Advertisement

ಧರ್ಮಪತ್ನಿ ಜತೆ ಕೆಆರ್ ಎಸ್, ಕಬಿನಿಗೆ ಬಾಗಿನ ಅರ್ಪಿಸಿದ ಸಿಎಂ ಬೊಮ್ಮಾಯಿ

01:42 PM Jul 20, 2022 | Team Udayavani |

ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಮತ್ತು ಶ್ರೀರಂಗಪಟ್ಟಣದ ಕೆಆರ್ ಎಸ್ ನಲ್ಲಿ ಕಾವೇರಿ‌ ಮಾತೆಗೆ ಬುಧವಾರ (ಜುಲೈ 20 )ಬಾಗಿನ ಅರ್ಪಿಸಿದರು.

Advertisement

ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿಂದ ಕಬಿನಿ ಜಲಾಶಯದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧರ್ಮಪತ್ನಿ ಜತೆ ಬಾಗಿನ ಅರ್ಪಿಸಿದರು. ಬಳಿಕ ಮಾತನಾಡಿದ ಅವರು, ಕಬಿನಿ ಜಲಾಶಯದ ಉದ್ಯಾನವನ ಸ್ವಲ್ಪ ಗೊಂದಲದಲ್ಲಿದೆ. ಈ ಒಂದು ಗೊಂದಲವನ್ನು ಆದಷ್ಟು ಬೇಗ ನಿವಾರಣೆ ಮಾಡಿ ಇದೇ ವರ್ಷ ಕಬಿನಿ ಜಲಾಶಯದ ಉದ್ಯಾನವನದ ಕಾಮಗಾರಿ ಆರಂಭಿಸುತ್ತೇವೆ ಎಂದು ತಿಳಿಸಿದರು.

ಹೆಚ್.ಡಿ.ಕೋಟೆ ತಾಲೂಕು ನಂಜುಂಡಪ್ಪ ವರದಿಯಲ್ಲೂ ಹಿಂದುಳಿದ ತಾಲೂಕು ಅಂತ ಇದೆ. ಅದರ ಸಮಗ್ರ ಅಭಿವೃದ್ಧಿಗೆ ವಿಶೇಷವಾದ ಕಾರ್ಯಕ್ರಮಗಳನ್ನು ಈಗಾಗಲೇ ರೂಪಿಸಿದ್ದೇವೆ. ವಿಶೇಷವಾಗಿ ಶಿಕ್ಷಣದಲ್ಲಿ ಅತಿ ಹೆಚ್ಚು ಶಾಲಾ ಕಟ್ಟಡ ತೆಗೆದುಕೊಳ್ಳುತ್ತೇವೆ. ಪಿಹೆಚ್ ಸಿ ಸೆಂಟರ್ ಅಭಿವೃದ್ಧಿ ಮಾಡಲಾಗುವುದು. ಶಾಸಕರಿಗೆ ಈಗಾಗಲೇ ಅನುದಾನ ನೀಡಿದ್ದೇನೆ. ಇನ್ನು ಕೆಲವು ಅನುದಾನ ರಸ್ತೆಗಳು, ಮೊನ್ನೆ ಮಳೆ ಬಂದಾಗ ಮನೆ ಬಿದ್ದಿರುವುದು ಅದನ್ನು ಕೂಡಲೇ ಜಿಲ್ಲಾಧಿಕಾರಿಗಳಿಗೆ ಆದೇಶಿಸಿ ಯಾವುದೇ ಮನೆ ಇರಲಿ ಯಾರ್ಯಾರ ಮನೆ ಬಿದ್ದಿದೆ, ಯಾವುದೇ ಗೊಂದಲ ನಿರ್ಮಾಣ ಮಾಡದೇ ಕೂಡಲೇ ಅನುದಾನ ನೀಡುವಂತೆ ಏರ್ಪಾಟು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸಚಿವರುಗಳಾದ ಗೋವಿಂದ ಕಾರಜೋಳ, ಎಸ್.ಟಿ.ಸೋಮಶೇಖರ್, ಶಾಸಕರುಗಳಾದ ಅನಿಲ್ ಚಿಕ್ಕಮಾದು, ಹರ್ಷವರ್ಧನ್ ಮತ್ತಿತರರು ಉಪಸ್ಥಿತರಿದ್ದರು.

Advertisement

ಕೆಆರ್ ಎಸ್ ನಲ್ಲಿ ಸಂಪ್ರದಾಯದಂತೆ ಜಲಾಶಯದ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದರು. ಉಸ್ತುವಾರಿ ಸಚಿವ ಗೋಪಾಲಯ್ಯ ಸಚಿವರಾದ ನಾರಾಯಣ ಗೌಡ,,ಎಸ್.ಟಿ ಸೋಮಶೇಖರ್, ಕಾರಜೋಳ,ಶಾಸಕ ರಾದ ರವೀಂದ್ರ ಶ್ರೀಕಂಠಯ್ಯ, ಶಾಸಕ ಪುಟ್ಟರಾಜು,ಸುರೇಶ್ ಗೌಡ,ಡಿ.ಸಿ.ತಮ್ಮಣ್ಣ ,ಮೈಸೂರು ಶಾಸಕ ನಾಗೇಂದ್ರ ಸೇರಿದಂತೆ ಇತರರ ಜನಪ್ರತಿ ನಿಧಿಗಳು,  ಅಧಿಕಾರಿಗಳು ಹಾಜರಿದ್ದರು.

ವೇದ ಬ್ರಹ್ಮ ಕೃಷ್ಣ ಭಟ್ ನೇತೃತ್ವದ ತಂಡ ವೈದಿಕರ ತಂಡ ಬಾಗಿನ ಪೂಜಾ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ನೇರವೇರಿಸಿದರು.  ಪೂರ್ಣ ಕುಂಭದೊಂದಿಗೆ ಮುಖ್ಯ ಮಂತ್ರಿಗಳನ್ನು ಜಿಲ್ಲಾಡಳಿತದ ವತಿಯಿಂದ ಸ್ವಾಗತಿಸಲಾಯಿತು. ನಂತರ ಕಾವೇರಿ ಪ್ರತಿಮೆಗೆ ಮುಖ್ಯ ಮಂತ್ರಿಗಳಿಂದ ಪೂಜೆ ಸಲ್ಲಿಸಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next