Advertisement
ವಚನ ಪಾಲಿಸದ ಆಡಳಿತಕುಂಬಳೆ ನಿಲ್ದಾಣದ ಸುತ್ತಲೂ ವಾಹನಗಳ ಪಾರ್ಕಿಂಗ್ ಮತ್ತು ಸಂತೆಯ ಸಮಸ್ಯೆಯ ಕುರಿತು ಈ ಹಿಂದೆಯೇ ಉದಯವಾಣಿ ಆಡಳಿತದ ಗಮನ ಸೆಳೆದಿದೆ. ಪೊಲೀಸರಿಗೆ ದೂರು ಸಲ್ಲಿಸಿ ಸಮಸ್ಯೆಯನ್ನು ಕೂಡಲೇ ಪರಿಹರಿಸಲಾ ಗುವುದೆಂಬುದಾಗಿ ಗ್ರಾ.ಪಂ. ಅಧ್ಯಕ್ಷರು ಮತ್ತು ಪ್ರತಿಪಕ್ಷದ ವಾರ್ಡ್ ಪ್ರತಿನಿಧಿಯವರು ಭರವಸೆ ನೀಡಿ ತಿಂಗಳೇ ಸಂದರೂ ಇದು ಪಾಲನೆಯಾಗಿಲ್ಲ. ವಾಹನಗಳ ಮತ್ತು ಸಂತೆಯ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗಿ ಸಮಸ್ಯೆಯೂ ಅಧಿಕವಾಗುತ್ತಿದೆ.ಆದರೂ ಗ್ರಾ.ಪಂ.ಆಡಳಿತ ತೆಪ್ಪಗಿದ್ದು ದಿವ್ಯ ಮೌನ ಪಾಲಿಸುತ್ತಿದೆ.
ಅನೇಕ ವರ್ಷಗಳಿಂದ ಉಳಿದಿರುವ ಕುಂಬಳೆ ಪೇಟೆಯ ಶೌಚಾಲಯ ಸಮಸ್ಯೆ ಇನ್ನೂ ಪರಿಹಾರವಾಗದೆ ಉಳಿದಿದೆ.ಪೇಟೆಯಲ್ಲಿ ಸ್ಥಳ ಸಿಗದ ಕಾರಣ ಪೇಟೆಯಿಂದ ದೂರದ ಐಎಚ್‌ಆರ್‌ಡಿ ಕಾಲೇಜು ಬಳಿಯಲ್ಲಿ 25 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಆರಂಭಿಸಲಾಗಿದೆ. ಕೆಲವೊಂದು ಅಡ್ಡಿಯಿಂದ ಅರ್ಧದಲ್ಲಿ ಮೊಟಕುಗೊಂಡು ಇದೀಗ ಕಾಮಗಾರಿ ಮುಂದುವರಿಯುತ್ತಿದೆ. ಕಣಿಪುರ ಕ್ಷೇತ್ರ ಬಳಿಯ ರಸ್ತೆ ಪಕ್ಕದಲ್ಲಿ ನೂತನ ಶೌಚಾಲಯ ನಿರ್ಮಿಸಿದರೂ ಇದರಲ್ಲಿ ಮೂತ್ರಿಸಲು ಮಾತ್ರ ವ್ಯವಸ್ಥೆ ಮಾಡಲಾಗಿದೆ. ಇದರ ವಿದ್ಯುತ್ ಬಿಲ್ಲನ್ನು ಗ್ರಾಮ ಪಂಚಾಯತ್ ಪಾವತಿಸುತ್ತಿದೆ.ಆದರೆ ಪೇಟೆಯಲ್ಲಿ ಮಾತ್ರ ಶೌಚಾಲಯ ನಿರ್ಮಿಸಲು ಗ್ರಾ.ಪಂ.ಆಡಳಿತ ಮುಂದಾಗಿಲ್ಲವೆಂಬ ಆರೋಪ ಬಲವಾಗಿದೆ.ಆದುದರಿಂದ ಪೇಟೆಯಲ್ಲೊಂದು ಇ ಶೌಚಾಲಯವನ್ನಾದರೂ ನಿರ್ಮಿಸಲು ಮುಂದಾಗಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಸಮಸ್ಯೆಯ ಮೀನು ಮಾರುಕಟ್ಟೆ :
ಕುಂಬಳೆ ಮೀನು ಮಾರುಕಟ್ಟೆ ಅನೇಕ ವರ್ಷಗಳಿಂದ ಸದಾ ವಿವಾದಕ್ಕೆಡೆಯಾಗುತ್ತಿದೆ.ಗ್ರಾಮ ಪಂಚಾಯತ್ ಬೆಸ್ತರಿಗೆ ಮೀನು ಮಾರಲು ನಿರ್ಮಿಸಿದ ಮಾರುಕಟ್ಟೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲವೆಂಬುದಾಗಿ ಮೀನು ವ್ಯಾಪಾರ ಮಾರುಕಟ್ಟೆಯಿಂದ ಹೊರಗೆ ನಡೆಯುತ್ತಿದೆ.ಮಧ್ಯಾಹ್ನದ ಬಳಿಕ ಹೊರಗಿನ ರಸ್ತೆಯಲ್ಲೇ ಭರ್ಜರಿ ವ್ಯಾಪಾರ ಕುದುರುವುದು.ಹಲವು ಬಾರಿ ಇದಕ್ಕೆ ಪೊಲೀಸರು ಬೆತ್ತ ಬೀಸುವ ತನಕ ಮುಂದುವರಿದರೂ ಮತ್ತೆ ವ್ಯಾಪಾರ ಇಲ್ಲೇ ನಡೆಯುವುದು.ಮೀನಿನ ಮಲಿನ ನೀರು ರಸ್ತೆಯಲ್ಲಿ ಹರಿದು ಪೇಟೆ ಸೇರುವುದು.ಇದರಿಂದ ಮಾಲಿನ್ಯ ಸಮಸ್ಯೆಗೆ ಕಾರಣವಾಗಿದೆ.ಆರೋಗ್ಯ ಅಧಿಕಾರಿಗಳು ಕಣ್ಣೆತ್ತಿಯೂ ಮಾಲಿನ್ಯದತ್ತ ಲನೋಡುವುದಿಲ್ಲವೆಂಬ ಆರೋಪ ಸಾರ್ವಜನಿಕರದು.
