Advertisement

ಮೋಡ-ಮಳೆ ಕಾಟ; ದ್ರಾಕ್ಷಿ ಬೆಳೆಗಾರರಿಗೆ ಸಂಕಷ್ಟ

05:43 PM Nov 20, 2021 | Team Udayavani |

ಐಗಳಿ: ಅಥಣಿ ತಾಲೂಕಿನಲ್ಲಿ ದ್ರಾಕ್ಷಿ ಪಡಗಳು ಮೊಗ್ಗು, ಹೂವು ಹಾಗೂ ಕಾಳು ಕಟ್ಟುವ ಹಂತದಲ್ಲಿದ್ದು, ಮಳೆಯಿಂದಾಗಿ ದ್ರಾಕ್ಷಿ ಕಾಳುಗಳು ಉದುರುತ್ತಿವೆ. ಅಲ್ಲದೆ ದಾವಣಿ ರೋಗ ಬಂದು ಪಡಗಳೇ ಹಾಳಾಗುತ್ತಿರುವುದರಿಂದ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಅಥಣಿ ತಾಲೂಕಿನ 4500 ಹೆಕ್ಟರ್‌ ಪ್ರದೇಶದಲ್ಲಿನ ಬಹುತೇಕ ಎಲ್ಲ ಬೆಳೆಗಾರರು ಅಕ್ಟೋಬರ್‌ ತಿಂಗಳಲ್ಲಿ ಚಾಟ್ನಿ ಮಾಡಿದ್ದು ಈಗ 26 ರಿಂದ 30 ದಿನಗಳಾಗಿವೆ.

Advertisement

ಎಲ್ಲ ಪಡಗಳು ಹೆಚ್ಚಾಗಿ ಹೂವು ಬಿಡುವ ಹಂತದಲ್ಲಿದ್ದು, ಮೋಡ ಮುಸುಕಿದ ವಾತಾವರಣ, ಕಳೆದ 4-5 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗೊನೆಯಲ್ಲಿ ನೀರು ನಿಂತು ಕಾಳುಗಳು ಉದುರಿ ಕೆಲವು ಪಡಗಳಲ್ಲಿ ಸಂಪೂರ್ಣ ಕಾಳುಗಳು ಖಾಲಿಯಾಗುತ್ತಿವೆ. ತಾಲೂಕಿನ ಬಡಚಿ, ಯಕ್ಕಂಚಿ, ಯಲಿಹಡಲಗಿ, ಅಡಹಳ್ಳಿ, ಅಡಹಳ್ಳಟ್ಟಿ, ಕೋಹಳ್ಳಿ, ಕಕಮರಿ, ರಾಮತೀರ್ಥ, ಕೊಟ್ಟಲಗಿ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ದ್ರಾಕ್ಷಿ ಬೆಳೆಗೆ ರೋಗ ತಗಲಿದೆ.

ಇದು ಬೆಳೆಗಾರರ ನಿದ್ದೆಗೆಡಿಸಿದ್ದು ಇಲಾಖೆ ಸೂಕ್ತ ಸಲಹೆ ಮತ್ತು ಪರಿಹಾರೋಪಾಯ ನೀಡಿ ಬೆಳೆಗಾರರ ಬದುಕಿಗೆ ಆಸರೆಯಾಗಬೇಕು ಎಂದು ಪ್ರಗತಿಪರ ದ್ರಾಕ್ಷಿ ಬೆಳೆಗಾರರಾದ ನೂರಅಹ್ಮದ ಡೊಂಗರಗಾಂವ, ಸಿ ಎಸ್‌ ನೇಮಗೌಡ, ಜಿ ಎಸ್‌ ಬಿರಾದಾರ, ಅಪ್ಪಾಸಾಬ ಮಾಕಾಣಿ, ಮೊದಲಾದವರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ತಾಲೂಕಿನಲ್ಲಿ ತುಂತುರು ಮಳೆ ಮತ್ತು ಮೋಡ ಕವಿದ ವಾತಾವರಣವಿರುವುದರಿಂದ ಗೊನೆಗಳಿಗೆ ಬಹುರೋಗ ತಗುಲಿದ್ದು ಕಾಳು ಉದುರುತ್ತಿವೆ. ಇದೇ ವಾತಾವರಣ ಮುಂದುವರೆದಲ್ಲಿ ಫ್ಲಾವರಿಂಗ್‌ ಹಂತದಲ್ಲಿರುವ ಬಹುತೇಕ ಪಡಗಳು ಗೊನೆ ಕಳೆದುಕೊಳ್ಳಲಿವೆ.
ಅಕ್ಷಯ ಉಪಾಧ್ಯಾಯ,

