Advertisement

ಬೊಮ್ಮಾಯಿ ಸಂಪುಟ ರಚನೆ : 29 ಮಂದಿ ಸಚಿವರಾಗಿ ಪ್ರಮಾಣ

03:54 PM Aug 04, 2021 | Team Udayavani |

ಬೆಂಗಳೂರು : ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಇಂದು(ಬುಧವಾರ, ಆಗಸ್ಟ್ 4) ರಾಜ ಭವನದಲ್ಲಿ ಸರಳ ಸಮಾರಂಭದಲ್ಲಿ ನಡೆಯಿತು.

Advertisement

ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರಿಂದ ಒಟ್ಟು 29 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದರ ಮೂಲಕ  ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.

8 ಲಿಂಗಾಯತರು, 7 ಒಬಿಸಿ, 7 ಒಕ್ಕಲಿಗರು, 1 ಪರಿಶಿಷ್ಟ ಪಂಗಡ, 3 ಪರಿಶಿಷ್ಟ ಜಾತಿ, 1 ರೆಡ್ಡಿ, 1 ಮಹಿಳಾ, 1 ಬ್ರಾಹ್ಮಣ ವರ್ಗದವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.

ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಸಚಿವರಾಗಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದರವ ಪಟ್ಟಿ :

ಕೋಟಾ ಶ್ರೀನಿವಾಸ ಪೂಜಾರಿ – ಎಂಎಲ್‍ಸಿ,

Advertisement

ಸುನೀಲ್ ಕುಮಾರ್ – ಕಾರ್ಕಳ

ಎಸ್ ಅಂಗಾರ – ಸುಳ್ಯ

ಕೆ.ಎಸ್. ಈಶ್ವರಪ್ಪ ಶಿವಮೊಗ್ಗ

ಆರ್.ಅಶೋಕ್- ಪದ್ಮನಾಭ ನಗರ

ವಿ ಸೋಮಣ್ಣ ಗೋವಿಂದರಾಜನಗರ

ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ

ಉಮೇಶ್ ಕತ್ತಿ- ಹುಕ್ಕೇರಿ

ಎಸ್.ಟಿ.ಸೋಮಶೇಖರ್- ಯಶವಂತಪುರ

ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ

ಸಿ.ಸಿ.ಪಾಟೀಲ್ – ನರಗುಂದ

ಬೈರತಿ ಬಸವರಾಜ – ಕೆ ಆರ್ ಪುರಂ

ಮುರುಗೇಶ್ ನಿರಾಣಿ – ಬೀಳಗಿ

ಶಿವರಾಂ ಹೆಬ್ಬಾರ್ - ಯಲ್ಲಾಪುರ

ಶಶಿಕಲಾ ಜೊಲ್ಲೆ  ನಿಪ್ಪಾಣಿ

ಕೆಸಿ ನಾರಾಯಣಗೌಡ – ಕೆಆರ್ ಪೇಟೆ

ಅರಗ ಜ್ಞಾನೇಂದ್ರ – ತೀರ್ಥಹಳ್ಳಿ

ಬಿ.ಶ್ರೀ ರಾಮುಲು  ಮೊಳಕಾಲ್ಮೂರು

ಗೋವಿಂದ ಕಾರಜೋಳ ಮುಧೋಳ

ಮುನಿರತ್ನ - ಆರ್ ಆರ್ ನಗರ

ಎಂ.ಟಿ.ಬಿ ನಾಗರಾಜ್ – ಎಂಎಲ್‍ಸಿ

ಗೋಪಾಲಯ್ಯ  ಮಹಾಲಕ್ಷ್ಮಿ ಲೇಔಟ್

ಮಾಧುಸ್ವಾಮಿ  ಚಿಕ್ಕನಾಯಕನಹಳ್ಳಿ

ಹಾಲಪ್ಪ ಆಚಾರ್ – ಯಲ್ಬುರ್ಗ

ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ

ಪ್ರಭು ಚೌವ್ಹಾಣ್ – ಔರಾದ್

ಆನಂದ್ ಸಿಂಗ್ – ಹೊಸಪೇಟೆ

ಬಿ.ಸಿ.ನಾಗೇಶ್ – ತಿಪಟೂರು

ಇನ್ನು, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್ ಅವರನ್ನು ಒಳಗೊಂಡು ಹಲವು ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next