Advertisement

ಕಲ್ಯಾಣ ಯೋಜನೆ ಪ್ರಕಟಿಸುವಾಗ ಸಿಎಂ ಭಾವುಕರಾಗಿದ್ದೇಕೆ?

03:29 PM Mar 16, 2022 | Team Udayavani |

ವಿಧಾನಸಭೆ : ತಾವು ಬಜೆಟ್ ನಲ್ಲಿ ಘೋಷಿಸಿರುವ ಕಲ್ಯಾಣ ಯೋಜನೆಗಳ ಬಗ್ಗೆ ಮಾತನಾಡುವಾಗ ಸಿಎಂ ಬಸವರಾಜ್ ಬೊಮ್ಮಾಯಿ ಭಾವುಕರಾಗಿದ್ದು ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ತಮ್ಮನ್ನು ” ಕಾಮನ್ ಮ್ಯಾನ್ ಸಿಎಂ” ಎಂದು ಯಾರಾದರೂ ಕರೆದರೆ ಖುಷಿಪಡುವ ಬೊಮ್ಮಾಯಿ ಜನಸಾಮಾನ್ಯರಿಗೆ ಅನ್ವಯವಾಗುವ ವಿಚಾರಗಳ ಬಗ್ಗೆ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಪ್ರಸ್ತಾಪಿಸುವಾಗ ಭಾವುಕರಾದರು.

Advertisement

ನಾನು ಘೋಷಿಸಿರುವ ವಿಚಾರಗಳು ದೊಡ್ಡದಲ್ಲ. ಆದರೆ ಜನಸಾಮಾನ್ಯರಿಗೆ ಇದರಿಂದ ತೃಪ್ತಿಯಾಗುತ್ತದೆ. ಸರಕಾರ ನಮ್ಮನ್ನು ಗುರುತಿಸಿದೆ ಎಂಬ ನೆಮ್ಮದಿ ಮೂಡುತ್ತದೆ. ಹೀಗಾಗಿ ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು.

ಸಮಾಜದಲ್ಲಿ ಯಾವುದಾದರೂ ವ್ಯಕ್ತಿ ಆಸಿಡ್ ದಾಳಿಗೆ ಒಳಗಾಗದರೆ ಅವರನ್ನು ಕುಟುಂಬ ಕಡೆಗಣಿಸುತ್ತದೆ. ಸಮಾಜ ತ್ಯಜಿಸುತ್ತದೆ. ಅವರ ಬದುಕು‌ ಮುಗಿದು ಹೋಗುತ್ತದೆ.‌ ಇದನ್ನು ಸರಕಾರ ಗಮನಿಸಿದ್ದು, ಅಂಥವರಿಗೆ ನೀಡುತ್ತಿದ್ದ ಪಿಂಚಣಿಯನ್ನು ಮೂರು ಸಾವಿರ ರೂ. ನಿಂದ ಹತ್ತು ಸಾವಿರ ರೂ.ಗೆ ಹೆಚ್ಚಳ ಮಾಡಿದೆ ಎಂದರು.‌

ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ನಾವಿ ಎಷ್ಟೋ ಸಂದರ್ಭದಲ್ಲಿ ಕೆಟ್ಟದಾಗಿ ಮಾತನಾಡುತ್ತೇವೆ. ಅವರ ವರ್ತನೆ ಬಗ್ಗೆ ನಮ್ಮಲ್ಲಿ ಆಕ್ಷೇಪ ಇದೆ. ಆದರೆ ಅವರೇಕೆ ಹಾಗೆ ವರ್ತಿಸುತ್ತಾರೆ ? ಎಂದು ನಾವು ಯೋಚಿಸುವುದಿಲ್ಲ. ಸಮಾಜದ ಕುರಿತಾಗಿ ಅವರಿಗೆ ಹತಾಶೆ ಕಾಡುತ್ತದೆ. ಹೀಗಾಗಿ ಉದ್ರೇಕವಾಗಿ ವರ್ತಿಸುತ್ತಾರೆ. ಅಂಥವರಿಗೆ ನೆರವಾಗಲು ಸರಕಾರ‌ ನಿರ್ಧರಿಸಿದ್ದು ಅವರಿಗೆ ಮನೆ ಕಟ್ಟಿಸಿಕೊಡಲು ನಿರ್ಧರಿಸಿದೆ ಎಂದರು.

ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಆರ್ಥಿಕವಾಗಿ ಪ್ರತಿಕೂಲ ಸನ್ನಿವೇಶವಿತ್ತು. ಕೋವಿಡ್ ನಿಂದ ಸಂಕಷ್ಟ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಬಜೆಟ್ ಗಾತ್ರ ಕುಗ್ಗಿಸಬೇಕಾಗಬಹುದೆಂಬ ಆತಂಕ ಸೃಷ್ಟಿಯಾಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಕರಸಂಗ್ರಹ ಹೆಚ್ಚಿದೆ. ಬಜೆಟ್ ಗಾತ್ರ ಹೆಚ್ಚಿದೆ ಎಂದು ಹೇಳಿದರು.

Advertisement

ಸರಕಾರದಿಂದಲೇ ಬೀಜ ಭದ್ರತೆ

ರೈತ ಸಮುದಾಯ ಸಂತಸಪಡುವ ವಿಚಾರವೊಂದನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಕಟಿಸಿದ್ದು,ಭವಿಷ್ಯದಲ್ಲಿ ಸರಕಾರದ ವತಿಯಿಂದಲೇ ಬೀಜ ಭದ್ರತೆ ನೀತಿ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಘೋಷಿಸಿದ್ದಾರೆ.

ಮಾಜಿ ಸಚಿವ ರಮೇಶ್ ಕುಮಾರ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು ರೈತರ ಸಂಕಷ್ಟದ ಬಗ್ಗೆ ಸರಕಾರಕ್ಕೆ ಸಂಪೂರ್ಣ ಅರಿವಿದೆ. ಫೌಂಡೇಶನ್ ಸೀಡ್ ಹಾಗೂ ಮದರ್ ಸೀಡ್ ವಿಚಾರದಲ್ಲಿ ನೀವು ಪ್ರಸ್ತಾಪಿಸಿದ ಸಂಗತಿ ಸತ್ಯವಾಗಿದೆ. ಖಾಸಗಿ ಹಾಗೂ ಸರಕಾರಿ ಹಂತದಲ್ಲಿ ಬೀಜ ಸುಧಾರಣೆಗೆ ಸಂಬಂಧಪಟ್ಟಂತೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದೆ. ಆದಾಗಿಯೂ ನಕಲಿ ಬೀಜಗಳಿಂದ ರೈತರು ಹಾನಿಗೆ ಒಳಗಾಗಿರುವ ಸಾಕಷ್ಟು ಉದಾಹರಣೆ ನಮ್ಮ ಮುಂದೆ ಇದೆ ಎಂದು ಹೇಳಿದರು.

ರೈತರಿಗೆ ಉತ್ತಮ‌ ಗುಣಮಟ್ಟದ ಬೀಜ ದೊರೆತಾಗ ಮಾತ್ರ ಉತ್ಕ್ರಷ್ಟ  ಬೆಳೆ ಬೆಳೆಯುವುದಕ್ಕೆ ಸಾಧ್ಯ. ಈ ಹಿನ್ನಲೆಯಲ್ಲಿ ಸರಕಾರದಿಂದಲೇ ಬೀಜಭದ್ರತೆ ಒದಗಿಸುವ ಬಗ್ಗೆ ನಿರ್ಧರಿಸಲಾಗಿದೆ. ಸದ್ಯದಲ್ಲೇ ಇದರ ರೂಪು ರೇಷೆಗಳನ್ನು ಸಿದ್ದಗೊಳಿಸುತ್ತೇವೆ.‌ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಚಿಂತನೆ ಆರಂಭವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next