Advertisement
ಆ್ಯಪ್‌ನಲ್ಲಿ ಏನೆಲ್ಲಾ ಮಾಹಿತಿ ಲಭ್ಯ?ನೂತನ ಆ್ಯಪ್‌ನಲ್ಲಿ ಸದ್ಯದ ಹವಾಮಾನ ಮುನ್ಸೂಚನೆ ಸಿಗಲಿದೆ. ಆಯಾ ನಿಗದಿತ ಪ್ರದೇಶದ ಪ್ರಸ್ತುತ ಉಷ್ಣಾಂಶ, ಮಳೆ ಪ್ರಮಾಣ, ಗಾಳಿಯ ವೇಗ, ಮೋಡದ ಕುರಿತಂತೆ ಮಾಹಿತಿ ಲಭ್ಯವಾಗಲಿದೆ. “ಮೇಘ ಸಂದೇಶ’ ಆ್ಯಪ್‌ನಲ್ಲಿರುವಂತೆಯೇ ನಾವು ಹೊರಟ ಸ್ಥಳ ಮತ್ತು ತಲುಪುವ ನಿರ್ದಿಷ್ಟ ಸ್ಥಳದ ಹವಾಮಾನ ಪರಿಸ್ಥಿತಿ ಹೇಗಿದೆ ಎಂಬ ಮಾಹಿತಿ ಕೂಡ ಸಿಗಲಿದೆ.
ರಾಜ್ಯದಲ್ಲಿ ಈಗಾಗಲೇ ಮಳೆಗಾಲ ಆರಂಭ ವಾಗಿದ್ದು, ಸಾಮಾನ್ಯವಾಗಿ ಗುಡುಗು, ಸಿಡಿಲು, ಗಾಳಿ ಯಿಂದ ಕೂಡಿರುತ್ತದೆ. ಈ ಬಗ್ಗೆ ಗ್ರಾಮೀಣ
ಪ್ರದೇಶದ ಮಂದಿಗೆ ಅರಿವು ಅಗತ್ಯ. ತೋಟ, ಹೊಲ, ಗದ್ದೆ ಗಳಲ್ಲಿರುವ ರೈತರಿಗೆ ಹವಾಮಾನ ಮಾಹಿತಿ ಮುಖ್ಯ. ಈ ನಿಟ್ಟಿನಲ್ಲಿ, ಕೆಎಸ್‌ಎನ್‌ಡಿಎಂಸಿ ಈಗಾಗಲೇ “ಸಿಡಿಲು’ ಎಂಬ ಹೆಸರಿನ ಆ್ಯಪ್ ಅಭಿವೃದ್ಧಿಪಡಿಸಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯ ವಿ ರುವ ಈ ಆ್ಯಪ್ ಮೂಲಕ ಮಿಂಚು, ಚಂಡ ಮಾರುತದ ಮುನ್ಸೂಚನೆಯನ್ನು ಪಡೆಯಲು ಸಾಧ್ಯ. ಅಂತರ್ಜಾಲ ಆಧಾರಿತ ಅಪ್ಲಿಕೇಶನ್, ಗೂಗಲ್ ಮ್ಯಾಪ್, ಜಿಪಿಎಸ್ ಆಧಾರದಲ್ಲಿ ಗ್ರಾಹಕನ ಸ್ಥಳ ಪತ್ತೆ ಮಾಡಿ ಆ ಸ್ಥಳದ ಹವಾಮಾನದ ಬಗ್ಗೆ ಮಾಹಿತಿ ನೀಡಲು ಸಹಕಾರಿಯಾಗುತ್ತದೆ. ಸಿಡಿಲು ಆ್ಯಪ್ಲಿ ಕೇಶನ್ ಡೌನ್‌ಲೋಡ್ ಮಾಡಿದ ಬಳಿಕ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾಹಿತಿ ಪಡೆಯಬಹುದು. ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ
ಮಳೆ ಸೇರಿದಂತೆ ಹವಾಮಾನ ಮುನ್ಸೂಚನೆ ಪಡೆಯುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ “ಮೇಘ ಸಂದೇಶ’ ಎಂಬ ಆ್ಯಪ್ ಅಭಿವೃದ್ಧಿಪಡಿಸಿದ್ದು, ಸದ್ಯ ಹವಾಮಾನ ಮಾಹಿತಿ ದೊರಕುತ್ತಿದೆ. ಈ ವ್ಯವಸ್ಥೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಬೇಕು ಎಂಬ ಯೋಜನೆ ಇದ್ದು, ರಾಜ್ಯ ಮಟ್ಟದ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ.
– ಶ್ರೀನಿವಾಸ ರೆಡ್ಡಿ, ಕೆಎಸ್‌ಎನ್‌ಡಿಎಂಸಿ ನಿರ್ದೇಶಕರು