Advertisement

ಕಡಿಮೆ ಅವಧಿಯಲ್ಲಿ ದೊಡ್ಡ ಸಾಧನೆ ಮಾಡುವ ಕನಸು : ಸಿಎಂ ಬಸವರಾಜ್ ಬೊಮ್ಮಾಯಿ

06:23 PM Aug 28, 2021 | Team Udayavani |

ಹಾವೇರಿ: ಅಲ್ಪ ಸಮಯದಲ್ಲಿ ದೊಡ್ಡ ಸಾಧನೆ ಮಾಡೋ ವಿಚಾರವಿದೆ. ಕಡಿಮೆ ಅವಧಿಯಲ್ಲಿ ಬಡವರು, ದುಡಿಯುವ ವರ್ಗ ಸೇರಿದಂತೆ ಹಿಂದುಳಿದವರ ಜೀವನ ಮಟ್ಟವನ್ನು ಬದಲಾವಣೆ ಮಾಡಬಲ್ಲೆ ಎನ್ನುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

Advertisement

ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದ ತಿಂಗಳ ಆಡಳಿತದ ಬಗ್ಗೆ ನೀವೇ ವಿಶ್ಲೇಷಣೆ ಮಾಡಿ. ಉತ್ತಮ ಆಡಳಿತ ಕೊಟ್ರೆ ಬಹಳ ವರ್ಷದ ಸಮಸ್ಯೆಗಳು ಬಗೆಹರಿಯುತ್ತವೆ. ಜನರ ಕೆಲಸಗಳು ಕಚೇರಿಗಳಲ್ಲಿ ತುರ್ತಾಗಿ ಆಗಬೇಕು ಎನ್ನುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು‌.

ರಾಜ್ಯದ ಅಭಿವೃದ್ಧಿಯ ಕನಸುಗಳನನ್ನು ಬಿಚ್ಚಿಟ್ಟ ಸಿಎಂ, ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು. ಅವು ಹೊಸ ಶಿಕ್ಷಣ ನೀತಿಯಲ್ಲಿವೆ. ಆದ್ದರಿಂದ ದೇಶದಲ್ಲೇ ನಾವೆ ಮೊದಲು ಹೊಸ ಶಿಕ್ಷಣ ನೀತಿ ಜಾರಿ ಮಾಡ್ತಿದ್ದೇವೆ ಎಂದರು.

ರಾಜ್ಯದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಸುವ ಯೋಜನೆ ಮಾಡ್ತಿದ್ದೇವೆ‌. ಟೆಕ್ಸ್ ಟೈಲ್ ಪಾರ್ಕ್, ಮೆಗಾ ಟೆಕ್ಸ್ ಟೈಲ್ ಗಳನ್ನ ಮಾಡೋ ಬಗ್ಗೆ ಮೊನ್ನೆ ದೆಹಲಿಗೆ ಹೋದಾಗ ಚರ್ಚೆ ಮಾಡಿದ್ದೇನೆ. ಇಡೀ ರಾಜ್ಯದಲ್ಲಿ ಡಿಜಟಲೀಕರಣ ಮಾಡೋ ವಿಚಾರವಿದೆ. ಇದಕ್ಕೆ ಈಗಾಗಲೆ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.

ಇನ್ನು ಹಾವೇರಿ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು‌ ಒಕ್ಕೂಟ ಮಾಡೋ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗ್ತಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಕೂಡ ಆಗಲಿದೆ. ನಮ್ಮ ಹಾವೇರಿ ಜಿಲ್ಲೆಯಲ್ಲಿ ಪ್ರತಿದಿನ ಎರಡು ಲಕ್ಷ ಲೀಟರ್ ವರೆಗೆ ಹಾಲು ಉತ್ಪಾದನೆ ಆಗುತ್ತದೆ. ಇಲ್ಲಿ ಉತ್ಪಾದನೆಯಾಗುವ ಹಾಲು ಸಂಸ್ಕರಣೆಯಾಗಿ ರಾಜ್ಯಾದ್ಯಂತ ಮಾರಾಟ ಆಗಲು ಅನುಕೂಲ ಆಗುತ್ತದೆ.

Advertisement

ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟದ ಅಗತ್ಯವಿತ್ತು. ಈ ಬಗ್ಗೆ ನಾವೆಲ್ಲರೂ ಹೋರಾಟ ಮಾಡಿದ್ದೆವು. ಇದರ ಜೊತೆಗೆ ಧಾರವಾಡ ಹಾಲು ಒಕ್ಕೂಟದ ಅಭಿವೃದ್ಧಿ ಕೂಡ ಮಾಡಲಾಗುತ್ತದೆ. ರೈತರಿಗೆ ಈಗಿರುವ ದರಕ್ಕಿಂತ ಹೆಚ್ಚಿನ ದರವನ್ನ ನಾವು ಕೊಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next