Advertisement
ಕನಕಮಜಲು ಯುವಕ ಮಂಡಲವು ಮಂಗಳೂರಿನ ಮಹಾಲಸಾ ಚಿತ್ರಕಲಾ ಶಾಲೆಯ ಸಹಯೋಗದಲ್ಲಿ, ಕನಕಮಜಲು ಗ್ರಾ.ಪಂ. ಹಾಗೂ ಜಾಲ್ಸೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಭಾಗಿತ್ವದಲ್ಲಿ ನ. 11ರಿಂದ ಒಂದು ವಾರದ ಅವಧಿಯ ಸುಯೋಗ ನಿಸರ್ಗ ಚಿತ್ರಕಲಾ ಶಿಬಿರವನ್ನು ಆಯೋಜಿಸಿದೆ. ವಿದ್ಯಾರ್ಥಿಗಳು ಪ್ರಕೃತಿಯ ಮಡಿಲಿನಲ್ಲಿ ಕುಳಿತು ನಿಸರ್ಗದ ಚಿತ್ರಗಳನ್ನು ಆತ್ಯಾಕರ್ಷಕವಾಗಿ ಬಿಡಿಸಿದರು. ಕನಕಮಜಲು ಗ್ರಾಮದ ಮೂರ್ಜೆ ಶ್ರೀ ಬಾಲ ನಿಲಯದಲ್ಲಿ ನಡೆದ ಶಿಬಿರದಲ್ಲಿ 33 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಲಾತ್ಮಕ ಚಿಂತನೆಯುಳ್ಳ ವಿದ್ಯಾರ್ಥಿಗಳು ಹಳ್ಳಿಯ ಬದುಕು, ಸಂಪ್ರದಾಯಗಳು ಹಾಗೂ ನಿಸರ್ಗದ ಸೊಬಗನ್ನು ಕುಂಚದಲ್ಲಿ ಮೂಡಿಸಿದರು. ಕಾಡಿನಿಂದ ಕೂಡಿದ ರಸ್ತೆಗಳು, ಜನ ನಡೆದಾಡುವ ಹಾದಿಗಳು, ಹಳೆಯ ಹಂಚಿನ ಮನೆಗಳು, ಹಟ್ಟಿ – ಹೀಗೆ ಗ್ರಾಮ್ಯ ಸ್ವರೂಪವನ್ನೇ ನೋಡಿಕೊಂಡು ಸ್ಥಳದಲ್ಲೇ ಚಿತ್ರಗಳನ್ನು ಬಿಡಿಸಿ, ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದರು.
Related Articles
ನಡೆಯಿತು. ಬಳಿಕ ಮನೋರಂಜನ ಕಾರ್ಯಕ್ರಮಗಳಿದ್ದವು.
Advertisement
ಸುಂದರ ಅನುಭವಇದೊಂದು ವಿಭಿನ್ನ ಅವಕಾಶ, ನಗರ ಪ್ರದೇಶದಿಂದ ಬಂದು ಹಳ್ಳಿ ಜೀವನ ಶೈಲಿ, ಗ್ರಾಮ್ಯ ಸಂಸ್ಕೃತಿ ಅರಿತು ಇಲ್ಲಿನ ಜನರೊಂದಿಗೆ ಬೆರೆಯುವುದು ಒಂದು ಸುಂದರ ಅನುಭವ. ಈ ಶಿಬಿರದಲ್ಲಿ ಪಾಲ್ಗೊಂಡಿದ್ದು ಬಹಳ ಖುಷಿ ಕೊಟ್ಟಿದೆ.
– ಅವನಿ ಶರ್ಮಾ
ವಿದ್ಯಾರ್ಥಿನಿ, ಮಹಾಲಸಾ ಚಿತ್ರಕಲಾ
ಶಾಲೆ, ಮಂಗಳೂರು ಸ್ವಂತಿಕೆಯ ಉದ್ದೇಶ
ಚಿತ್ರಕಲಾ ವಿದ್ಯಾರ್ಥಿಗಳಲ್ಲಿ ಸ್ವಂತಿಕೆ ಬೆಳೆಸುವುದು ಶಿಬಿರ ಉದ್ದೇಶವಾಗಿದೆ. ವಿಭಿನ್ನ ಆಲೋಚನೆ, ಕ್ರಿಯಾಶೀಲತೆ ಇವೆಲ್ಲವೂ ನಿಸರ್ಗದೊಂದಿಗೆ ಬೆರೆತಾಗ ಮಾತ್ರ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇದೊಂದು ಯಶಸ್ವಿ ಕಾರ್ಯಕ್ರಮ.
– ಸಯ್ಯದ್ ಆಸೀಫ್ ಅಲಿ
ಉಪನ್ಯಾಸಕರು, ಮಹಾಲಸಾ
ಚಿತ್ರಕಲಾ ಶಾಲೆ ವಿಶೇಷ ವರದಿ