ಕೊಪ್ಪಳ: ವಿಶ್ವ ಪ್ರಸಿದ್ದ ಅಂಜಿನಾದ್ರಿ ಬೆಟ್ಟದ ತಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಟ್ಟದ ಪಾದುಗಟ್ಟೆ ಮೆಟ್ಟಿಲು ಬಳಿ ವೀರ ಆಂಜಿನೇಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಶಹನಾಯಿ ಕೊಳಲು ವಾದ್ಯ ಮೇಳದ ಮೂಲಕ ಅದ್ದೂರಿ ಸ್ವಾಗತ ಕೋರಲಾಯಿತು. ಮಹಿಳೆಯರು ಸಿಎಂಗೆ ಆರತಿ ಬೆಳಗಿ ಅಂಜಿನಾದ್ರಿ ಬೆಟ್ಟಕ್ಕೆ ಸ್ವಾಗತ ಕೋರಿದರು.
ಧಾರ್ಮಿಕ ದತ್ತಿ ಇಲಾಖೆಯ ಅರ್ಚಕರು ಮಂತ್ರೋಪದೇಶ ನೆರವೇರಿಸಿದರು. ಬಿಸುಲಿನ ಝಳದಲ್ಲೂ ಸಿಎಂ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಭಕ್ತಿಯ ನಮನ ಸಲ್ಲಿಸಿದರು.
ಇದನ್ನೂ ಓದಿ:Bhopal Gas Tragedy;ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ-ಕೇಂದ್ರ ಮನವಿ ವಜಾಗೊಳಿಸಿದ ಸುಪ್ರೀಂ
Related Articles
ಅಂಜಿನಾದ್ರಿ ಬೆಟ್ಟದ ಅಭಿವೃದ್ಧಿ ಕಾರ್ಯಕ್ಕೆ ಕಳೆದ ಬಜೆಟ್ ನಲ್ಲಿ 100 ಕೋಟಿ ಹಾಗೂ ಹೆಚ್ಚುವರಿ 20 ಕೋಟಿ ಸೇರಿದಂತೆ 120 ಕೋಟಿ ರೂ.ನಡಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದು ಮೊದಲು ಅಂಜಿನಾದ್ರಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಸಚಿವರಾದ ಆನಂದ ಸಿಂಗ್, ಹಾಲಪ್ಪ ಆಚಾರ್, ಮುನಿರತ್ನ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೆಸೂಗೂರು ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.