Advertisement

ಎಷ್ಟು ಕಟ್ಟೆಚ್ಚರ ವಹಿಸಿದರೂ ಕಡಿಮೆಯೇ.. ಕೋವಿಡ್ ರೂಪಾಂತರದ ಬಗ್ಗೆ ಸಿಎಂ ಎಚ್ಚರಿಕೆ

11:30 AM Dec 22, 2020 | keerthan |

ಬೆಂಗಳೂರು: ಕೋವಿಡ್-19 ಸೋಂಕು ರೂಪಾಂತರದ ವಿಚಾರ ಇಡೀ ರಾಜ್ಯ ಮತ್ತು ದೇಶದ ಜನರನ್ನು ಇದು ಆತಂಕಕ್ಕೀಡು ಮಾಡಿದೆ. ಚೆನ್ನೈಗೆ ಬಂದಿರುವ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಎಷ್ಟು ಕಟ್ಟೆಚ್ಚರ ವಹಿಸಿದರೂ ಕಡಿಮೆಯೇ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

Advertisement

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಹೊರಗಡೆಯಿಂದ ಯಾರೇ ಬಂದರೂ ವಿಮಾನ ನಿಲ್ದಾಣದಲ್ಲಿ ನೋಡಿ ಪರಿಶೀಲಿಸಿ ತಪಾಸಣೆ ಮಾಡುತ್ತೇವೆ. ದೇಶಾದ್ಯಂತ ಈಗಾಗಲೇ ಅಲರ್ಟ್ ಇದೆ. ಪ್ರಧಾನಿ ಕೂಡಾ ಆತಂಕಕ್ಕೊಳಗಾಗಿ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ವೈರಸ್ ಹರಡದಂತೆ ಬೇಕಿರುವ ಎಚ್ಚರಿಕೆ ವಹಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ:ಕೋವಿಡ್ ಸೋಲಿಸಿದ ಸೋಲಿಗರು!

ಈ ವರ್ಷ ಹೊಸ ವರ್ಷ ಆಚರಣೆಯೇ ಇಲ್ಲ. ಹೊಸ ವರ್ಷ ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡಲು ಬಿಡುವುದಿಲ್ಲ ಎಂದ ಅವರು ನಮ್ಮ ರಾಜ್ಯದಲ್ಲಿ ಸದ್ಯಕ್ಕೆ ನೈಟ್ ಕರ್ಫ್ಯೂ ಅಗತ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next