ಚಿಕ್ಕೋಡಿ : ಕೃಷ್ಣಾ ಮತ್ತು ಉಪನದಿಗಳ ಭೀಕರ ಪ್ರವಾಹದಿಂದ ಆದ ನಷ್ಟಕ್ಕೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ನೇತೃತ್ವದಲ್ಲಿ, ನದಿ ತೀರದ ಮುಖಂಡರ ನಿಯೋಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಪ್ರತಿ ವರ್ಷ ಸಂಭವಿಸುವ ಅತಿವೃಷ್ಟಿ ಹಾಗೂ ಪ್ರವಾಹದಿಂದ ಅನೇಕ ಸೇತುವೆಗಳು ಬೇಗನೆ ಮುಳುಗಡೆ ಆಗುತ್ತವೆ. ಮಲಿಕವಾಡ, ಇಂಗಳಿ, ಯಡೂರ ಸೇರಿದಂತೆ ಚಿಕ್ಕೋಡಿ ಸದಲಗಾ ಕ್ಷೇತ್ರಕ್ಕೆ ಒಳಪಡುವ ಅನೇಕ ಸೇತುವೆಗಳನ್ನು ಎತ್ತರಿಸಿದರೆ ಪ್ರವಾಹ ಬಂದಾಗ ಜನರು ಒಡಾಟ ಮಾಡಲು ಕಷ್ಟ ಆಗುವುದಿಲ್ಲ ಎಂಬುವುದನ್ನ ಶಾಸಕ ಗಣೇಶ್ ಹುಕ್ಕೇರಿಯವರು ಮುಖ್ಯಮಂತ್ರಿಗಳಿಗೆ ತಿಳಿಸಿದರು.
ಇದನ್ನೂ ಓದಿ : ಉಪರಾಷ್ಟಪತಿ ವೆಂಕಯ್ಯನಾಯ್ಡು ಹಂಪಿಗೆ ಆಗಮನ : ವಾಯುಸೇನೆ ಹೆಲಿಕ್ಯಾಪ್ಟರ್ ಪೂರ್ವಭ್ಯಾಸ
ಇನ್ನು, ಪ್ರವಾಹ ಹಾಗೂ ಅತಿವೃಷ್ಟಿಯಿಂದ ಅನೇಕ ರಸ್ತೆಗಳು ಹಾಳಾಗಿವೆ, ಕೆಲವು ರಸ್ತೆಗಳಂತೂ ಪ್ರವಾಹದ ಅಬ್ಬರಕ್ಕೆ ಕೊಚ್ಚಿ ಹೊಗಿವೆ, ನಮ್ಮ ಕ್ಷೇತ್ರದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಹಿನ್ನೆಲೆ, ಅಕ್ಟೊಬರ್ ತಿಂಗಳಲ್ಲಿ ಕಬ್ಬು ಸಾಗಣಿಕೆ ಪ್ರಾರಂಭ ಆಗುತ್ತದೆ ಅಷ್ಟರೊಳಗೆ ಈ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಿಬೇಕು, ಇಲ್ಲದಿದ್ದರೆ ರೈತರು ಬೆಳೆದ ಕಬ್ಬು, ಕಾರ್ಖಾನೆಗೆ ಕಳುಹಿಸಲು ಸಮಸ್ಯೆ ಆಗುತ್ತದೆ, ರಸ್ತೆ ಅಭಿವೃದ್ಧಿಗಾಗಿ ಆದಷ್ಟು ಬೇಗ ಅನುದಾನ ಮಂಜೂರು ಮಾಡಬೆಕೇಂದು ಶಾಸಕ ಗಣೇಶ್ ಹುಕ್ಕೇರಿಯವರು ಮುಖ್ಯಂತ್ರಿಗಳಿಗೆ ಮನವಿ ಮಾಡಿದರು.
ಇನ್ನೂ ಅತಿವೃಷ್ಟಿಯಿಂದ ಕೆವಲ ನದಿ ಪಾತ್ರದ ಜನರ ಬೆಳೆಹಾನಿ ಆಗಿಲ್ಲ, ಬೆಳಗಾವಿ ಜಿಲ್ಲೆಯ ಅನೇಕ ರೈತರು ಅಧಿಕ ಇಳುವರಿಗಾಗಿ ಹೆಚ್ಚು ಖರ್ಚು ಮಾಡಿ ಬೆಳೆದ ಸೋಯಾಬಿನ್, ಮೆಕ್ಕೆ, ಕಬ್ಬು, ಜೋಳ ಹೀಗೆ ಬಹಳಷ್ಟು ಬೆಳೆ ನಾಶವಾಗಿರುವ ಹಿನ್ನಲೆ ರೈತರು ಕಂಗಾಲಾಗಿದ್ದೂ, ಸೂಕ್ತ ಅನುದಾನವನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕೆಂದು ಮಾಜಿ ಸಚಿವ ಪ್ರಕಾಶ್ ಹುಕ್ಕೇರಿಯವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲುಸಿದರು.
ಈ ಬಾರಿ ಸೇರಿದಂತೆ ಕಳೆದ 2019 ರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಒಂದು ಸಾವಿರಕ್ಕೂ ಅಧಿಕ ಜನರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ, ಅನೇಕ ಜನರು ಸಾರ್ವಜನಿಕ ಕಟ್ಟಡ ಗಳನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ, ಅಲ್ಲಿನ ಹೃದಯ ವಿದ್ರಾವಕ ದೃಶ್ಯಗಳನ್ನು ಉಹಿಸಲು ಸಾಧ್ಯವಿಲ್ಲ, ದಯವಿಟ್ಟು ಪಾರದರ್ಶಕವಾಗಿ ಸರ್ವೇ ಕಾರ್ಯ ಮಾಡಿ ಮನೆ ಕಳೆದುಕಡ ಪ್ರತಿಯೊಬ್ವರಿಗೂ ಮನೆ ಸಿಗುವಂತಾಗಬೇಕು ಎಂದು ಮಾಜಿ ಸಚಿವ ಪ್ರಕಾಶ್ ಹುಕ್ಕೇರಿಯವರು ಸಿಎಂ ಗಮನ ಸೆಳೆದರು.
ಈ ಸಂದರ್ಭದಲ್ಲಿ ರವೀಂದ್ರ ಮಿರ್ಜೆ. ಅನಿಲ ಪಾಟೀಲ. ಪೀರಗೌಡ ಪಾಟೀಲ ಮುಂತಾದವರು ಇದ್ದರು.
ಇದನ್ನೂ ಓದಿ : ಯಾದಗಿರಿ ಜನಾಶೀರ್ವಾದ ಯಾತ್ರೆ ವೇಳೆ ಸುಡುಮದ್ದು ಸದ್ದು: ಪ್ರಕರಣ ದಾಖಲು