Advertisement

ಕಾವೇರಿ ಹೆಚ್ಚುವರಿ ನೀರಿಗೆ ತಮಿಳುನಾಡು ಕಣ್ಣು: ಇದಕ್ಕೆಲ್ಲಾ ಅವಕಾಶವಿಲ್ಲ ಎಂದ ಬಿಎಸ್ ವೈ

11:15 AM Feb 22, 2021 | Team Udayavani |

ಬೆಂಗಳೂರು: ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಸಿ ಕಾವೇರಿ-ಗುಂಡಾರ್ ನದಿ ಜೋಡಣೆಗೆ ಯೋಜನೆಗೆ ತಮಿಳುನಾಡು ಮುಂದಾಗಿದೆ. ಹೆಚ್ಚುವರಿ ನೀರು ಬಳಕೆಗೆ ಕರ್ನಾಟಕ ವಿರೋಧಿಸಿದ್ದು, ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಹೇಳಿಕೆ ಕೊಡುವುದರಿಂದ ಯಾವುದೇ ಉಪಯೋಗವಿಲ್ಲ. ಯಾವ ಕಾರಣಕ್ಕೂ ಮತ್ತೊಮ್ಮೆ ತಗೊಳ್ಳೋದು, ಕೊಡೋದಕ್ಕೆ ಅವಕಾಶ ಇಲ್ಲ ಎಂದರು.

ಇದನ್ನೂ ಓದಿ:ಡಿಎಂಕೆ ಹಿಂದೂ ವಿರೋಧಿ ಪಕ್ಷ, ಮತದಾರರು ತಕ್ಕ ಪಾಠ ಕಲಿಸಬೇಕು: ತೇಜಸ್ವಿ ಸೂರ್ಯ

ಈ ಸಂಬಂಧ ಬಿಗಿ ಕ್ರಮವನ್ನು ಕೈಗೊಳ್ಳುತ್ತೇವೆ. ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದರು.

ಬಜೆಟ್ ಸಭೆ ಇಂದು ಅಂತ್ಯ: ರಾಜ್ಯ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಇವತ್ತು ಎಲ್ಲಾ ಇಲಾಖೆಗಳ ಸಭೆ ಮುಗಿಯುತ್ತದೆ. ನಾಳೆಯಿಂದ ಬಜೆಟ್ ಸಿದ್ದತೆ ಗೆ ಏನೇನು ಮಾಡಬೇಕೋ ಅದನ್ನು ಮಾಡುತ್ತೇವೆ. ಬೇರೆ ಬೇರೆ ಇಲಾಖೆಗಳ ಪ್ರಮುಖರ ಜೊತೆ ಚರ್ಚೆ ಮಾಡುತ್ತೇನೆ.

Advertisement

ಸಚಿವರೇ ಉತ್ತರಿಸುತ್ತಾರೆ: ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ ಯಡಿಯೂರಪ್ಪ, ಇವತ್ತು ಪಂಚಮಸಾಲಿ ಸಮಾಜದ ಸಚಿವರು ಸುದ್ದಿಗೋಷ್ಟಿ ನಡೆಸುತ್ತಾರೆ. ಎಲ್ಲ ಪ್ರಶ್ನೆಗಳಿಗೂ ಸಚಿವರೇ ಉತ್ತರ ಕೊಡುತ್ತಾರೆ ಎಂದರು.

ಇದನ್ನೂ ಓದಿ:ಮತ್ತೆ ಕೋವಿಡ್ ಕಾಟ: ತಲಪಾಡಿ ಗಡಿಭಾಗದಲ್ಲಿ ಚೆಕ್ ಪೋಸ್ಟ್ ಪುನರಾರಂಭ

Advertisement

Udayavani is now on Telegram. Click here to join our channel and stay updated with the latest news.

Next