ಮಾಜಿ ಸಿಎಂ ಯಡಿಯೂರಪ್ಪನವರ ಅನುಭವ ಹಾಗೂ ಜೀವನ ನಮಗೆ ದಾರಿದೀಪ. ಅವರ ಹೋರಾಟ ನಮಗೆ ಸ್ಫೂರ್ತಿ.
ಯಡಿಯೂರಪ್ಪನವರಿಗೆ ನಮ್ಮ ವಯಸ್ಸಿನಷ್ಟು ಅನುಭವವಾಗಿದೆ. ಈ ಸದನಕ್ಕೆ ಹಾಗೂ ರಾಜ್ಯಕ್ಕೆ ಅವರ ಕೊಡುಗೆ ಅಪಾರ. ಅಧಿಕಾರದಲ್ಲಿದ್ದಾಗ ಅವರು ಬಡವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು. ಅನ್ನದಾತರಿಗೆ ರೈತ ಬಜೆಟ್ ಮಂಡಿಸಿದ ಮೊದಲ ಮುಖ್ಯಮಂತ್ರಿ ಅವರಾಗಿದ್ದಾರೆ. ಅವರ ಜೀವನ ಹಾಗೂ ಹೋರಾಟ ನಮಗೆ ಸ್ಫೂರ್ತಿ. ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವನಾಗಿ, ಶಾಸಕನಾಗಿ ಬಹಳ ಹತ್ತಿರದಿಂದ ಅವರನ್ನು ನೋಡಿದ್ದೇನೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಮಾರ್ಗದರ್ಶನ ಪಡೆದಿದ್ದೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೆ ವಿಶೇಷ ಸ್ಥಾನವಿದೆ. ನಮಗೆಲ್ಲ ಹಿರಿಯರಾಗಿ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಸಲಹೆ-ಸೂಚನೆ ನೀಡಿದ್ದಾರೆ. ಜನತೆಗೂ ಅದರಿಂದ ಒಳ್ಳೆಯಾಗಿದೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ರೈತ ಬಜೆಟ್ ಮಂಡಿಸಿದ್ದಷ್ಟೇ ಅಲ್ಲದೆ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದರು. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ, ವಿದ್ಯಾರ್ಥಿನಿಯರಿಗೆ ಸೈಕಲ್ ಹೀಗೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದ ವತಿಯಿಂದ ನಾಲ್ಕು ಸಾವಿರ ರೂ. ನೀಡುವ ಹಾಗೂ ರೈತರಿಗೆ ಹತ್ತು ಎಚ್‌ಪಿವರೆಗೆ ಉಚಿತ ವಿದ್ಯುತ್ ಬಹುದೊಡ್ಡ ಪ್ರಮಾಣದ ರೈತಾಪಿ ಸಮುದಾಯಕ್ಕೆ ಅನುಕೂಲವಾಗಿದೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