ಹುಬ್ಬಳ್ಳಿ: ಮಾಜಿ ಸಚಿವ ಆರ್.ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಬಿಜೆಪಿ ಪ್ರೇರಿತ ಎಂಬುವುದು ಶುದ್ಧ ಸುಳ್ಳು, ತನಿಖಾ ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡಿರುವುದು ಇದಕ್ಕೆ ಸಾಕ್ಷಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: ಬಾಲಿವುಡ್ ನ ಹಿರಿಯ ನಟ, ʼಖೋಪ್ಡಿʼ ಖ್ಯಾತಿಯ ಸಮೀರ್ ಖಾಕರ್ ನಿಧನ
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಳಿಯ ಹಿಂದೆ ಬಿಜೆಪಿ ಪಾತ್ರವಿಲ್ಲ. ಯಾರೇ ತಪ್ಪು ಮಾಡಿದರೂ ಅವರನ್ನು ಶಿಕ್ಷಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಎಲ್ಲಾ ತನಿಖಾ ಸಂಸ್ಥೆಗಳಿಗೆ ಪೂರ್ಣ ಅಧಿಕಾರ ನೀಡಲಾಗಿದೆ. ಶಂಕರ ಅವರ ಪ್ರಕರಣದಲ್ಲೂ ತನಿಖಾ ಸಂಸ್ಥೆ ತಮ್ಮದೆಯಾದ ಕೆಲಸ ಮಾಡಿವೆ ಎಂದರು.
ಸಿ.ಟಿ.ರವಿ ಹಾಗೂ ಬಿ.ವೈ.ವಿಜಯೇಂದ್ರ ನಡುವಿನ ಮಾತಿನ ಚಕಮಕಿ ಕುರಿತ ಕೇಳಿದ ಪ್ರಶ್ನೆಗೆ ಮಾಧ್ಯಮದವರ ಮೇಲೆ ಸಿಡಿಮಿಡುಗೊಂಡು, ಇದು ಮಾಧ್ಯಮಗಳ ಸೃಷ್ಟಿ. ಸಚಿವ ಸೋಮಣ್ಣ ದೆಹಲಿಗೆ ಹೋಗುತ್ತಿರುವ ವಿಚಾರ ಗೊತ್ತಿದೆ ಎಂದು ಹೇಳಿ ಹೊರಟರು.