Related Articles
ಗ್ರಾಮ ಪಂಚಾಯತಿನ 50ಲಕ್ಷ ನಿಧಿ ಸೇರಿಸಿ ಒಟ್ಟು 5 ಕೋಟಿ ನಿಧಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ .ವಾಣಿಜ್ಯ ಸಂಕೀರ್ಣ ಕಟ್ಟಡ ಮತ್ತು ಶೌಚಾಲಯವನ್ನು ಹೊಂದಿದ ಬಸ್ ನಿಲ್ದಾಣ ಮುಂದೆ ನಿರ್ಮಾಣವಾಗಲಿದೆ.ಈ ಮಧ್ಯೆ ಪೇಟೆಯಲ್ಲಿ 2 ಫೈಬರ್ ಶೌಚಾಲಯವನ್ನು ಸ್ಥಾಪಿಸಲಾಗುವುದು.ನಿಲ್ದಾಣ ಸುತ್ತ ನಾಹನ ಪಾರ್ಕಿಂಗ್ ಮತ್ತು ಸಂತೆ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು.
Advertisement
ಮೀನು ಮಾರಲು ನಿರ್ಮಿಸಿದ ಮಾರುಕಟ್ಟೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲವೆಂಬುದಾಗಿ ಮೀನು ವ್ಯಾಪಾರ ಮಾರುಕಟ್ಟೆಯಿಂದ ಹೊರಗೆ ನಡೆಯುತ್ತಿದೆ-ಕೆ. ಎಲ್. ಪುಂಡರಿಕಾಕ್ಷ , ಅಧ್ಯಕ್ಷರು ಕುಂಬಳೆ ಗ್ರಾ.ಪಂಚಾಯತ್ ಆಡಳಿತ ಮುಂದಾಗಿಲ್ಲ
ಪೇಟೆಯ ಪಾರ್ಕಿಂಗ್.ಶೌಚಾ ಲಯ,ಮಾಲಿನ್ಯ ಸಮಸ್ಯೆಗಳಿಗೆ ಪರಿಹಾರ ನೀಡಲು ತ್ತಾಯಿಸಿದರೂ ಇದಕ್ಕೆ ಆಡಳಿತ ಮುಂದಾಗಿಲ್ಲ.ನಮ್ಮ ಮೇಲೆ ಗೂಬೆ ಕೂರಿಸಲು ಆಡಳಿತ ಶ್ರಮಿಸುತ್ತಿದೆ.
-ಸುಧಾಕರ ಕಾಮತ್, ಬಿಜೆಪಿ ಗ್ರಾ.ಪಂ.ಸದಸ್ಯ ನಿರ್ಣಯ ಕೈಗೊಳ್ಳಲಾಗಿದೆ
ನಿಲ್ದಾಣ ಸುತ್ತ ವಾಹನ ಪಾರ್ಕಿಂಗ್ ಮತ್ತು ಪೇಟೆಯಲ್ಲಿ ಅಕ್ರಮ ಗೂಡಂಗಡಿ ಸ್ಥಾಪನೆಯನ್ನು ತೆರವುಗೊಳಿಸುವಂತೆ ಕಳೆದ 4 ತಿಂಗಳ ಹಿಂದೆಯೇ ಗ್ರಾಮಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
-ಕೆ.ರಮೇಶ ಭಟ್ , ವಾರ್ಡ್ ಸದಸ್ಯ ಅಚ್ಯುತ ಚೇವಾರ್