Advertisement
ಇಷ್ಟು ವರ್ಷಗಳ ಕಾಲ ಫೋಟೋ, ವಿಡಿಯೋ, ಸಂದೇಶಗಳ ಮೂಲಕ ವ್ಯವಹರಿಸಲು ಹಲವು ಸೋಶಿಯಲ್ ಮೀಡಿಯಾಗಳಿದ್ದವು. ಆದರೇ ವಾಯ್ಸ್ ಚಾಟ್ ನಡೆಸಲು ಪ್ರತ್ಯೇಕವಾದ ಆ್ಯಪ್ ಗಳಿರಲಿಲ್ಲ. ಇದ್ದರೂ ಪರಿಣಾಮಕಾರಿಯಾಗಿರಲಿಲ್ಲ. ಇದೀಗ ಬಂದಿರುವ ಕ್ಲಬ್ ಹೌಸ್ ಆ್ಯಪ್ ಈ ಎಲ್ಲಾ ಕೊರತೆಗಳನ್ನು ನೀಗಿಸಿದೆ. ಇಲ್ಲಿ ಸಾಮಾನ್ಯರಿಂದ ಹಿಡಿದು ಜನಪ್ರಿಯ ವ್ಯಕ್ತಿಗಳಿದ್ದಾರೆ. ಪ್ರತಿ ಮಾತುಕತೆಯೂ ಕೂಡ ಲೈವ್ ಮೂಲಕವೇ ಜರುಗುತ್ತವೆ. ಆದ್ದರಿಂದ ಆ್ಯಪ್ ಎಂಗೇಜ್ ಮೆಂಟ್ ಪ್ರಮಾಣವೂ ಹೆಚ್ಚಾಗುತ್ತಿದೆ.
Related Articles
Advertisement
ಈ ಆ್ಯಪ್ನಲ್ಲಿ ನಡೆಯುವ ಸಂಭಾಷಣೆಗಳ ರೆಕಾರ್ಡ್ ಮಾಡುವುದಕ್ಕೆ, ದಾಖಲಿಸುವುದಕ್ಕೆ, ಮತ್ತೊಮ್ಮೆ ಪ್ರಸಾರ ಮಾಡುವುದಕ್ಕೆ ಅವಕಾಶ ಇಲ್ಲ. ಉದಾ: ಎಲನ್ ಮಸ್ಕ್ ಕ್ಲಬ್ ಹೌಸ್ ಮೂಲಕ ಮಾತನಾಡುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಈ ಮಾತುಕತೆಯನ್ನು ಯಾರೂ ಬೇಕಾದರೂ ಕೇಳಿಸಿಕೊಳ್ಳಬಹುದು. ನಿಮಗೆ ಪ್ರಶ್ನೆ ಕೇಳಬೇಕೆಂದು ಅನಿಸಿದರೆ ‘ಕೈ ಗುರುತು’ ಇರುವ ಲೋಗೋವನ್ನು ಒತ್ತಿದರಾಯಿತು. ರೂಂ ಕ್ರಿಯೆಟ್ ಮಾಡಿದವರು ಪ್ರಶ್ನೆ ಕೇಳಲು ಅನುವು ಮಾಡಿಕೊಡುತ್ತಾರೆ.
ಇಲ್ಲಿ ನಿಮ್ಮದೆ ಆದ ಅಕೌಂಟ್ ಕ್ರಿಯೆಟ್ ಮಾಡಬಹುದು. ಪ್ರಸಿದ್ದ ವ್ಯಕ್ತಿಗಳನ್ನು, ನಿಮ್ಮ ಸ್ನೇಹಿತರನ್ನು “Follow” ಮಾಡಬಹುದು. ಇದೀಗ ಈ ಅಪ್ಲಿಕೇಶನ್ 2 ಮಿಲಿಯನ್ ಗಿಂತಲೂ ಹೆಚ್ಚು ಆ್ಯಂಡ್ರಾಯ್ಡ್ ಡೌನ್ ಲೋಡ್ ಗಳಾಗಿದೆ. ಮಾರ್ಕ್ ಜುಕರ್ ಬರ್ಗ್, ಎಲನ್ ಮಸ್ಕ್ ರಂತಹ ಜನಪ್ರಿಯ ವ್ಯಕ್ತಿಗಳು ಕೂಡ ಈ ಆ್ಯಪ್ ಬಳಸುತ್ತಿದ್ದಾರೆ.