Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಿನ್ನೆ ಜಿ.ಪಂ ಸಿಇಒಗಳ ಜತೆ ಇಲಾಖೆ, ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಯಿತು,ಇವತ್ತು ಡಿಸಿಗಳ ಸಭೆ ನಡೆಸಿದ್ದೇವೆ. ಡಿಸಿಗಳ ಪಾತ್ರ ದೊಡ್ಡದಿದೆ. ಜಿಲ್ಲಾಧಿಕಾರಿಗಳಾಗಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಾಗಿ ಡಿಸಿಗಳು ಕೆಲಸ ಮಾಡುತ್ತಾರೆ, ಅಧಿಕಾರದ ಬಹುಮುಖ್ಯ ಕೊಂಡಿಯಾಗಿದ್ದು, ಅವರ ಪಾತ್ರ ಆಡಳಿತದ ಮೇಲೆ ಬಹಳಷ್ಟು ಅವಲಂಬನೆ ಯಾಗಿದೆ ಎಂದರು.
Related Articles
Advertisement
ರೈತರ ಬಾಕಿ ಬೆಳೆ ಪರಿಹಾರ ಕೊಡಲು ಸೂಚನೆ ನೀಡಲಾಗಿದೆ. ಪರಿಹಾರ ಸಂಬಂಧ ಮಾಹಿತಿ ಆಪ್ ನಲ್ಲಿ ಅಲ್ ಲೋಡ್ ಗೆ ಸೂಚನೆ ನೀಡಲಾಗಿದ್ದು, ಜನವರಿ 7 ರ ಗಡುವು ಇದಕ್ಕೆ ಕೊಡಲಾಗಿದೆ. ಇವುಗಳ ಕಡತ ವಿಲೇವಾರಿ ಜವಾಬ್ದಾರಿ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ ಎಂದರು.
ಡೀಮ್ಡ್ ಅರಣ್ಯಗಳ ವಿಚಾರದಲ್ಲಿ ಬಡವರು, ರೈತರಿಗೆ ಹಲವು ಕಡೆ ತೊಂದರೆಯಾಗುತ್ತಿದ್ದು, ಇದರ ನಿವಾರಣೆ ಬಗ್ಗೆ ಚರ್ಚೆ ನಡೆದಿದೆ. ಕಂದಾಯ ಭೂಮಿಗಳ ಮಂಜೂರು ಪ್ರಕರಣ ಬಾಕಿ ಇದೆ. ಬಹಳಷ್ಟು ಜನಕ್ಕೆ ನ್ಯಾಯ ಸಿಗದೇ ವ್ಯಾಜ್ಯ ಮುಂದುವರಿಕೆಯಾಗಿದೆ. ಇಂಥ ವ್ಯಾಜ್ಯ ಇತ್ಯರ್ಥಕ್ಕೆ ಸೂಚನೆ ನೀಡಿದ್ದು, ಒಂದು ವರ್ಷ ದಲ್ಲಿ ಇವುಗಳ ವಿಲೇವಾರಿಗೆ ಸೂಚಿಸಲಾಗಿದೆ.
ಭೂಪರಿವರ್ತನೆಗೆ ಕಂದಾಯ ಸಚಿವರು ಹೊಸ ನಿಯಮಾವಳಿ ತರುವ ಘೋಷಣೆ ಮಾಡಿದ್ದಾರೆ. ಇದಕ್ಕೆ ಎಲ್ಲ ನಗರಗಳ ಮಾಸ್ಟರ್ ಪ್ಲಾನ್ ಮಾಡ್ತಿದ್ದೇವೆ. 48 ನಗರಗಳ ಮಾಸ್ಟರ್ ಪ್ಲಾನ್ ಇನ್ನೂ ಆಗಿಲ್ಲ,ಇದಕ್ಕೂ ಸೂಚನೆ ಕೊಡಲಾಗಿದೆ. 4370 ಊರುಗಳಲ್ಲಿ ಸ್ಮಶಾನ ಭೂಮಿ ಅಗತ್ಯ ಇದ್ದು, ಸ್ಮಶಾನ ಭೂಮಿಗಳು ಎಲ್ಲೆಡೆ ಇಲ್ಲ, ಹಲವು ಕಡೆ ಇದ್ದರೂ ಜಾಗ ಸಾಕಾಗುತ್ತಿಲ್ಲ. ಸ್ಮಶಾನ ಭೂಮಿಗಳಿಗೆ ಸರ್ಕಾರದ ಜಾಗ ಕೊಡಲು ನಿರ್ಧಾರ ಮಾಡಿದ್ದು, ಸರ್ಕಾರಿ ಜಾಗ ಇಲ್ಲದಿರುವ ಕಡೆ ಖರೀದಿ ಮಾಡಲು ನಿರ್ಧರಿಸಲಾಗಿದೆ.
ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದು, ಈ ಸೇವೆಗಳನ್ನು ಆಧಾರ್ ಗೆ ಸೇರಿಸಲು ಒಂದು ತಿಂಗಳ ಗಡುವು ನೀಡಲಾಗಿದೆ.
ಸಂಧ್ಯಾ ಸುರಕ್ಷಾ, ಅಂಗವಿಕಲ, ವಿಧವಾ ಮಾಸಾಶನ ಸೇವೆಗಳು, ಲಸಿಕೆ ಈಗಾಗಲೇ 97% ಆಗಿದ್ದು, ಜನವರಿ ಅಂತ್ಯಕ್ಕೆ 100% ಮುಗಿಸಲು ಸೂಚನೆ ನೀಡಿದ್ದೇವೆ. ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾಗೃತ ಆಗಲು ಸೂಚನೆ ನೀಡಿದ್ದೇವೆ.
ಬೆಡ್, ಔಷಧ, ಟೆಸ್ಟಿಂಗ್, ಆರೋಗ್ಯ ಸೌಕರ್ಯ ಹೆಚ್ಚಿಸಲು ಸೂಚನೆ ನೀಡಲಾಗಿದ್ದು, ಆಯುಷ್ಮಾನ್ ಭಾರತ ಕಾರ್ಡ್ ಗಳನ್ನು ಮಾಡಲು ಸೂಚನೆ ನೀಡಿದ್ದೇವೆ. ಬಿಪಿಎಲ್, ಆಧಾರ್ ಕಾರ್ಡ್ ಲಿಂಕ್ ಮಾಡಿ ಆಯುಷ್ಮಾನ್ ಕಾರ್ಡ್ ಕೊಡಲು ಸೂಚನೆ ನೀಡಲಾಗಿದೆ.
76% ಎರಡನೇ ಡೋಸ್ ಆಗಿದ್ದು, ಇದು 80% ತಲುಪಲು ಸೂಚನೆ ನೀಡಲಾಗಿದೆ. ದಿಟ್ಟವಾಗಿ ಜನಪರವಾಗಿ ಕೆಲಸ ಮಾಡಲು ಸೂಚಿಸಲಾಗಿದೆ. ಕಾನೂನು ಚೌಕಟ್ಟಿನಲ್ಲಿ ಬಡವರಿಗೆ ನೆರವು ಕೊಡುವ ಕೆಲಸ ಮಾಡಲು ಸೂಚನೆ ನೀಡಲಾಗಿದೆ ಎಂದರು.