ತೋಟಗಾರಿಕೆ ಇಲಾಖೆ ಅಧಿಕಾರಿ, ತೆಲಸಂಗ ಹೋಬಳಿ. ಈಗ ಬಹುತೇಕ ದ್ರಾಕ್ಷಿ ಪಡಗಳು ಮಗ್ಗಿ ಮತ್ತು ಹೂವಿನ ಹಂತದಲಿದ್ದು ಪ್ರಸಕ್ತ ಹವಾಮಾನದಿಂದಾಗಿ ಇವುಗಳಿಗೆ ಡೌನಿ ಮತ್ತು ಕೊಳೆ ರೋಗ ಬಂದು ಕಾಳು ಉದರುತ್ತಿವೆ. ಇದರಿಂದ ಎಲ್ಲ ಬೆಳೆಗಾರರು ಸಂಪೂರ್ಣ ಹಾನಿ ಅನುಭವಿಸುತ್ತಿದ್ದು, ಇಲಾಖೆ ಅಧಿಕಾರಿಗಳು ತಕ್ಷಣ ಪರೀಕ್ಷಿಸಿ ಸರಕಾರಕ್ಕೆ ವರದಿ ನೀಡಿ ಬೆಳೆಗಾರರಿಗೆ ಆಸರೆಯಾಗಬೇಕು.
ಶಹಜಹಾನ ಡೊಂಗರಗಾಂವ

Advertisement

ಮಾಜಿ ಶಾಸಕರು ಹಾಗು ಪ್ರಗತಿಪರ ದ್ರಾಕ್ಷಿ ಬೆಳೆಗಾರರು, ಅಥಣಿ. ಕಳೆದ ನಾಲ್ಕಾರು ವರ್ಷಗಳ ಅಕಾಲಿಕ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಬಹಳಷ್ಟು ಹಾನಿಯಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದು ಈ ವರ್ಷವೂ ಈ ವಾತಾವರಣದಿಂದ ಕಾಳು ಉದರಿ ಹೋಗುತ್ತಿವೆ. ಇಲಾಖೆ ಹಾಗೂ ಸರಕಾರ ದ್ರಾಕ್ಷಿ ಬೆಳೆಗಾರರ ಹಿತರಕ್ಷಣೆಗೆ ಬರಬೇಕು.
ಆರ್‌ ಆರ್‌ ತೆಲಸಂಗ. ದ್ರಾಕ್ಷಿ ಬೆಳೆಗಾರ, ಐಗಳಿ.

ತಾಲೂಕಿನಲ್ಲಿ ಕಳೆದೆರಡು ದಿನಗಳ ಪ್ರತಿಕೂಲ ಹವಾಮಾನದಿಂದ ದ್ರಾಕ್ಷಿ ಗಿಡದಲ್ಲಿನ ಗೊನೆಗಳಿಗೆ ರೋಗ ಬಾಧೆಯಾಗಿ ಕಾಳು ಉದುರಲು ಪ್ರಾರಂಭವಾಗಿದ್ದು, ಇಂದಿನಿಂದಲೇ ಸರ್ವೇ ಮಾಡಿ ಸಮರ್ಗ ಮಾಹಿತಿಯನ್ನ ತಜ್ಞರಿಗೆ ಮತ್ತು ಇಲಾಖೆ ಮೇಲಾಧಿಕಾರಿಗಳಿಗೆ ಸಲ್ಲಿಸುತ್ತೇವೆ.
ಶ್ವೇತಾ ಹಾಡ್ಕರ, ಹಿರಿಯ ಸಹಾಯಕ ನಿರ್ದೇಶಕರು,
ತೋಟಗಾರಿಕೆ ಇಲಾಖೆ, ಅಥಣಿ.

*ಸುಭಾಸ ಚಮಕೇರಿ

Advertisement

Udayavani is now on Telegram. Click here to join our channel and stay updated with the latest news.

Next