Advertisement

ಕುಷ್ಟಗಿಗೆ ಸಿಎಂ : ಹೆಲಿಕಾಪ್ಟರ್ ಬದಲಾಗಿ ರಸ್ತೆಯ ಮೂಲಕ ಬರುವ ಸಾಧ್ಯತೆ

10:46 AM Oct 12, 2022 | Team Udayavani |

ಕುಷ್ಟಗಿ : ಪ್ರತಿಕೂಲ ಹವಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೆಲಿಕಾಪ್ಟರ್ ನಲ್ಲಿ ಕುಷ್ಟಗಿಯಲ್ಲಿ ಬಂದಿಳಿಯುವ ಸಾಧ್ಯತೆ ಕಡಿಮೆ ಹಿನ್ನೆಲೆಯಲ್ಲಿ ಹೊಸಪೇಟೆಯಿಂದ ರಸ್ತೆಯ ಮೂಲಕ ಬರುವ ಸಾಧ್ಯತೆ ಇದೆ.

Advertisement

ನಿನ್ನೆ (ಮಂಗಳವಾರ) ಸಿಎಂ ಅವರ ಹೆಲಿಕಾಪ್ಟರ್ ವಿಜಯನಗರ ಜಿಲ್ಲೆ ಹಂಪಿ ಕನ್ನಡ ವಿ.ವಿ.ಯಲ್ಲಿ ಲ್ಯಾಂಡ್ ಆಗಬೇಕಿತ್ತು. ಹೀಗಾಗಿ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಇಳಿದು ರಸ್ತೆ ಮಾರ್ಗದ ಮೂಲಕ ಏರ್ ವೇಸ್ ನಲ್ಲಿ ಇಳಿದು ಕಮಲಾಪುರದ ಈವಲ್ ಹೋಟೆಲ್ ನಲ್ಲಿ ತಂಗಿರುವ ಮಾಹಿತಿ ಇದೆ.

ಕುಷ್ಟಗಿಯಲ್ಲಿಯೂ ಬುಧವಾರ ಬೆಳಗ್ಗೆ ತುಂತುರು ಮಳೆ ಶುರುವಾಗಿದ್ದು ಈ ಮಳೆಗೆ ಅನ್ನಪೂರ್ಣ ದೇವಸ್ಥಾನ ಪಕ್ಕದ ವೇದಿಕೆಯ ಅಕ್ಕ ಪಕ್ಕ ಒದ್ದೆಯಾಗಿದೆ. ಆದಾಗ್ಯೂ ಮಣ್ಣು ತಂದು ಹಾಕಿ ಸರಿ‌ಪಡಿಸುವ ಕಾರ್ಯ ನಡೆದಿದೆ. ಇನ್ನೂ ಸಿಎಂ ಬಂದಿಳಿಯುವ ಹೆಲಿಪ್ಯಾಡ್ ಸ್ಥಳ ಸಹ ಒದ್ದೆಯಾಗಿದ್ದು ರೂಲರ್ ಮೂಲಕ ಗಟ್ಟಿಗೊಳಿಸಲಾಗಿದೆ. ಮಧ್ಯಾಹ್ನದ ವೇಳೆ ಮಳೆ ಬಿಡುವು ನೀಡಿ ಬಿಸಿಲು ಡಳಾಯಿಸಿದರೆ ಮಾತ್ರ ಸಿಎಂ ನಿಗದಿಯಂತೆ ಹೆಲಿಕಾಪ್ಟರ್ ನಲ್ಲಿ ಬಂದಿಳಿಯುವ ಸಾಧ್ಯತೆ ಇದ್ದು ಬುಧವಾರ ಬೆಳಗಿನ ವಾತವರಣ ಮುಂದುವರೆದರೆ ಸಿಎಂ ಬೊಮ್ಮಾಯಿ ಅವರು ರಸ್ತೆಯ ಮೂಲಕ ಕುಷ್ಟಗಿ ಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕುರಿತು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಪ್ರತಿಕ್ರಿಯಿಸಿ ಕುಷ್ಟಗಿಯಲ್ಲಿ ಸದ್ಯ ಪ್ರತಿಕೂಲ ಹವಮಾನ ಇದೆ. ಸಿಎಂ ಕುಷ್ಟಗಿಗೆ ಆಗಮನ ಮಧ್ಯಾಹ್ನ 12ಕ್ಕೆ ಖಚಿತ ಮಾಹಿತಿ ದೊರೆಯಲಿದೆ.

ಇದನ್ನೂ ಓದಿ : Updates:ಶಿಕ್ಷಕರ ನೇಮಕಾತಿ ಹಗರಣ-ಬಂಧಿತ ಟಿಎಂಸಿ ಶಾಸಕ ಮಾಣಿಕ್ 14 ದಿನಗಳ ಕಾಲ ED ಕಸ್ಟಡಿಗೆ

Advertisement

Udayavani is now on Telegram. Click here to join our channel and stay updated with the latest news.

Next