Advertisement
ಕ್ಷೇತ್ರದ ನವೀಕರಣ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ಶಾರದಾ ದೇವಿಗೆ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು.
ಬೊಮ್ಮಾಯಿ ಅವರನ್ನು ಕಂಡ ಜನಾರ್ದನ ಪೂಜಾರಿ ಸಂತೋಷದಿಂದ ಆಲಂಗಿಸಿಕೊಂಡರು. ಅವರ ಮುಖ ಸವರಿ ಕೆಲ ಕ್ಷಣ ಭಾವುಕರಾದರು.
Related Articles
ಸುದ್ದಿಗಾರರ ಜತೆಗೆ ಮಾತನಾಡಿದ ಬೊಮ್ಮಾಯಿ, ನಾಡಿಗೆ ಸುಭಿಕ್ಷೆ ನೀಡುವಂತೆ, ಸುಖ-ಶಾಂತಿ ಯಿಂದ ಜನರು ಜೀವನ ನಡೆಸಲು ಶಕ್ತಿ ನೀಡುವಂತೆ ಶ್ರೀ ದೇವರಲ್ಲಿ ಪ್ರಾರ್ಥಿಸಿದ್ದೇನೆ. ಮೈಸೂರು ಬಿಟ್ಟರೆ ರಾಜ್ಯ ದಲ್ಲಿ ಖ್ಯಾತಿ ಪಡೆದ ಮಂಗಳೂರು ದಸರಾ ಉತ್ಸವಕ್ಕೆ ಸರಕಾರದಿಂದ
ಇನ್ನಷ್ಟು ಹೆಚ್ಚಿನ ನೆರವು ನೀಡುವ ನಿಟ್ಟಿನಲ್ಲಿ ಯತ್ನಿಸುವುದಾಗಿ ಅವರು ಉತ್ತರಿಸಿದರು.
Advertisement
ಸಚಿವರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಡಾ| ವೈ. ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ, ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಡಿಸಿ ಡಾ| ರಾಜೇಂದ್ರ ಕೆ.ವಿ.,ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್, ಕುದ್ರೋಳಿ ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ರವಿಶಂಕರ್ ಮಿಜಾರು, ಎಂ. ಶೇಖರ್ ಪೂಜಾರಿ, ಜಗದೀಪ್ ಡಿ. ಸುವರ್ಣ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ| ಬಿ.ಜಿ. ಸುವರ್ಣ, ಸದಸ್ಯರಾದ ವೇದಕುಮಾರ್, ರಾಧಾಕೃಷ್ಣ ಉರ್ವ ಉಪಸ್ಥಿತರಿದ್ದರು.
ಇದನ್ನೂ ಓದಿ:ಫೈನಲ್ ಪ್ರವೇಶಿಸಿದ ಕೋಲ್ಕತಾ ನೈಟ್‌ರೈಡರ್
ಪೂಜಾರಿ ನಾಡು ಕಂಡ ಬದ್ಧತೆಯ ನಾಯಕ“ಜನಾರ್ದನ ಪೂಜಾರಿ ಅವರು ಹಿರಿಯ ರಾಜಕಾರಣಿ. ನಾಡು ಕಂಡ ಬದ್ಧತೆಯ ನಾಯಕ. ವಿಶೇಷವಾಗಿ ಬಡವರು, ದೀನ ದಲಿತರ ಬಗ್ಗೆ ಕಳಕಳಿಯುಳ್ಳವರು. ನನ್ನ ತಂದೆಯವರೊಂದಿಗೆ ಅವರಿಗೆಬಹಳ ಆತ್ಮೀಯ ಒಡನಾಟ ಇತ್ತು. ಇಂದು ನನ್ನನ್ನು ಕಂಡು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡಿ ದ್ದಾರೆ. ಅವರ ಯೋಗಕ್ಷೇಮ ವಿಚಾರಿಸಿದ್ದೇನೆ. ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಇನ್ನೂ ಉತ್ತಮ ಕೆಲಸಕಾರ್ಯ ಮಾಡುವಂತೆ ಶಾರದಾ ಮಾತೆ ಅನುಗ್ರಹಿಸಲಿ ಎಂದು ಆಶೀರ್ವಾದ ಮಾಡಿದ್ದಾರೆ. ಅವರ ಭೇಟಿ ಯಿಂದಾಗಿ ನನಗೆ ಪ್ರೇರಣೆ ಹಾಗೂ ಶಕ್ತಿ ಬಂದಿದೆ’ ಎಂದು ಬೊಮ್ಮಾಯಿ ಹೇಳಿದರು.