂ ಓದಿ:ನಾಗಠಾಣ ಬಿಜೆಪಿ ಬಂಡಾಯ ಶಮನ: ನಾಮಪತ್ರ ಹಿಂಪಡೆಯುವುದಾಗಿ ಮಹೇಂದ್ರ ನಾಯಿಕ್ ಘೋಷಣೆ

Advertisement

ಬಂಡಾಯ ಎದ್ದಿರುವ ಜೊತೆಗೆ ಮಾತನಾಡಿದ್ದೇನು. ಶೇ.‌80 -90 ರಷ್ಟು ಜನರು ನಾಮಪತ್ರ ಹಿಂದಕ್ಕೆ ಪಡೆಯಲಿದ್ದಾರೆ. ಮಾಡಾಳು ಮಲ್ಲಿಕಾರ್ಜುನ ಅವರೊಂದಿಗೆ ಒಂದು ವಾರದಿಂದ ಸಂಪರ್ಕ ಇಲ್ಲ. ಮಾಡಾಳು ವಿರುಪಾಕ್ಷಪ್ಪ ಅವರ ವಿಷಯ ಈಗಾಗಲೇ ಮುಗಿದ ವಿಚಾರ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಪ್ರಚಾರ ಕಾರ್ಯ ಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವೆ ಸ್ಮೃತಿ ಇರಾನಿ ಇತರರು ಆಗಮಿಸುವರು ಎಂದು ತಿಳಿಸಿದರು.

ರಾಹುಲ್‌ ಗಾಂಧಿಯವರು ಹಾವೇರಿ ಜಿಲ್ಲೆ ಎಲ್ಲಿಗಾದರೂ ಬರಲಿ. ಚುನಾವಣೆ ಅಂದ ಮೇಲೆ ಎಲ್ಲರೂ ಬರುತ್ತಾರೆ.‌ ಎಲ್ಲರಿಗೂ ಸ್ವಾಗತ. ರಾಹುಲ್ ಗಾಂಧಿಯವರು ಪ್ರಚಾರ ನಡೆಸಿದ ಕಡೆ ಟ್ರ್ಯಾಕ್ ರೆಕಾರ್ಡ್ ಏನು ಎಂಬುದು ಎಲ್ಲರಿಗೂ ಗೊತ್ತಿರುವಂತದ್ದೇ. ರಾಹುಲ್ ಗಾಂಧಿಯವರು ಹಾವೇರಿ ಜಿಲ್ಲೆಗೆ ಬರುವುದಕ್ಕೆ ಸ್ವಾಗತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next