Advertisement

Hosapete ಬಡವರಿಗೆ 2.42 ಲಕ್ಷ ಉಚಿತ ಮನೆ ನೀಡಲು ಸಿಎಂ ಒಪ್ಪಿಗೆ: ಸಚಿವ ಜಮೀರ್‌

06:44 PM Nov 03, 2023 | Team Udayavani |

ಹೊಸಪೇಟೆ:ಕಳೆದ ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ 2.42 ಲಕ್ಷ ಮನೆಗಳನ್ನು ಉಚಿತವಾಗಿ ನೀಡಲು ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್‌ ಗಾಂಧಿ ವಸತಿ ನಿಗಮದ ವತಿಯಿಂದ ಬಡವರಿಗೆ ಸೂರು ಕಲ್ಪಿಸಲು ರೂಪಿಸಿದ್ದ ಯೋಜನೆ ಫಲಾನುಭವಿಗಳ ವಂತಿಗೆ ಪಾವತಿ ಆಗದೆ ನನೆಗುದಿಗೆ ಬಿದ್ದಿದ್ದು, ಇದೀಗ ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಲಿದೆ.

ಸಿಎಂ ಸಿದ್ದರಾಮಯ್ಯ ಐದು ಗ್ಯಾರಂಟಿ ಜತೆಗೆ ಆರನೇ ಗ್ಯಾರಂಟಿ ಆಗಿ ಮುಂದಿನ ವರ್ಷದ ಅಂತ್ಯದೊಳಗೆ ಸೂರು ಒದಗಿಸುವ ಗುರಿ ಹಾಕಿಕೊಂಡಿದ್ದಾರೆ. ಅದಕ್ಕೆ ತಗಲುವ 8 ಸಾವಿರ ಕೋಟಿ ರೂ.ಗಳನ್ನು ಹಂತ ಹಂತವಾಗಿ ಒದಗಿಸುವ ಭರವಸೆ ನೀಡಿದ್ದು, ಮುಂದಿನ ವಾರ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಸಭೆ ಕರೆದಿದ್ದಾರೆ. ಈ ತೀರ್ಮಾನದಿಂದಾಗಿ 2.42 ಲಕ್ಷ ಕುಟುಂಬಗಳಿಗೆ ನೆಮ್ಮದಿ ದೊರಕಲಿದೆ. ಬ್ಯಾಂಕ್‌ ಸಾಲ ಸಿಗದೆ ಆತಂಕದಲ್ಲಿದ್ದವರು ನಿರಾಳ ಆಗಲಿದ್ದು, ಫಲಾನುಭವಿಗಳ ವಂತಿಗೆ ಇಲ್ಲದೆ ಮನೆ ಸಿಗಲಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next