Advertisement

ಸಿಎಂ ಒಪ್ಪಿದರೆ ಮದಲೂರು ಕೆರೆಗೆ ಹೇಮೆ: ಸಚಿವ ಮಾಧುಸ್ವಾಮಿ

04:54 PM Aug 14, 2021 | Team Udayavani |

ತುಮಕೂರು: ಮಾಜಿ ಸಚಿವರಾದವರು ಮಾತಿನಲ್ಲಿ ನಿಗಾ ಇಟ್ಟು ಕೊಂಡು ಮಾತನಾಡಬೇಕು, ನನ್ನ ಗಂಡಸ್‌ ತನದ ಬಗ್ಗೆ ಮಾತನಾಡಿದ್ದಾರೆ ನನ್ನ ಗಂಡಸ್‌ ತನ ಏನು ಎಂದು ರಾಜ್ಯಕ್ಕೆ ಗೊತ್ತಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ವಿರುದ್ಧ ಜಿಲ್ಲಾ ಉಸ್ತುವಾರಿ
ಸಚಿವ ಜೆ.ಸಿ.ಮಾಧುಸ್ವಾಮಿ ಕಿಡಿಕಾರಿದರು.

Advertisement

ನಗರದಲ್ಲಿ  ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮದಲೂರು ಕೆರೆಗೆ ನೀರು ಹರಿಸುವ ಕುರಿತು ಮಾಜಿ ಸಚಿವ ಟಿ.ಬಿ.ಜಯಚಂದ್ರ
ಅವರು ನನ್ನ ಗಂಡಸ್‌ ತನ ಕುರಿತು ಮಾತನಾಡಿದ್ದಾರೆ ನನ್ನ ಗಂಡಸ್‌ ತನ ಅವರಿಗೇನು ತಿಳಿದಿದೆ, ದೇವೇಗೌಡರ ಎದುರು ನಿಂತು ಜಿಲ್ಲೆಗೆ ಬರಬೇಕಾದ ನೀರನ್ನು ತರಲು ತಾಕತ್ತಿಲ್ಲದವರು, ನನ್ನ ಗಂಡಸುತನದ ಬಗ್ಗೆ ಪ್ರಶ್ನೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಕಾನೂನು ಬಾಹೀರ: ಜಯಚಂದ್ರ ಅವರು ನನ್ನಂತೆಯೇ ಕಾನೂನು, ಸಣ್ಣ ನೀರಾವರಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು. ಅವರು ಸಚಿವರಾಗಿದ್ದಾಗ ಎಷ್ಟು ಬಾರಿ ಮದಲೂರು ಕೆರೆಗೆ ನೀರು ಹರಿಸಿದ್ದಾರೆಂದು ಸಾಬೀತುಪಡಿಸಲಿ. ಬದಲಾಗಿ ಗಂಡಸ್‌ತನ ಎಂದೆಲ್ಲ ಮಾತನಾಡುವುದು ಶೋಭೆ ತರುವಂತಹುದಲ್ಲ. ಕೃಷ್ಣ ಬೇಸಿನ್‌ ವ್ಯಾಪ್ತಿಗೆ ಬರುವ ಶಿರಾಗೆ ಕಾವೇರಿ ಬೇಸಿನ್‌ ನೀರು ಹರಿಸುವುದು ಕಾನೂನು ಬಾಹಿರವೆಂದು ಅವರಿಗೆ ತಿಳಿದಿದೆ. ಆದಾಗ್ಯೂ ಮದಲೂರು ಕೆರೆಗೆ ನೀರು ಹರಿಸಬೇಕೆಂದು ಸಲ್ಲದ ಮಾತು, ಹೋರಾಟವೆಂದಲ್ಲ ಹೇಳಿ ಶಿರಾ ಜನರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಇಳಿದಿದ್ದಾರೆ. ತಾಕತ್ತಿದ್ದರೆ ಕಾವೇರಿ ಟ್ರಿಬ್ಯೂನಲ್‌ಗೆ ಹೋಗಿ ನೀರನ್ನು ಮದಲೂರು ಕೆರೆಗೆ ಅಲೋಕೇಟ್‌ ಮಾಡಿಸಿಕೊಂಡು ಬರಲಿ ಎಂದು ಜಯಚಂದ್ರರಿಗೆ ಸವಾಲು ಹಾಕಿದರು.

