Advertisement

Surathkal ಕೊಟ್ಟಾರ ಚೌಕಿ ಸರ್ಕಲ್‌ಗೆ ಕ್ಯಾ| ಪ್ರಾಂಜಲ್‌ ಹೆಸರು ?

12:06 AM Nov 27, 2023 | Team Udayavani |

ಸುರತ್ಕಲ್‌: ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗೆ ಹೋರಾಡಿ ದೇಶಕ್ಕಾಗಿ ಪ್ರಾಣವನ್ನೇ ಬಲಿದಾನಗೈದ ಕರುನಾಡಿನ ವೀರಯೋಧ ಕ್ಯಾಪ್ಟನ್‌ ಪ್ರಾಂಜಲ್‌ ಅವರ ಹೆಸರನ್ನು ಹೆದ್ದಾರಿ ಮತ್ತು ನಗರ ಸಂಪರ್ಕಿಸುವ ಪ್ರಮುಖವಾದ ಕೊಟ್ಟಾರ ಚೌಕಿ ಜಂಕ್ಷನ್‌ ಸರ್ಕಲ್‌ ಗೆ ಹೆಸರು ಇಡಲಾಗುವುದು ಎಂದು ಶಾಸಕ ಡಾ| ಭರತ್‌ ಶೆಟ್ಟಿ ವೈ. ಹೇಳಿದ್ದಾರೆ.

Advertisement

ಕೊಟ್ಟಾರಚೌಕಿಯಲ್ಲಿ ಅಮರ್‌ ಜವಾನ್‌ ಥೀಮ್‌ ಪಾರ್ಕ್‌ ನಿರ್ಮಾಣವಾಗಲಿದೆ. ಇದರ ಜತೆಗೆ ಸರ್ಕಲ್‌ಗೆ ಮಂಗಳೂರಿನಲ್ಲಿ ಕಲಿತು, ಬೆಳೆದು ಅವಿನಾಭಾವ ಸಂಬಂಧ ಹೊಂದಿರುವ ಕ್ಯಾ| ಪ್ರಾಂಜಲ್‌ ಹೆಸರಿಡುವುದು ಸೂಕ್ತವಾಗಿದೆ. ಈ ಬಗ್ಗೆ ಮಂಗಳೂರು ಪಾಲಿಕೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆದು ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಉತ್ತಮ ಜೀವನಕ್ಕಾಗಿ ಲಕ್ಷಾಂತರ ವೇತನ ಬರುವ ಬೇರೆ ಉದ್ಯೋಗವನ್ನು ಆರಿಸುವ ಬದಲು ಬಾಲ್ಯದಿಂದಲೇ ಸೈನ್ಯ ಸೇರಿ ದೇಶ ಸೇವೆ ಮಾಡುವ ಕ್ಯಾ| ಪ್ರಾಂಜಲ್‌ ಅವರ ನಿರ್ಧಾರ, ಅವರ ಸಾಹಸಗಾಥೆ ಯುವಶಕ್ತಿಗೆ ಪ್ರೇರಣೆಯಾಗಿದೆ. ಕುಟುಂಬಕ್ಕೆ ಅನಿರೀಕ್ಷಿತ ಆಘಾತವನ್ನು ಸಹಿಸುವ ಶಕ್ತಿ ದೇವರು ನೀಡಲಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿದಾಯಕ್ಕೆ ಜನಸಾಗರ
ಕುಟುಂಬದಿಂದ ಕೃತಜ್ಞತೆ
ಸುರತ್ಕಲ್‌: ಕಾಶ್ಮೀರದ ರಜೌರಿಯಲ್ಲಿ ನಡೆದ ಉಗ್ರರೊಂದಿಗಿನ ಕಾಳಗದಲ್ಲಿ ಕ್ಯಾ|ಪ್ರಾಂಜಲ್‌ ಅವರು ಹುತಾತ್ಮರಾಗಿದ್ದು, ಅವರ ಭಾವಪೂರ್ಣ ವಿದಾಯದ ವೇಳೆ ಭಾರೀ ಜನಸ್ತೋಮ ಸೇರಿ ಪ್ರೀತಿ ಅಭಿಮಾನ, ಗೌರವ ತೋರಿದ್ದು, ಮನತುಂಬಿ ಬಂದಿದೆ. ಪ್ರಾಂಜಲ್‌ ಕುಟುಂಬವು ಪ್ರತೀ ಭಾರತೀಯರಿಗೂ ಆಭಾರಿಯಾಗಿದೆ ಪ್ರಾಂಜಲ್‌ ಅವರ ತಂದೆ ಎಂ. ವೆಂಕಟೇಶ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next