Advertisement

ಯುವಕನ ಚಿಕಿತ್ಸೆಗೆ ಸ್ಥಳದಲ್ಲೇ 3 ಲಕ್ಷ ಘೋಷಿಸಿದ ಸಿಎಂ

02:31 PM Oct 05, 2019 | Team Udayavani |

ಬೆಳಗಾವಿ: ಕರುಳು ಹಾಗೂ ಹೃದಯ ಬೇನೆಯಿಂದ ಬಳಲುತ್ತಿರುವ ಯುವಕನ ನೋವಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮೂರು ಲಕ್ಷ ರೂ. ತಕ್ಷಣ ಬಿಡುಗಡೆ ಮಾಡುವ ಮೂಲಕ ಸ್ಪಂದಿಸಿದರು.

Advertisement

ನಗರದ ಅತಿಥಿ ಗೃಹದಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಸಾರ್ವಜನಿಕರ ಅಹವಾಲು ಸ್ವೀಕಾರ ವೇಳೆ ಬಂದ ಮಜಗಾಂವಿಯ ಮಂಜುನಾಥ ಹೊಸಮನಿ ಮನವಿ ಸಲ್ಲಿಸಿದರು. ಯುವಕನ ಚಿಕಿತ್ಸೆಗೆ ಒಟ್ಟು ನಾಲ್ಕೂವರೆ ಲಕ್ಷ ರೂ. ಅಗತ್ಯವಿರುವುದನ್ನು ಅರಿತ ಕೂಡಲೇ ಮುಖ್ಯಮಂತ್ರಿಗಳು 2 ಲಕ್ಷ ರೂ. ಬಿಡುಗಡೆ ಮಾಡಲು ಆದೇಶಿಸಿದರು.

ಆಗ ಸ್ಥಳದಲ್ಲಿಯೇ ಇದ್ದ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಮುಖ್ಯಮಂತ್ರಿಗಳಿಗೆ ಇನ್ನೂ ಹೆಚ್ಚಿನ ಹಣ ನೀಡುವಂತೆ ಕೋರಿದಾಗ ಮತ್ತೆ ಒಂದು ಲಕ್ಷ ರೂ. ಹೆಚ್ಚಿಸಿ ಮೂರು ಲಕ್ಷ ರೂ. ನೀಡಿದರು. ಇನ್ನುಳಿದ ಹಣವನ್ನು ಕೆಎಲ್‌ಇ ಆಸ್ಪತ್ರೆಯಲ್ಲಿ ವಿನಾಯಿತಿ ನೀಡುವಂತೆ ಹೇಳುವ ಮೂಲಕ ಯುವಕನಿಗೆ ನೆರವಾದರು. ಯಡಿಯೂರಪ್ಪ ವೇದಿಕೆಗೆ ಆಗಮಿಸುತ್ತಿದ್ದಂತೆ ರೈತ ಸಂಘಟನೆಗಳ ಮುಖಂಡರು ಕೇಂದ್ರ ಮತ್ತು ರಾಜ್ಯಸರ್ಕಾರಗಳ ವಿರುದ್ಧ ಘೋಷಣೆ  ಕೂಗಿದರು.

ಆಗ ರೈತರ ಬಳಿಗೆ ತೆರಳಿದ ಯಡಿಯೂರಪ್ಪ, ನೀವು ಪ್ರತಿಭಟನೆ ನಡೆಸಬೇಕಿಲ್ಲ. ನಿಮ್ಮ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇನೆ. ರೈತರ ನೋವಿಗೆ ಸ್ಪಂದಿಸುವುದೇ ಸರ್ಕಾರದ ಕೆಲಸ. ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಅಭಯ ನೀಡಿದರು. ಸುಮಾರು 182 ಜನರು ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕರಾದ ಅಭಯ ಪಾಟೀಲ, ಮಹಾಂತೇಶ ದೊಡಗೌಡರ, ಮಹಾದೇವಪ್ಪ ಯಾದವಾಡ, ಜಿಲ್ಲಾ ಧಿಕಾರಿ ಡಾ. ಎಸ್‌.ಬಿ. ಬೊಮ್ಮನಹಳ್ಳಿ, ಜಿಪಂ ಸಿಇಒ ಡಾ| ಕೆ.ವಿ. ರಾಜೇಂದ್ರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಸಾರ್ವಜನಿಕರ ಅಹವಾಲು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಾರ್ವಜನಿಕರು ತಮ್ಮ ಬೇಡಿಕೆ ಈಡೇರಿಕೆಗಾಗಿ ಮನವಿ ಸಲ್ಲಿಸಿದ್ದಾರೆ. ಕೆಲವೊಂದನ್ನು ಸ್ಥಳದಲ್ಲಿಯೇ ಈಡೇರಿಸಲಾಗಿದೆ. ಇನ್ನುಳಿದಂತೆ ಹಂತ ಹಂತವಾಗಿ ಬೇಡಿಕೆ ಈಡೇರಲಿವೆ. ಯಾರೂ ಧೃತಿಗೆಡಬಾರದು. ಸರ್ಕಾರ ನಿಮ್ಮ ಬೆನ್ನಿಗೆ ನಿಂತು ಕೆಲಸ ಮಾಡಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next