Advertisement
ಸ್ಮಾರ್ಟ್‌ಫೋನ್‌ಲ್ಲೇ ಹವಾಮಾನ ಆಧಾರಿತ ಕೃಷಿ, ಮೀನುಗಾರಿಕೆ ಹವಾಮಾನ ಬದಲಾವಣೆಯ ಮಾಹಿತಿಗಳನ್ನು ಈ ಆ್ಯಪ್ ಮೂಲಕ ಪಡೆಯಬಹುದು. ವಾರದ ಹವಾಮಾನವನ್ನು ನಿಖರವಾಗಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಅಪ್‌ಡೇಟ್ ಮಾಡಿಕೊಡುತ್ತದೆ. ಒಟ್ಟು 10 ಭಾಷೆಗಳಲ್ಲಿ ಮಾಹಿತಿಯನ್ನು ಪಡೆಯಬಹುದು.
ಮೊದಲ ಬಾರಿಗೆ ಬಳಸುವವರು ಗೂಗಲ್ ಪ್ಲೇಸ್ಟೋರ್, ಗೂಗಲ್ ಕ್ರೋಮ್ ಅಥವಾ ಇತರ ಬ್ರೌಸರ್‌ನಲ್ಲಿ https/meghdoot.agro@imd.gov.in ಟೈಪ್ ಮಾಡಿದಾಗ ಮೇಘದೂತ್ ಆ್ಯಪ್‌ನ ಹೋಂ ಪೇಜ್ ಬರುತ್ತದೆ ಇಲ್ಲಿ ಇನ್‌ಸ್ಟಾಲ್‌ಗೆ ಕ್ಲಿಕ್ ಮಾಡಬೇಕು. ಆ್ಯಪ್ ಡೌನ್ಲೋಡ್ ಆದರ ಬಳಿಕ ನೊಂದಣಿ ಮಾಡಲು ಭಾಷೆಯ ಆಯ್ಕೆ, ಹೆಸರು, ದೂರವಾಣಿ ಸಂಖ್ಯೆ, ರಾಜ್ಯ ಮತ್ತು ಜಿಲ್ಲೆಯನ್ನು ಆಯ್ಕೆ ಮಾಡಿ ನೋಂದಣಿ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ನೋಂದಣಿಯಾಗಿರುವುದಾಗಿ ಮೊಬೈಲ್ ಪರದೆಯ ಮೇಲೆ ಹೆಸರು ಮೂಡುತ್ತದೆ. ಇದಾದ ನಂತರ ಲಾಗಿನ್ ಆಗಬಹುದು. ನಾಲ್ಕು ಹಂತದ ಮಾಹಿತಿ
ಹಿಂದಿನ 10 ದಿನಗಳ ಹವಾಮಾನ ವರದಿಯ ಮಾಹಿತಿಯನ್ನು ಪಡೆಯಬಹುದು. ಪ್ರತಿ ದಿನದ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಹಾಗೂ ಮಳೆಯ ಪ್ರಮಾಣ ಕುರಿತಾದ ಮಾಹಿತಿಯು ಲಭ್ಯವಿರುತ್ತದೆ. ಮುಂದಿನ 5 ದಿವಸಗಳ ಗರಿಷ್ಠ ಮತ್ತು ಕನಿಷ್ಠ ತಾಪಮಾನ , ಆದ್ರತೆ, ಮಳೆ ಪ್ರಮಾಣ, ಮೋಡಗಳ ಮಾಹಿತಿ, ಗಾಳಿಯ ದಿಕ್ಕು ಮತ್ತು ವೇಗಗಳ ಕುರಿತು ಮುನ್ಸೂಚನೆಯ ಮಾಹಿತಿಯನ್ನು ಪಡೆಯಬಹುದು.
Related Articles
Advertisement
ಅನುಕೂಲಬದಲಾಗುತ್ತಿರುವ ಹವಾಮಾನ ವೈಪರೀತ್ಯದಿಂದ ರೈತರು ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದಕ್ಕಾಗಿ ಹವಾಮಾನ ಮುನ್ಸೂಚನೆ ಆಧರಿಸಿ ನೀಡುವ ಸಲಹೆ ಅನುಸರಿಸುವುದು ಅವಶ್ಯ. ಇದರಿಂದ ಬೆಳೆ ನಷ್ಟವನ್ನು ಕಡಿಮೆ ಮಾಡಿಕೊಂಡು ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆ. ಈ ಆ್ಯಪ್ ಕೃಷಿಕರು, ಮೀನುಗಾರರು, ಜನಸಾಮಾನ್ಯರಿಗೆ ಅನುಕೂಲವಾಗಲಿದೆ.
-ರಂಜಿತ್. ಟಿ. ಎಚ್., ತಾಂತ್ರಿಕ ಅಧಿಕಾರಿ ಲಾಭ ಹೇಗೆ
ದೇಶೀಯವಾಗಿ ಅಭಿವೃದ್ಧಿಗೊ ಳಿಸಿರುವುದರಿಂದಾಗಿ ನಿಖರ ಮಾಹಿತಿ ದೊರೆಯಲಿದೆ. ಮುಖ್ಯವಾಗಿ ಕರಾವಳಿ ಭಾಗದಲ್ಲಿ ಮೀನುಗಾರಿಕೆಗೆ ಅಗತ್ಯವಾದ ವಾತಾವರಣವನ್ನು ತಿಳಿಯಲು ಹಾಗೇ ಕೃಷಿ ಚಟುವಟಿಕೆಗೆ ಅಗತ್ಯವಾದ ಮಾಹಿತಿಯನ್ನು ಪಡೆಯಬಹುದಾಗಿದೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಜಾನುವಾರು, ಕೋಳಿ, ಕುರಿ ಸಾಕಾಣಿಕೆ, ರೇಷ್ಮೆ ಕೃಷಿಯ ಮಾಹಿತಿಯನ್ನೂ ಒಳಗೊಂಡಿದೆ. ಋತುವಿಗೆ ಅನುಗುಣವಾಗಿ ಜಾನುವಾರುಗಳಲ್ಲಿ ಬರಬಹುದಾದ ಕಾಯಿಲೆ, ಲಸಿಕೆ ಜತೆಗೆ ಯಾವ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂಬ ಮಾಹಿತಿಯೂ ಇರಲಿದೆ.