Advertisement

Jammu and Kashmir; ಬದ್ಗಾಮ್ ಬಿಟ್ಟು ಗಂದರ್‌ಬಾಲ್‌ ಉಳಿಸಿಕೊಂಡ ಸಿಎಂ ಒಮರ್ ಅಬ್ದುಲ್ಲಾ

05:53 PM Oct 21, 2024 | Team Udayavani |

ಶ್ರೀನಗರ: ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಬುದ್ಗಾಮ್ ವಿಧಾನಸಭಾ ಸ್ಥಾನವನ್ನು ತೆರವು ಮಾಡಿ ಮತ್ತು ಗಂದರ್‌ಬಾಲ್‌ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ ಎಂದು ಹಂಗಾಮಿ ಸ್ಪೀಕರ್ ಮುಬಾರಕ್ ಗುಲ್ ಸೋಮವಾರ ಸದನದಲ್ಲಿ ಘೋಷಿಸಿದ್ದಾರೆ.

Advertisement

ವಿಧಾನಸಭಾ ಚುನಾವಣೆಯಲ್ಲಿ ಅಬ್ದುಲ್ಲಾ ಎರಡೂ ಸ್ಥಾನಗಳಲ್ಲಿ ಗೆದ್ದಿದ್ದರು. ಗಂದರ್‌ಬಾಲ್‌ ಅಬ್ದುಲ್ಲಾ ಕುಟುಂಬದ ಭದ್ರಕೋಟೆ ಎಂದು ಪರಿಗಣಿಸಲಾಗಿದೆ ಹಾಗಾಗಿ ಅದನ್ನು ಉಳಿಸಿಕೊಂಡಿದ್ದಾರೆ.

54 ರ ಹರೆಯದ ಒಮರ್ ಅಬ್ದುಲ್ಲಾರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾದ ಮೊದಲ ಅಧಿಕಾರಾವಧಿಯಲ್ಲಿ 2009 ರಿಂದ 2014 ರವರೆಗೆ ಗಂದರ್‌ಬಾಲ್‌ನಿಂದ ಶಾಸಕರಾಗಿದ್ದರು.

95 ಸದಸ್ಯ ಬಲದ ಸದನದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ಬಲವು 41 ಆಗಿದೆ. ಆರು ಕಾಂಗ್ರೆಸ್ ಶಾಸಕರು, ಐವರು ಪಕ್ಷೇತರರು, ಎಎಪಿ ಮತ್ತು ಸಿಪಿಐ(ಎಂ) ನ ತಲಾ ಒಬ್ಬ ಶಾಸಕರ ಬೆಂಬಲದೊಂದಿಗೆ ಪಕ್ಷ ಸ್ಪಷ್ಟ ಬಹುಮತವನ್ನು ಹೊಂದಿದೆ.

ಬದ್ಗಾಮ್ ನಲ್ಲಿ ಉಪಚುನಾವಣೆ ನಡೆಯಬೇಕಾಗಿದೆ. ಈ ಚುನಾವಣೆಯಲ್ಲಿ ಒಮರ್ ಅವರು ಪಿಡಿಪಿ ಅಭ್ಯರ್ಥಿ ಎದುರು 18,485 ಮತಗಳ ಅಂತರದ ಭರ್ಜರಿ ಗೆಲುವು ಸಾಧಿಸಿದ್ದರು. ಕ್ಷೇತ್ರವೂ ನ್ಯಾಷನಲ್ ಕಾನ್ಫರೆನ್ಸ್ ನ ಭದ್ರ ಕೋಟೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬದ್ಗಾಮ್ ಕ್ಷೇತ್ರ ಒಳಗೊಂಡಿರುವ ಬಾರಾಮುಲ್ಲಾ ಕ್ಷೇತ್ರದಲ್ಲಿ ಒಮರ್ ಅಬ್ದುಲ್ಲಾ ಅವರು ಜೈಲಿನಿಂದಲೇ ಪಕ್ಷೇತರನಾಗಿ ಕಣಕ್ಕಿಳಿದಿದ್ದ ಇಂಜಿನಿಯರ್ ರಶೀದ್ ಎದುರು ಆಘಾತಕಾರಿ ಸೋಲು ಅನುಭವಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next