Advertisement

ಇನ್ಫೋಸಿಸ್ ನಿಂದ ಕ್ಲೌಡ್ ರಾಡಾರ್ 2021 ಅನಾವರಣ

04:26 PM May 27, 2021 | Team Udayavani |

ಬೆಂಗಳೂರು: ಭವಿಷ್ಯದ ಪೀಳಿಗೆಯ ಡಿಜಿಟಲ್ ಸೇವೆಗಳು ಮತ್ತು ಕನ್ಸಲ್ಟಿಂಗ್ ನಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾದ ಇನ್ಫೋಸಿಸ್ (NYSE: INFY) ಇನ್ಫೋಸಿಸ್ ಕ್ಲೌಡ್ ರಾಡಾರ್ 2021 ಅನ್ನು ಅನಾವರಣಗೊಳಿಸಿದೆ.

Advertisement

ಇದು ಉದ್ದಿಮೆ ಕ್ಲೌಡ್ ಬಳಕೆ ಮತ್ತು ವ್ಯಾಪಾರ ಬೆಳವಣಿಗೆ ನಡುವಿನ ಸಂಪರ್ಕದ ಕೊಂಡಿಯಾಗಿ ಕಾರ್ಯ ನಿರ್ವಹಿಸಲಿದೆ. 6 ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ ಒಂದು ಸ್ವತಂತ್ರ ಅಧ್ಯಯನದ ಪ್ರಕಾರ ಸಮರ್ಪಕವಾದ ಕ್ಲೌಡ್ ಅಳವಡಿಕೆ ಮಾಡಿಕೊಂಡಲ್ಲಿ 414 ಬಿಲಿಯನ್ ಡಾಲರ್ ವರೆಗೆ ನಿವ್ವಳ ಲಾಭಗಳನ್ನು ಗಳಿಸಲು ಸಾಧ್ಯವಾಗುತ್ತದೆ.

ಇನ್ಫೋಸಿಸ್ ನ ಸಂಶೋಧನಾ ವಿಭಾಗವಾಗಿರುವ ಇನ್ಫೋಸಿಸ್ ನಾಲೆಜ್ ಇನ್ ಸ್ಟಿಟ್ಯೂಟ್ (ಐಕೆಐ) ಈ ಕ್ಲೌಡ್ ರಾಡಾರ್ 2021 ರ ಸಮೀಕ್ಷೆಯನ್ನು ಕೈಗೊಂಡಿದೆ. ಈ ಸಮೀಕ್ಷೆಯಲ್ಲಿ ಯುಎಸ್, ಯುಕೆ, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನ 2,500 ಕ್ಕೂ ಅಧಿಕ ಕಂಪನಿಗಳು ಕ್ಲೌಡ್ ಬಳಕೆ ವಿಚಾರದಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿವೆ. ಇದು ಕ್ಲೌಡ್ ಗೆ ಸಂಬಂಧಿಸಿದಂತೆ ವ್ಯಾಪಾರ ಕಾರ್ಯದಕ್ಷತೆಯ ಗುರಿಗಳ ವ್ಯಾಪ್ತಿಯನ್ನು ಒಳಗೊಂಡಿದೆ ಮತ್ತು ಮಾರುಕಟ್ಟೆಯ ವೇಗ ಹಾಗೂ ಸಾಮರ್ಥ್ಯಗಳ ನಿರ್ದಿಷ್ಟವಾದ ಸಂಪರ್ಕಗಳನ್ನು ಪತ್ತೆ ಮಾಡಿದೆ. ಹೊಸ ಪರಿಹಾರಗಳು ಮತ್ತು ಸೇವೆಗಳನ್ನು ಕ್ಷಿಪ್ರವಾಗಿ ಮಾರುಕಟ್ಟೆಗೆ ತರುವಾಗ ಕ್ಲೌಡ್ ಬಳಸಿಕೊಂಡಾಗ ಪ್ರಬಲವಾದ ಲಾಭದ ಸಂಪರ್ಕ ಅಂದರೆ ಲಿಂಕ್ ಅನ್ನು ಗುರುತಿಸಲಾಗಿದೆ. ಈ ಹೂಡಿಕೆಗಳು ಎಐ ಮತ್ತು ಆಟೋಮೇಷನ್ ಮೇಲೆ ಪ್ರಭಾವ ಬೀರುವಂತಹ ಮತ್ತು ಕ್ಲೌಡ್ ಆಧಾರಿತ ಹೊಸ ಆದಾಯದ ಮೂಲಗಳನ್ನು ಹೊಂದಲು ಒಂದು ಅಡಿಪಾಯವನ್ನು ಹಾಕಿಕೊಡುತ್ತವೆ.

ವ್ಯಾಪಾರದಲ್ಲಿನ ಲಾಭದ ಪ್ರಗತಿ ಮತ್ತು ಹೊಸ ಪರಿಹಾರಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ಹಾಗೂ ಆರಂಭ ಮಾಡಲು ಮಾರುಕಟ್ಟೆಗೆ ಹೊಸ ಕಾರ್ಯಸೂಚಿಯನ್ನು ತರಲು ಕ್ಲೌಡ್ ಬಳಕೆಯ ನಡುವಿನ ನಿರ್ದಿಷ್ಟ ಲಿಂಕ್ ಗಳು ಈ ಅಧ್ಯಯನದ ವೇಳೆ ಕಂಡುಬಂದಿವೆ. ಇದಲ್ಲದೇ ಡೇಟಾದಿಂದ ಹೊಸ ಮೌಲ್ಯವನ್ನು ಉತ್ಪಾದಿಸುವ ಹಾಗೂ ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳುವ ಕ್ಲೌಡ್ ಸಾಮರ್ಥ್ಯವು ಲಾಭದ ಬೆಳವಣಿಗೆಗೆ ಲಿಂಕ್ ಗಳನ್ನು ಕಲ್ಪಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next