Advertisement
ಪೇಟೆಯಲ್ಲಿ ಕೃತಕ ನೆರೆಯ ಭೀತಿ ಕಾಡುತ್ತಿದೆ. ಕಳೆದ ಬಾರಿ ಮುಂಗಾರು ಮಳೆಯ ಸಂದರ್ಭ ಪೇಟೆಯಲ್ಲಿ ಕೃತಕ ನೆರೆಯಿಂದ ಸಾರ್ವಜನಿಕರ ಸಹಿತ ವಾಹನ ಸವಾರರು ಹಲವು ರೀತಿಯ ತೊಂದರೆ ಎದುರಿಸಿದ್ದರು. ಇದಾಗಿ ಒಂದು ವರ್ಷ ಉರುಳಿ ಹೋದರೂ ಇಲಾಖೆ ಸ್ಪಂದಿಸಿಲ್ಲ. ತುರ್ತು ಕಾಮಗಾರಿ ನಡೆಸಲು ಅವಕಾಶಗಳು ಇದ್ದರೂ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.
ಸ್ಥಳೀಯ ಗ್ರಾ.ಪಂ. ಕಳೆದ ಹಲವು ವರ್ಷಗಳಿಂದ ಪೇಟೆ ಭಾಗದಲ್ಲಿ ಚರಂಡಿ ದುರಸ್ತಿ ಕಾರ್ಯ ನಡೆಸುತ್ತಿದೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಕೃತಕ ನೆರೆ ಉಂಟಾದ ಸಂದರ್ಭ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಿದೆ. ಇಲಾಖೆ ಮಾಡಬೇಕಾಗುವ ಕೆಲಸವನ್ನು ಪಂಚಾಯತ್ ಮಾಡುತ್ತಿದೆ. ಬದಲಾಗುತ್ತಿರುವ ಅಧಿಕಾರಿಗಳು
ಇಲಾಖೆಯ ಅಧಿಕಾರಿಗಳು ಬದಲಾಗುತ್ತಿರುವುದರಿಂದ ಪೇಟೆಯ ಸಮಸ್ಯೆಗಳು ಹಾಗೆಯೇ ಉಳಿದು ಕೊಂಡಿವೆೆ. ಕಳೆದ ವರ್ಷ ನೆಟ್ಟಣಿಗೆ ಮುಟ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಇದ್ದ ಪಿಡಬ್ಲೂéಡಿ ಅಧಿಕಾರಿ ವರ್ಗಾವಣೆ ಗೊಂಡಿದ್ದಾರೆ. ಬೇರೆ ಅಧಿಕಾರಿಗಳು ಈ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಳೆ ಗಾಲದಲ್ಲಿ ಈ ಸಮಸ್ಯೆ ಅವರ ಗಮನಕ್ಕೆ ಬರುತ್ತದೆ.
Related Articles
Advertisement
ಜನಪ್ರತಿನಿಧಿಗಳು ಸ್ಪಂದಿಸಲಿಈಶ್ವರಮಂಗಲ ಪೇಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಮಳೆಗಾಲ ಸದ್ಯದಲ್ಲೇ ಆರಂಭವಾಗಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಚರಂಡಿ ಹೂಳು ತೆಗೆಯುವ ಕೆಲಸವಾಗಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು ಎಂದು ಈಶ್ವರಮಂಗಲ ನವಚೇತನ ಮಿತ್ರ ವೃಂದದ ಅಧ್ಯಕ್ಷ ಪ್ರಶಾಂತ್ ನಾಯರ್ ಕುಂಟಾಪು ಅವರು ಹೇಳಿದರು. ಚರಂಡಿಯಲ್ಲಿ ಕಸಕಡ್ಡಿಗಳು
ಬೆಳೆಯುತ್ತಿರುವ ಪೇಟೆಯಲ್ಲಿ ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಕಸ ವಿಲೇವಾರಿಗೆ ಸರಿಯಾದ ವ್ಯವಸ್ಥೆಗಳನ್ನು ಮಾಡದೇ ಇರುವುದರಿಂದ ಪೇಟೆಯ ಸುತ್ತಮುತ್ತದ ಚರಂಡಿಗಳಲ್ಲಿ ಕಸಕಡ್ಡಿಗಳು ತುಂಬಿ ಹೋಗಿವೆೆ. ಕಳೆದ ಮಳೆಗಾಲದಲ್ಲಿ ಈಶ್ವರಮಂಗಲ ಪೊಲೀಸ್ ಚೆಕ್‌ಪೋಸ್ಟ್ ಬಳಿಯ ಮೋರಿಯಲ್ಲಿ ಹೂಳು ತುಂಬಿ ಕೃತಕ ನೆರೆ ಉಂಟಾಗಿತ್ತು. ಇದನ್ನು ಇನ್ನೂ ದುರಸ್ತಿ ಮಾಡಿಲ್ಲ. - ಮಾಧವ ನಾಯಕ್ ಕೆ.