ಇದನ್ನೂ ಓದಿ:ಡಿಆರ್ ಎಸ್ ಗೆ ಹೊಸ ವ್ಯಾಖ್ಯಾನ ನೀಡಿದ ವಾಸಿಂ ಜಾಫರ್

ಪ್ರತಿ ಬಾರಿ ಹೀಗೆ ಮಾಡಲಾಗದು: ನಾನು ಹಾಗೂ ರಾಜೇಶ್‌ಗೌಡ ಶಿರಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಶಾಸಕರು. ನಮಗೆ ಶಿರಾ ಭಾಗದ ರೈತರ ಸಂಕಷ್ಟ ಗೊತ್ತಿದೆ. ಕಳೆದ ಬಾರಿ ಉಪ ಚುನಾವಣೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಭರವಸೆ ನೀಡಿದಾರೆಂಬ ಕಾರಣಕ್ಕೆ ಜಿಲ್ಲೆಯ ಹಂಚಿಕೆಯಾದ ಹೇಮಾವತಿ ನೀರಿನ ಪೈಕಿ ಚಿ.ನಾ.ಹಳ್ಳಿ, ಗುಬ್ಬಿ ಹಾಗಲವಾಡಿ, ಬಿ. ಕೆಗುಡ್ಡ ತಿಪಟೂರಿನ ಎರಡು ಕೆರೆಗಳಿಗೆ ಹರಿಸದೆ
ಉಳಿದ ನೀರನ್ನು ಮದಲೂರುಕೆರೆಗೆಹರಿಸಲಾಯಿತು. ಪ್ರತೀ ಬಾರಿಯೂ ಹೀಗೆ ಮಾಡಲು ಸಾಧ್ಯವಿಲ್ಲ. ಅಲೋಕೇಟ್‌ ಇಲ್ಲದೆ ನೀರು ಹರಿಸಿದರೆ ನೀರು ನಿರ್ವಹಣಾ ಪ್ರಾಧಿಕಾರ, ಸುಪ್ರೀಂಕೋರ್ಟ್‌ ಎದುರು ರಾಜ್ಯದ ಅಧಿಕಾರಿಗಳು ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಇದೇಕಾರಣಕ್ಕೆ ಜೈಲಿಗೆ ಹೋಗಬೇಕಾಗುತ್ತದೆ. ಮಧ್ಯಂತರ ಆದೇಶ ತೋರಿಸುವ ಜಯಚಂದ್ರ ಅವರು ಟ್ರಿಬ್ಯೂನಲ್‌ ಅಂತಿಮ ತೀರ್ಪಿನ ಬಗ್ಗೆ ಏಕೆ ಮಾತಾಡುವುದಿಲ್ಲ ಎಂದು ತಿವಿದರು.

Advertisement

ಸಿಎಂ ಆದೇಶ ಮಾಡಿದರೆ ಬಿಡಲು ಅಭ್ಯಂತರವಿಲ್ಲ:
ಜಯಚಂದ್ರ ಮಾತಾಡ್ತಾರೆ. ಹೋರಾಟ ಮಾಡ್ತಾರೆ ಅನ್ನೋ ಕಾರಣಕ್ಕೆ ಮದಲೂರು ಕೆರೆಗೆ ಹೇಮೆ ನೀರು ಹರಿಸಬಹುದು ಅನ್ಕೊಂಡಿದ್ದರೆ ಖಂಡಿತಾ ಅದು ಸಾಧ್ಯವಿಲ್ಲ. ಮದಲೂರು ಕೆರೆಗೆ ನೀರನ್ನು ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಯಡಿ ಅಲೋ ಕೇಟ್‌ ಮಾಡಲಾಗಿದ್ದು, ಕಳೆದ ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಮಾಡಿದ್ದ ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಯ ಪಾಲಿನ ಉಳಿಕೆ ನೀರನ್ನು ಮದಲೂರಿಗೆ ಬಿಡಲಾಯಿತು. ಹಾಲಿ ಸಿಎಂ ಬೊಮ್ಮಾಯಿ ಅವರು ಆದೇಶಮಾಡಿದರೆ ಬಿಡಲು ನನ್ನ ತಕರಾರಿಲ್ಲ. ಕಳಂಬೆಳ್ಳ ಕೆರೆಗೆ0.89 ಟಿಎಂಸಿ ನೀರು
ಅಲೋಕೇಟ್‌ ಆಗಿದೆ. ಅದನ್ನು ನಾನು ಜಯಚಂದ್ರ ಹತ್ತಿರ ಹೇಳಿಸಿಕೊಂಡು ಬಿಟ್ಟಿಲ್ಲ. ಮದಲೂರು ಕೆರೆಗೆ ನೀರು ಹರಿಸಲು 2 ಟಿಎಂಸಿ ನೀರಿನ ಅವಶ್ಯಕವಿದ್ದು  11 ಕೆರೆಗಳು, 12 ಬ್ಯಾರೇಜ್‌ ತುಂಬಿ ಮುಂದಕ್ಕೆ ಹರಿಯಬೇಕು ಎಂದು ಮಾಧುಸ್ವಾಮಿ ಹೇಳಿದರು.

ಸದಸ್ಯರು ಹಕ್ಕು ಚಲಾಯಿಸುವಂತಿಲ್ಲ: ಹುಳಿಯಾರು ಪಪಂ ವ್ಯಾಪ್ತಿಯಿಂದ ಗೆದ್ದವರು ಒಂದನ್ನು ಸ್ಪಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ಚುನಾವಣೆ ಬಳಿಕ ಅಧ್ಯಕ್ಷರ ಆಯ್ಕೆ ಬಳಿಕವಷ್ಟೇ ಅವರಿಗೆ ಸದಸ್ಯತ್ವದ ಹಕ್ಕು ಚಲಾಯಿಸುವ ಅವಕಾಶ ದೊರೆಯುವುದು.ಚುನಾವಣೆಯಲ್ಲಿ ಗೆದ್ದ ಪ್ರಮಾಣಪತ್ರ ಹಿಡಿದು ಮುಖ್ಯಾಧಿಕಾರಿಗಳ ಮೇಲೆ ಒಮ್ಮೆಗೆ ಬಂದು ಒತ್ತಡ ಹಾಕುವುದು ಕಾನೂನು ವಿರೋಧಿಯಾಗುತ್ತದೆ. ಜಯಚಂದ್ರ ಅವರು ಹುಳಿಯಾರಿಗೆ ಬಂದು ಪ್ರತಿಭಟನೆ ನೇತೃತ್ವ ವಹಿಸಿದ್ದು, ಅಲ್ಲಿ ಸಲ್ಲದವನು, ಇಲ್ಲಿ ಸಲ್ಲುವನೇ ಎಂದು ವ್ಯಂಗ್ಯವಾಡಿದರು.

ಟಿ.ಬಿ.ಜಯಚಂದ್ರಗೆ ಸಚಿವ ಮಾಧುಸ್ವಾಮಿ ಎಚ್ಚರಿಕೆ
ಮದಲೂರುಕೆರೆಗೆ ಅಲಾಟ್‌ಮೆಂಟ್‌ ಇಲ್ಲ, ಇದು ಜಯಚಂದ್ರ ಅವರಿಗೆ ಚನ್ನಾಗಿಯೇ ಗೊತ್ತು, ನಾನು ಶಿರಾ ಕ್ಷೇತ್ರಕ್ಕೆ ಸೇರಿದವನು, ಅವರು ಸೋತಕಡೆ ನಾನು ಗೆದ್ದಿದ್ದೇನೆ, ಅಲ್ಲಿಯ ಜನರ ಕಷ್ಟದ ಅರಿವಿದೆ, ಇದರಲ್ಲಿ ರಾಜಕಾರಣ ಬೇಡ, ನಾನು ಎರಡು ವರ್ಷದಲ್ಲಿ ಹೇಮಾವತಿ ನೀರನ್ನು ಸಮರ್ಥವಾಗಿ ಜಿಲ್ಲೆಗೆ ಬಳಸಿದ್ದೇನೆ, ಆದ್ದರಿಂದ ಶಾಸಕರು ಯಾರೂ ಮಾತನಾಡುತ್ತಿಲ್ಲ, ಅವರು ಬಳಸುವ ಭಾಷೆ ಸರಿ ಇರಬೇಕು ನನ್ನ ಭಾಷೆ ಅವರು ತಿಳಿದಿರಲಿ, ನಾನು ಅವರೂ ಒಂದೇ ತಾಲೂಕಿನವರು, ನನ್ನ ಬಗ್ಗೆ ಅವರಿಗೆ ತಿಳಿದಿದೆ ಇನ್ನು ಮುಂದಾದರೂ ಇಂತಹ ಭಾಷೆ ಬಳಸಬಾರದು ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಟಿ.ಬಿ.ಜಯಚಂದ್ರರಿಗೆ ಎಚ್ಚರಿಸಿದರು

ಹೇಮಾವತಿ ನೀರು ಹರಿಸುವ ವಿಚಾರದಲ್ಲಿ ಕಳೆದ ಎರಡು ವರ್ಷದಲ್ಲಿ ಯಾವ ಶಾಸಕರು ಬೊಟ್ಟು ಮಾಡದಂತೆ ಜಿಲ್ಲೆಗೆ 18 ಟಿಎಂಸಿ ನೀರು ಹರಿಸಿದ್ದೇನೆ. ಮಾಜಿ ಸಚಿವ ಜಯಚಂದ್ರ ಪ್ರಶ್ನೆ ಮಾಡಬೇಕಿಲ್ಲ. ಮೊದಲು ಕನ್ನಡಿಯಲ್ಲಿ ಅವರ ಮುಖನೋಡಿಕೊಳ್ಳಲಿ.
-ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next